ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಹಾಗೂ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಕಲ್ಯಾಣ್ ಜುವೆ ಲರ್ ತನ್ನ ಸ್ಟಾರ್-ಸ್ಟಡ್ ದೀಪಾವಳಿ ಅಭಿಯಾನವನ್ನು ಪ್ರಾರಂಭಿಸಿದೆ.
ಪ್ರಚಾರದ ಜಾಹೀರಾತು ಕಲ್ಯಾಣ ಜುವೆಲರ್ನ ರಾಯಭಾರಿಗಳಾದ ಅಮಿತಾಭ್ ಬಚ್ಚನ್, ಕತ್ರಿನಾ ಕೈಫ್, ಜಯಾ ಬಚ್ಚನ್, ಅಕ್ಕಿನೇನಿ ನಾಗಾರ್ಜುನ, ಶಿವರಾಜ್ ಕುಮಾರ್ ಮತ್ತು ಪ್ರಭು ಗಣೇಶನ್ ರಾಜಕುಮಾರ್, ರಶ್ಮಿಕಾ ಮಂದಣ್ಣ, ಕಲ್ಯಾಣಿ ಪ್ರಿಯಾದರ್ಶನ್ ಅವರು ವೈಯಕ್ತಿಕ ಸಂಪ್ರದಾಯಗಳು ಮತ್ತು ಪ್ರದೇಶ-ನಿರ್ದಿಷ್ಟ ಆಚರಣೆಗಳನ್ನು ಬಿಂಬಿಸುತ್ತಿದೆ. ಅಭಿಯಾನವು ಮಂಗಳಕರ ಸಮಯದಲ್ಲಿ ಕುಟುಂ ಬಗಳನ್ನು ಒಟ್ಟುಗೂಡಿಸುವ ಭಾರ ತದ ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರ ದಾಯಗಳನ್ನು ಪ್ರತಿನಿಧಿಸುತ್ತಿದೆ.
ದೀಪಾವಳಿ ಸಂಭ್ರಮದ ಪ್ರಯುಕ್ತ ಕಲ್ಯಾಣ್ 22-ಕ್ಯಾರೆಟ್ ಮತ್ತು 24-ಕ್ಯಾರೆಟ್‌ನ ಗಣೇಶ ಮತ್ತು ಲಕ್ಷ್ಮಿ ದೇವಿಯ ವಿನ್ಯಾಸದ ವಿಶೇಷ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡಿದೆ. ಈ ಸೀಮಿತ ಆವೃತ್ತಿಯ ನಾಣ್ಯಗಳು 2ರಿಂದ 8ಗ್ರಾಂ ವರೆಗೆ ವಿವಿಧ ತೂಕದಲ್ಲಿ ಲಭ್ಯವಿವೆ. ಇದು ಗ್ರಾಹಕರಿಗೆ ಕಸ್ಟಮೈಸ್ ಶಾಪಿಂಗ್ ಅನುಭವ ಒದಗಿಸುತ್ತದೆ. ಜತೆಗೆ 50 ಸಾವಿರ ಮೇಲ್ಪಟ್ಟ ಚಿನ್ನಾಭರಣ ಖರೀದಿಸುವವರಿಗೆ 1 ಗ್ರಾಂ ಚಿನ್ನದ ನಾಣ್ಯ ಸಿಗಲಿದೆ.
ದೀಪಾವಳಿ ಅಭಿಯಾನದ ಕುರಿತು ಕಲ್ಯಾಣ್ ಜುವೆಲರ್ ಕಾರ್ಯ ನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣ ರಾಮನ್ ಮಾತನಾಡಿ, ಈ ಬಾರಿ ದೀಪಾವಳಿ ಹಬ್ಬದ ಆಚರಣೆ ಅಭಿಯಾನವನ್ನು ಬಹಳ ಅರ್ಥಪೂರ್ಣವಾಗಿ ಆಚರಿ ಸಲು ಮುಂದಾಗಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರ ತೀಯ ಶ್ರೀಮಂತ ಸಂಸ್ಕೃತಿಯನ್ನು ಅಭಿಯಾನವು ಬಿಂಬಿ ಸಲಿದೆ. ಆಯಾ ಪ್ರದೇಶಗಳ ವೈಯಕ್ತಿಕ ಸಂಪ್ರದಾಯವನ್ನು ಪರಿಚಯಿಸಲು ಮುಂದಾಗಿದ್ದೇವೆ ಎಂದರು.