Advertisement

ಕಲ್ಯಾಣ್‌-ಡೊಂಬಿವಲಿ: 17 ಕಟ್ಟಡ ಸೀಲ್‌ಡೌನ್‌

01:27 AM Feb 27, 2021 | Team Udayavani |

ಕಲ್ಯಾಣ್‌: ಕಲ್ಯಾಣ್‌-ಡೊಂಬಿವಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 17 ಕಟ್ಟಡಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಐದಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳನ್ನು ಹೊಂದಿರುವ ಕಟ್ಟಡಗಳನ್ನು ಸೀಲ್‌ಡೌನ್‌ ಮಾಡಲು ಕೆಡಿಎಂಸಿ ಆಯುಕ್ತರು ನಿರ್ದೇಶನ ನೀಡಿದ್ದಾರೆ.

Advertisement

ಕೆಡಿಎಂಸಿ ಮಿತಿಯಲ್ಲಿನ ಕೋವಿಡ್‌ ಪ್ರಕರಣಗಳ ದೈನಂದಿನ ಪಾಸಿಟಿವ್‌ ಪ್ರಮಾಣವು ಕಳೆದ ವಾರದಿಂದ ಶೇ. 4.78ರಷ್ಟು ಹೆಚ್ಚಾಗಿದೆ. ಫೆ. 1ರಂದು ಶೇ. 3.57ರಷ್ಟಿದ್ದ ಪಾಸಿಟಿವ್‌ ಪ್ರಮಾಣವು ಈಗ ನಾಗರಿಕ ಆರೋಗ್ಯ ಇಲಾಖೆಯ ಪ್ರಕಾರ ಶೇ. 8.35ರಷ್ಟಿದೆ. ಅಂತೆಯೇ ಸಕ್ರಿಯ ಪ್ರಕರಣಗಳ ಪ್ರಮಾಣವು ಶೇ. 0.85ರಷ್ಟು ಹೆಚ್ಚಾಗಿದೆ. ಒಂದು ಕಟ್ಟಡವು ಒಂದು ಸಮಯದಲ್ಲಿ  ಐದು ಕೋವಿಡ್‌ ರೋಗಿಗಳನ್ನು ಹೊಂದಿದ್ದರೆ, ಕಟ್ಟಡವನ್ನು ಸೀಲ್‌ಡೌನ್‌ ಮಾಡಲಾಗುವುದಲ್ಲದೆ, ಆ ಕಟ್ಟಡಗಳಲ್ಲಿನ ಜನರ ಚಲನೆಯನ್ನು 14 ದಿನಗಳವರೆಗೆ ನಿರ್ಬಂಧಿಸಲಾಗುತ್ತದೆ. ಕಲ್ಯಾಣ್‌ನ ಕೇಟೆಮನಿವಲಿ, ವಿಜಯನಗರ, ಆಗ್ರಾ ರಸ್ತೆ ಮತ್ತು ಡೊಂಬಿವಲಿಯ ಠಾಕೂರ್ಲಿ 90 ಫೀಟ್‌ ರಸ್ತೆಯಲ್ಲಿ 17 ಕಟ್ಟಡಗಳಿಗೆ ಮೊಹರು ಹಾಕಿದ್ದೇವೆ. ಕಟ್ಟಡದ ನಿವಾಸಿಗಳ ಮೇಲೆ ನಿಗಾ ಇಡುತ್ತೇವೆ ಎಂದು ಕೆಡಿಎಂಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡೊಂಬಿವಲಿ ಪೂರ್ವದಲ್ಲಿ ಅತೀಹೆಚ್ಚು 18,497 ಪ್ರಕರಣಗಳು ಮತ್ತು ಕಲ್ಯಾಣ್‌ ಪಶ್ಚಿಮದಲ್ಲಿ 18,277 ಪ್ರಕರಣಗಳನ್ನು ಹೊಂದಿದೆ. ಡೊಂಬಿವಲಿ ಪೂರ್ವದ ಕ್ರಾಂತಿನಗರ ಕೊಳೆಗೇರಿಯಿಂದ ಕೋವಿಡ್‌ನ‌ ಒಂದು ಹೊಸ ಪಾಸಿಟಿವ್‌ ಪ್ರಕರಣ ವರದಿಯಾಗಿದೆ. ಇದನ್ನು ಅನುಸರಿಸಿ, ಕೆಡಿಎಂಸಿ 25 ನಿವಾಸಿಗಳ ಮೇಲೆ ಆರ್‌ಟಿ ಪಿಸಿಆರ್‌ ಪರೀಕ್ಷೆಗಳನ್ನು ನಡೆಸಿದ್ದು, ಇಬ್ಬರಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next