Advertisement

ಕಾಲಿಖೋ ಪುಲ್‌ ಸಾವಿನ ಸಿಬಿಐ ತನಿಖೆ ಆಗ್ರಹಿಸಿ ಸಿಜೆಐಗೆ ಪತ್ನಿಯ ಪತ್ರ

04:58 PM Feb 17, 2017 | Team Udayavani |

ಹೊಸದಿಲ್ಲಿ : ಕಳೆದ ವರ್ಷ ಆಗಸ್ಟ್‌ 9ರಂದು, ತಾನಿನ್ನೂ ತೆರವು ಮಾಡಿರದ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಅರುಣಾಚಲ ಪ್ರದೇಶದ ಅಂದಿನ ಪದಚ್ಯುತ ಮುