Advertisement
ಕಲ್ಯಾ ಮಲ್ಲಯಬೆಟ್ಟು ಕುಂಟಾಡಿ ಸಂಪರ್ಕ ರಸ್ತೆ ಅವಿಭಜಿತ ಪಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಂದರ್ಭ 8 ವರ್ಷಗಳ ಹಿಂದೆ ಡಾಮರೀಕರಣಗೊಂಡಿತ್ತು. ಒಟ್ಟು 4.56 ಕಿಮೀ ಉದ್ದವನ್ನು ಹೊಂದಿದ್ದು, ರೂ. 1.54 ಕೋಟಿ ವೆಚ್ಚದಲ್ಲಿ ಡಾಮರು ಕಂಡಿತ್ತು. ಆದರೆ ಮಧ್ಯೆ ಸುಮಾರು 400 ಮೀ. ವ್ಯಾಪ್ತಿಯಲ್ಲಿ ಡಾಮರು ಹಾಕಲು ಅರಣ್ಯ ಇಲಾಖೆ ಅಡ್ಡಿಯಾಗಿತ್ತು. ಆ ಸಂದರ್ಭ ಪಂಚಾಯತ್ ಅಧ್ಯಕ್ಷರು ಕಾಮಗಾರಿ ನಡೆಸಲು ಅರಣ್ಯ ಇಲಾಖೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಅದರಂತೆ ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ನಿರ್ಣಯ ಕೈಗೊಂಡು ಅದರ ಪ್ರತಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಲಾಗಿತ್ತು. ಆದರೆ ಆ ಬಳಿಕ ಇಲಾಖೆ ಯಾವುದೇ ಕ್ರಮ ಕೈಗೊ ಂಡಿಲ್ಲ.
Related Articles
Advertisement
ಈ ರಸ್ತೆಯ ಮೂಲಕ ಕಲ್ಲಿನ ಕೋರೆಗಳ ಲಾರಿಗಳು ಸಂಚರಿಸುತ್ತಿದ್ದು, ಸುರಕ್ಷತೆ ನಿಯಮಗಳನ್ನು ಹೊಂದಿಲ್ಲ ದಿರುವುದು ಜನರಿಗೆ ಭೀತಿ ಉಂಟುಮಾಡಿದೆ. ವಾಹನ ಸಂಚಾರ ಬಗ್ಗೆ ನಿಷೇಧ ಫಲಕ ಅಳವಡಿಸಲಾಗಿದ್ದರೂ ಸಂಚಾರ ನಿಂತಿಲ್ಲ.