Advertisement

ಕಲ್ಲಮುಟ್ಲು ಶಾಶ್ವತ ಕಿಂಡಿ ಅಣೆಕಟ್ಟು ಎಂದು?  ದಶಕದ ಬೇಡಿಕೆ ಇನ್ನೂ ಈಡೇರಿಲ್ಲ

11:22 PM Feb 25, 2021 | Team Udayavani |

ಸುಳ್ಯ : ನಗರಕ್ಕೆ ಪ್ರತೀ ಬೇಸಗೆಯಲ್ಲಿ ಮರಳುಚೀಲದ ಕಟ್ಟ ಕಟ್ಟಿ ನೀರು ಪೂರೈಕೆ ಮಾಡುತ್ತಿರುವ ಕಲ್ಲಮುಟ್ಲು ಪರಿಸ ರದಲ್ಲಿ ಶಾಶ್ವತ ಕಿಂಡಿ ಅಣೆಕಟ್ಟಿನ ಬೇಡಿಕೆ ಈವರೆಗೆ ಬೇಡಿಕೆಯಾಗಿಯೇ ಉಳಿದಿದೆ.

Advertisement

ಇಲ್ಲಿ ಪೂರ್ಣ ಪ್ರಮಾಣದ ಕಿಂಡಿ ಅಣೆ ಕಟ್ಟಾದರೆ ನೀರು ಪೋಲಾಗುವುದು ಕಡಿಮೆಯಾಗಿ ನಗರ ಪಂಚಾಯತ್‌ ವ್ಯಾಪ್ತಿಯ ನೀರಿನ ಸಮಸ್ಯೆಗೂ ಮುಕ್ತಿ ದೊರೆಯಲಿದೆ ಎಂಬುದು ತಜ್ಞರ ಅಭಿಪ್ರಾಯ.

ಸದ್ಯ ಹಲವು ಕಡೆಗಳಿಗೆ ಬೋರ್‌ವೆಲ್‌ ನಿಂದ ನೀರನ್ನು ನಗರ ಪಂಚಾಯತ್‌ ನೀಡುತ್ತಿದೆ. ಈಗ ಹಲವೆಡೆ ಬೋರ್‌ವೆಲ್‌ನಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿ ಸಮಸ್ಯೆ ತಲೆದೋರಿದೆ. ಬೋರ್‌ವೆಲ್‌ ನೀರು ಪೂರೈಕೆಯು ನ.ಪಂ.ಗೆ ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತಿದೆ. ಇದರ ತಡೆಗೆ ಶಾಶ್ವತ ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ಅನುಕೂಲವಾಗಲಿದೆ.

ಹತ್ತು ವರ್ಷಗಳ ಹಳೆಯ ಬೇಡಿಕೆ
10 ವರ್ಷಗಳಿಂದಲೂ ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಬೇಕೆಂಬ ಬೇಡಿಕೆ ಇದೆ. ಈಗೀಗ ಪಶ್ಚಿಮ ವಾಹಿನಿ ಯೋಜನೆ ಯಲ್ಲಿ ಜಿಲ್ಲೆಯ ಹಲವು ಕಡೆ ಕಿಂಡಿ ಅಣೆ ಕಟ್ಟಿಗೆ ಅನುದಾನ ಮಂಜೂರಾಗಿದ್ದರೂ ಕಲ್ಲುಮುಟ್ಲುವಿನಲ್ಲಿ ಕಿಂಡಿ ಅಣೆಕಟ್ಟೆಗೆ ಅನುದಾನ ಮಂಜೂರಾಗಿಲ್ಲ. ಇದೀಗ ಶಾಸಕ ಅಂಗಾರ ಸಚಿವರಾಗಿದ್ದು, ಬೇಡಿಕೆ ಈಡೇರುವ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.
ಸುಳ್ಯ ನಗರಕ್ಕೆ ನೀರು ಪೂರೈಕೆ ಮಾಡುವ ಈಗಿನ ಜಾಕ್‌ವೆಲ್‌ ಹಳೆಯದಾಗಿದ್ದು, ನೂತನ ಜಾಕ್‌ವೆಲ್‌ ನಿರ್ಮಾಣ ಶೀಘ್ರ ಆರಂಭಿಸಲಾಗುವುದು ಎಂದು ಸಂಬಂಧಿ ತರು ಹೇಳುತ್ತಿದ್ದಾರೆ. ಇದರಿಂದ ನೀರಿನ ಪಂಪಿಂಗ್‌ ಸಾಮರ್ಥ್ಯ ಹೆಚ್ಚಾಗಲಿದೆ. ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ಹರಿಯುವ ನೀರು ಮತ್ತಷ್ಟು ಸದ್ಬಳಕೆ ಆಗಲಿದೆ.

ನಿರೀಕ್ಷೆಯಿದೆ
ನ.ಪಂ. ವತಿಯಿಂದ ಜಲಜೀವನ್‌ ಹಾಗೂ ಪಶ್ಚಿಮ ವಾಹಿನಿ ಯೋಜನೆಯ ಮೂಲಕ ಅಣೆಕಟ್ಟು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಈ ಸಾಲಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯ ಮುಖೇನ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ.
– ವಿನಯ್‌ ಕುಮಾರ್‌ ಕಂದಡ್ಕ, ಅಧ್ಯಕ್ಷರು, ನ.ಪಂ. ಸುಳ್ಯ

Advertisement

ಶೀಘ್ರ ಆರಂಭಿಸಬೇಕು
ನಗರದಲ್ಲಿ ನೀರಿನ ಅಭಾವವಿದ್ದು ಬೋರ್‌ವೆಲ್‌ನ ನೀರು ಕಡಿಮೆ ಯಾಗಿದೆ. ಪಯಸ್ವಿನಿ ನೀರಿನ ಸಂಗ್ರಹಕ್ಕೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ನ.ಪಂ. ಆಡಳಿತ ಶೀಘ್ರ ಅನುದಾನ ತರಿಸಿ ಕಾಮಗಾರಿ ಆರಂಭಿಸಬೇಕು.
– ವೆಂಕಪ್ಪ ಗೌಡ, ನ.ಪಂ. ವಿಪಕ್ಷ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next