Advertisement
ಕಳೆದ ವರ್ಷ ಇಲಾಖೆ ಅನುದಾನ ಬಿಡುಗಡೆ ಮಾಡಿದ್ದರೂ, ಕಾಮಗಾರಿ ಅನುಷ್ಠಾನಕ್ಕೆ ವಿಳಂಬ ವಾಗಿರುವುದರಿಂದ ಕಾಲ್ತೋಡು ಗ್ರಾ.ಪಂ. ವ್ಯಾಪ್ತಿಯ ಬೋಳಂಬಳ್ಳಿ ಸಮೀಪದ ಹೊಸಾಡು ಜನರು ಆತಂಕದಿಂದಲೇ ಹೊಳೆ ದಾಟಬೇಕಾಗಿದೆ.
Related Articles
Advertisement
ಈ ಭಾಗದ 40ಕ್ಕೂ ಹೆಚ್ಚು ಕುಟುಂಬಗಳು ಹೊಸಾಡು, ಕಾಡಿನಹೊಳೆ, ಮುತ್ತಣ್ಕಿ, ಕೇಂಜಿ, ಕೂಡಾಲು ಭಾಗದ ಜನರು ಕಾಲ್ತೋಡಿಗೆ ತೆರಳ ಬೇಕಾದರೆ ಹೊಳೆ ದಾಟಿಯೇ ಹೋಗಬೇಕಾಗಿದೆ.
ನಾಲ್ಕು ವರ್ಷಗಳ ಹಿಂದೆ ಇದ್ದ ಕಾಲು ಸಂಕ ನೀರುಪಾಲಾಗಿದ್ದು, ತಾತ್ಕಾಲಿಕವಾಗಿ ಸ್ಥಳೀಯರೇ ಕಾಲು ಸಂಕ ನಿರ್ಮಿಸಿಕೊಂಡಿದ್ದಾರೆ.
ಹೊಸಾಡು -ಬೋಳಂಬಳ್ಳಿ ನಡುವೆ ಹರಿಯುವ ಸುಮನಾವತಿಯ ಉಪನದಿ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಜನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ.
ದೊಡ್ಡ ಮಳೆ ಬಂದರೆ ಮಕ್ಕಳು ಶಾಲೆಗೆ ತೆರಳುವಂತಿಲ್ಲ. ಪ್ರತಿದಿನ ಪಾಲಕರಿಗೆ ಮಕ್ಕಳನ್ನು ಹೊಳೆ ದಾಟಿಸಿ ಬರುವುದೇ ದೊಡ್ಡ ಕೆಲಸವಾಗಿದೆ.