Advertisement
ರಾಕೇಶ್ ಅವರು ಮೇ 12ರಂದು ಬೆಳಗ್ಗೆ 11.30ಕ್ಕೆ ಮನೆಗೆ ಬೀಗ ಹಾಕಿ ಪತ್ನಿ ಜತೆ ಕಾರ್ಯಕ್ರಮಕ್ಕೆ ತೆರಳಿದ್ದು ಮಧ್ಯಾಹ್ನ 3.30ಕ್ಕೆ ವಾಪಸ್ ಬಂದಾಗ ಕಳ್ಳರು ಮನೆಯ ಬಾಗಿಲು ಮುರಿದಿರುವುದು ಗಮನಕ್ಕೆ ಬಂತು. ಮನೆಗ ಒಳಗಡೆ ನೋಡಿದಾಗ ಕಪಾಟಿನ ಬಾಗಿಲನ್ನು ಒಡೆದು ಅದರಲ್ಲಿದ್ದ 3.75 ಲಕ್ಷ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ವಸ್ತು¤ಗಳನ್ನು ಕಳವು ಮಾಡಿರುವುದು ತಿಳಿಯಿತು. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೆಬ್ರಿ: ಸಂತೆಕಟ್ಟೆ 38ನೇ ಕಳ್ತೂರು ಬಟ್ಟಂಬಳ್ಳಿ ನಿವಾಸಿ ಮಂಜುನಾಥ (60) ಜೀವನದಲ್ಲಿ ಜುಗುಪ್ಸೆಗೊಂಡು ಮೇ 12ರ ಮಧ್ಯರಾತ್ರಿ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ಠಾಣೆಯಲ್ಲಿ ದಾಖಲಾಗಿದೆ.