Advertisement

ತಲವಾರು ಸಂಸ್ಕೃತಿ ನಮ್ಮದಲ್ಲ: ಡಾ|ಕಲ್ಲಡ್ಕ ಪ್ರಭಾಕರ ಭಟ್‌

02:40 AM Mar 31, 2022 | Team Udayavani |

ಉಳ್ಳಾಲ: ಪಠ್ಯಕ್ರಮದಲ್ಲಿ ಭಾರತವನ್ನು ಹಿಂದೂಸ್ಥಾನ ಎಂದು ಕರೆದರೆ ಕೆಲವರಿಗೆ ಮೈ ಉರಿಯು ತ್ತದೆ. ಇಲ್ಲಿ ಕೆಲವರು ತಮ್ಮನ್ನು ತಾವು ಎಡಪಂಥೀಯರು ಎಂದು ಬಿಂಬಿಸಿ ಕೊಂಡು ದೇಶದ ವಿರುದ್ಧ ವಿಷಬೀಜ ಬಿತ್ತುವ ಕೆಲಸವನ್ನು ನಡೆಸುತ್ತಿದ್ದಾರೆ. ತಲವಾರು ಹಿಡಿದು ಬಲವಂತ ಮಾಡುವ ಸಂಸ್ಕೃತಿ ಭಾರತದಲ್ಲಿಲ್ಲ. ದೇಶ ಸರ್ವಶ್ರೇಷ್ಠವಾಗಬೇಕಾದರೆ ಪಾಶ್ಚಾತ್ಯ ದೇಶದ ಬಗೆಗಿನ ಒಲವು ಕಡಿಮೆಯಾಗಬೇಕು ಎಂದು ಆರ್‌ಎಸ್‌ಎಸ್‌ ಪ್ರಮುಖ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.

Advertisement

ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ಮೈದಾನದಲ್ಲಿ ಬುಧ ವಾರ ನಡೆದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ 2021-22ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್‌ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿ.ವಿ. ಉಪಕುಲಪತಿ ಡಾ| ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿ ದ್ದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ| ಕಿಶೋರಿ ನಾಯಕ್‌ ಕೆ. ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್‌ ಅಧ್ಯಕ್ಷ ಸಂಪತ್‌ ಬಿ., ಪದಾಧಿಕಾರಿಗಳಾದ ವೇದಾಂತ ಮುತ್ತಮ್ಮ, ಕಾರ್ತಿಕ್‌ ಲಕ್ಷಣ್‌, ಸ್ಕಂದ, ಸೃಷ್ಟಿ, ಕಾರ್ತಿಕ್‌ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಕೌಶಿಕ್‌ ಜಿ.ಎನ್‌., ಅಕ್ಷಯ್‌ ಕುಮಾರು ಕಾರ್ಯ ಕ್ರಮ ನಿರೂಪಿಸಿದರು.

ಇದನ್ನೂ ಓದಿ:ವಿಧಾನ ಮಂಡಲ ಅಧಿವೇಶನ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ

Advertisement

ಸಿಎಫ್ಐ ಪ್ರತಿಭಟನೆ
ವಿದ್ಯಾರ್ಥಿ ಪರಿಷತ್‌ನ ಉದ್ಘಾಟನೆಗೆ ಡಾ| ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವಿ.ವಿ. ಕ್ಯಾಂಪಸ್‌ನೊಳಗೆ ನುಗ್ಗಲು ಯತ್ನಿಸಿದರು. ಪೊಲೀಸರು ಅವರನ್ನು ಪ್ರವೇಶ ದ್ವಾರದಲ್ಲೇ ತಡೆಹಿಡಿದಿದ್ದು, ಬಳಿಕ ಮುಖ್ಯದ್ವಾರದಲ್ಲೇ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನಡುವೆಯೇ ವಿದ್ಯಾರ್ಥಿ ಪರಿಷತ್‌ ಅನ್ನು ಡಾ| ಭಟ್ಟರು ಉದ್ಘಾಟಿಸಿದರು.

