Advertisement

ಬರಲಿದೆ ಕಬ್ಬಿನ ಹಾಲಿನ ಮಾದರಿಯ ಕಲ್ಪರಸ : ತೆಂಗಿನ ಹೊಸ ಉತ್ಪನ್ನ

10:32 PM Mar 14, 2021 | Team Udayavani |

ಉಡುಪಿ: ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳು ಹೊರಬರುತ್ತಿವೆ.
ಉಡುಪಿ ಜಿಲ್ಲಾ ಭಾರತೀಯ ಕಿಸಾನ್‌ ಸಂಘದ ಮಾರ್ಗದರ್ಶನದಲ್ಲಿ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಬಾರ ಉತ್ಪಾದಕರ ಕಂಪೆನಿ (ಉಕಾಸ) ಇದಕ್ಕಾಗಿ ಸಿದ್ಧತೆ ನಡೆಸುತ್ತಿದೆ. ಕಾಸರಗೋಡಿನ ಸಿಪಿಸಿಆರ್‌ಐ ಇದರ ಉತ್ಪಾದನೆಯನ್ನು ಕಂಡುಹಿಡಿದಿದ್ದು, ಜಿಲ್ಲಾ ಭಾರತೀಯ ಕಿಸಾನ್‌ ಸಂಘ ಮಾರ್ಗದರ್ಶನವೂ ಇದೆ.

Advertisement

ಇದು ಕಬ್ಬಿನರಸ ಮಾದರಿಯ ಪಾನೀಯವಾಗಿದೆ. ಇದರಲ್ಲಿ ಕಬ್ಬಿಣ, ವಿಟಮಿನ್‌ನಂತಹ ಅತ್ಯುತ್ತಮ ಪೋಷಕಾಂಶಗಳಿವೆ. ಮಧುಮೇಹಿಗಳೂ ಕುಡಿಯಬಹುದು. ರಾಗಿಗಿಂತಲೂ ಸೂಕ್ತ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಉಡುಪಿ ಜಿಲ್ಲೆಯ 54 ತೆಂಗು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಮೊದಲ ಹಂತದಲ್ಲಿ ಅವಕಾಶ ನೀಡಲಾಗುತ್ತಿದೆ. ಒಟ್ಟು 1,000 ರೈತರನ್ನು ಷೇರುದಾರರನ್ನಾಗಿ ಸಂಯೋಜಿಸಲಾಗಿದೆ. ಆರಂಭದಲ್ಲಿ ಪ್ರತಿ ರೈತರಿಗೆ ಎಂಟು ತೆಂಗಿನ ಮರಗಳಿಂದ ಕಲ್ಪರಸ ಸಂಗ್ರಹಿಸಲು ಅವಕಾಶ ಕಲ್ಪಿಸಲಾ ಗಿದೆ. ಅಬಕಾರಿ ಇಲಾಖೆಯಿಂದ ಕಲ್ಪರಸ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟ ಹಾಗೂ ಅದರ ಉಪ ಉತ್ಪನ್ನಗಳ ತಯಾರಿಕೆಗೆ ತಾತ್ವಿಕ ಪರವಾನಿಗೆ ಪಡೆಯಲಾಗಿದೆ. ಭದ್ರಾವತಿಯಲ್ಲಿ ಇಂತಹ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು ಉಡುಪಿಯದ್ದು ರಾಜ್ಯದಲ್ಲಿ ಎರಡನೆಯದು.

ತೆಂಗು ಬೆಳೆಗಾರರ ಆದಾಯ ವರ್ಧನೆಗೆ ಇದೊಂದು ಸೂಕ್ತ ಮಾರ್ಗ ಎಂಬುದನ್ನು ಕಂಡುಕೊಳ್ಳಲಾಗಿದೆ. ಸದ್ಯ ಕುಂದಾಪುರ ತಾಲೂಕಿನ ಜಫ್ತಿಯಲ್ಲಿ ಸುಮಾರು ಎರಡು ಎಕ್ರೆ ಜಾಗವನ್ನು ಲೀಸ್‌ಗೆ ಪಡೆದು ಬೇಕಾದ ಮೂಲಸೌಕರ್ಯವನ್ನು ಕಲ್ಪಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಜಫ್ತಿ ಸತ್ಯನಾರಾಯಣ ಉಡುಪ ತಿಳಿಸುತ್ತಾರೆ. ಪ್ರತೀ ಮರದಿಂದ ದಿನವೊಂದಕ್ಕೆ ಸರಾಸರಿ ಕನಿಷ್ಠ 1.5 ಲೀ.ನಿಂದ ಗರಿಷ್ಠ 2.5 ಲೀ. ಕಲ್ಪರಸ ತೆಗೆಯಲು ಸಾಧ್ಯ. ವರ್ಷದ 365 ದಿನವೂ ಕಲ್ಪರಸ ತೆಗೆಯಲು ಅವಕಾಶವಿದೆ.

ರೈತನ ಆದಾಯ ವೃದ್ಧಿ
ಪ್ರತಿ ರೈತನ ಎಂಟು ಮರಗಳಿಂದ ವರ್ಷಕ್ಕೆ 1 ಲ.ರೂ. ಆದಾಯ ಸಿಗ ಬಹುದು. ಸುಮಾರು 1,000 ರೈತರಿಗೆ 500 ಟ್ಯಾಪರ್ ಬೇಕಾಗುತ್ತದೆ. ಇವರಿಗೆ ತಿಂಗಳಿಗೆ 20ರಿಂದ 25,000 ರೂ. ಆದಾಯ ನಿರೀಕ್ಷಿಸಲಾಗಿದೆ. 200 ಮಿ.ಲೀ.ಗೆ ಒಂದು ಎಳನೀರಿನ ಬೆಲೆಯಂತೆ 30 ರೂ. ಬೆಲೆ ನಿಗದಿಪಡಿಸಲು ನಿರ್ಧರಿಸಲಾಗಿದೆ. ಸದ್ಯ ಕಬ್ಬಿನ ಹಾಲಿನ ಮಾದರಿಯಲ್ಲಿ ಕೊಡಲಾಗುತ್ತದೆಯಾದರೂ ಮುಂದಿನ ದಿನಗಳಲ್ಲಿ ಟೆಟ್ರಾ ಪ್ಯಾಕ್‌, ಫ‌ೂÅಟಿ ಮಾದರಿಯಲ್ಲಿ ಪೂರೈಸಲು ಚಿಂತನೆ ನಡೆಸಲಾಗುತ್ತಿದೆ.

Advertisement

ಉಪಯೋಗಗಳು
– ಕಣ್ಣು ಹಾಗೂ ಚರ್ಮದ ಆರೋಗ್ಯಕ್ಕೆ ಉತ್ತಮ ಪೇಯ.
– ಕರುಳು ಸಂಬಂಧಿತ, ಮೂತ್ರಕೋಶದ ಕಾಯಿಲೆ ಗುಣಪಡಿಸುವ ಶಕ್ತಿ.
– ಜೀರ್ಣಕ್ರಿಯೆ ಉತ್ತಮಗೊಳಿಸಿ ಮಲಬದ್ಧತೆ ನಿವಾರಣೆಗೆ ಸಹಕಾರಿ.
– ಹೇರಳವಾಗಿ ವಿಟಮಿನ್‌ ಎ, ಬಿ, ಸಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next