Advertisement
ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ದಾಸನದೊಡ್ಡಿಯ ಗ್ರಾಮದ ಬಳಿ ಇರುವ ಕುಂದನ ಬೆಟ್ಟದಲ್ಲಿ ಕಾಮೇಗೌಡರು ಸ್ವಂತ ಖರ್ಚಿನಲ್ಲಿ ಸುಮಾರು 14ಕ್ಕೂ ಹೆಚ್ಚು ಕಟ್ಟೆಗಳನ್ನು ನಿರ್ಮಿಸಿದ್ದರು.
ಮೊದಲು ತಾವೇ ಸ್ವತಃ ಕೈಯಿಂದಲೇ ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ನಂತರ ತಾವು ಸಾಕಿದ್ದ ಕುರಿಗಳನ್ನು ಮಾರಿ ಜೆಸಿಬಿ ಮೂಲಕ ಹಲವು ಕಟ್ಟೆಗಳನ್ನು ನಿರ್ಮಿಸಿದ್ದರು.
ಇದರಿಂದ ಪ್ರಾಣಿ, ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲೂ ನೀರು ಸಿಗುವಂತೆ ಮಾಡಿದ್ದರು. ಅಲ್ಲದೆ ಅಂತರ್ಜಲ ವೃದ್ಧಿಗೂ ಕಾರಣರಾಗಿದ್ದರು. ಜೊತೆಗೆ ಕಟ್ಟೆಗಳ ಸುತ್ತ ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿ ವಹಿಸಿದ್ದರು.
Related Articles
ಕಲ್ಮನೆ ಕಾಮೇಗೌಡರ ಕಾರ್ಯವನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ್ದರು. ಇದರಿಂದ ಕಾಮೇಗೌಡರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.
Advertisement
ವಿ.ವಿ.ಎಸ್.ಲಕ್ಷ್ಮಣ್ ಮೆಚ್ಚುಗೆ:ಖ್ಯಾತ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ಕೂಡ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗೌರವ ಪ್ರಶಸ್ತಿ:
ಇವರ ಕಾರ್ಯಕ್ಕೆ ರಾಜ್ಯಾದ್ಯಂತ ವಿವಿಧ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. ಸಂಘ ಸಂಸ್ಥೆಗಳು ನಗದು ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದವು. ಸರ್ಕಾರ, ಜಿಲ್ಲಾಡಳಿತ ಇವರ ಸೇವೆಗೆ ಜೀವಿತಾವಧಿವರೆಗೂ ಸಂಚಾರಕ್ಕೆ ಸಾರಿಗೆ ಪಾಸ್ ನೀಡಿತ್ತು. ಮನೆ ನಿರ್ಮಿಸಿಕೊಡುವ ಭರವಸೆ ನೀಡಿತ್ತು. ಇದನ್ನೂ ಓದಿ : ದೇವಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯ ಮದುವೆ : 2 ಅರ್ಚಕರು ಸೇರಿ ಮೂವರ ಬಂಧನ