ಸಿಎಫ್‌ಐಗೆ ಭಟ್‌ ಧನ್ಯವಾದ!
ಉದ್ಘಾಟನೆಯ ಬಳಿಕ ಡಾ| ಭಟ್ಟರು ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ವಿರುದ್ಧ ಪ್ರತಿಭಟನೆ ಮಾಡಿದ ಸಿಎಫ್‌ಐ ಕಾರ್ಯಕರ್ತರಿಗೆ ಧನ್ಯವಾದ. ಯಾರು ದೇಶಕ್ಕೋಸ್ಕರ ಕೆಲಸ ಮಾಡುತ್ತಾರೋ ಅವರು ಆ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ವಿರೋಧಿಸುವವರು ವಿರೋಧಿಸುತ್ತಾ ಹೋಗುತ್ತಾರೆ. ಈ ದೇಶದಲ್ಲಿ ಬದುಕಿದ್ದರೆ, ಬದುಕ ಬೇಕೆಂದು ಇದ್ದರೆ, ಸಾಮರಸ್ಯ ಬೇಕಾ ಗಿದ್ದರೆ ದೇಶಕ್ಕೋಸ್ಕರ ಬದುಕಿ. ಇಲ್ಲದಿದ್ದರೆ ಎಲ್ಲಿ ಬೇಕಾದರೂ ಹೋಗಿ ಸಮಸ್ಯೆ ಇಲ್ಲ ಎಂದರು.

ಜತೆಗೂಡಿ ಬದುಕಿ
ನನ್ನ ಭಾಷಣದಲ್ಲಿ ನಾನು ಕೋಮು ದ್ವೇಷ ಹರಡಿಸಿಲ್ಲ. ಹಿಂದೂ ಅನ್ನೋದು ಕೋಮುವಾ? ಅದು ಈ ದೇಶದ ಹೆಸರು. ಭಾರತದ ಭಾರತೀಯರು ಹಿಂದೂಗಳು, ಕೋಮು ಎನ್ನುವ ಪ್ರಶ್ನೆ ಇಲ್ಲ. ಇಲ್ಲಿ ಹಿಂದೂಗಳ ಜತೆಗೆ
ಎಲ್ಲರೂ ಬದುಕುವ ಪ್ರಯತ್ನ ಮಾಡಿ. ಜಗತ್ತಿನಲ್ಲಿ ದೊಡ್ಡ ಸೆಕ್ಯೂ ಲರ್‌ಗಳು ಹಿಂದೂಗಳೇ. ನಾವು ಸತ್ಯ ಮಾತನಾಡುತ್ತೇವೆ, ಅಪ ರಾಧಿ ಗಳನ್ನು ವಿ.ವಿ.ಗೆ ಕರೆಸುವ ವಿಚಾರದಲ್ಲಿಪ್ರತಿಕ್ರಿಯಿಸಿದ ಅವರು ಕೇಸು ಯಾರ ಮೇಲೆ ಯಾರು ಬೇಕಾ ದರೂ ಹಾಕಬಹುದು. ಇದರಲ್ಲಿ ಕೇಸು ಬಿದ್ದರೆ ಆರೋಪಿ ಮಾತ್ರ, ಅಪರಾಧಿ ಅಲ್ಲ. ನನ್ನ ಮೇಲೆ ನೂರಕ್ಕೂ ಮಿಕ್ಕಿ ಕೇಸ್‌ ಇದೆ. ಮೋದಿ, ಅಮಿತ್‌ ಶಾ ಮೇಲೂ ಕೇಸ್‌ ಇದೆ, ಅವರು ಅಪರಾಧಿಗಳಾ? ನನಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ ಎಂದರು.

ನೈಜ ಹೀರೋಗಳ ಬಗ್ಗೆ ಮಕ್ಕಳಿಗೆ ತಿಳಿಸೋಣ
ನಮ್ಮ ಪಠ್ಯಕ್ರಮದಲ್ಲಿ ಅಕºರ್‌, ಔರಂಗಜೇಬ್‌ನಂತವರನ್ನು ಹೀರೋ ಗಳಾಗಿ ಚಿತ್ರಿಸಿದ್ದೇವೆ ಆದರೆ ನಿಜವಾದ ಹೀರೋಗಳು ಶಿವಾಜಿ ರಾಣಾಪ್ರತಾಪ್‌ ಸಿಂಹನಂತವರು ಆಂತವರ ವಿಚಾರ ಗಳನ್ನು ಪಠ್ಯಕ್ರಮದಲ್ಲಿ ಅಳವಡಿಸದೆ ದೇಶವಿರೋ ಗಳ ಚಿತ್ರಣವನ್ನೇ ಇಲ್ಲಿ ಕಲಿಸಲಾಗುತ್ತಿದೆ. ಜನರಿಗೆ ನಿಜವಾದ ಇತಿಹಾಸವನ್ನು ತಿಳಿಸುವ ಕಾರ್ಯ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ಡಾ| ಭಟ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next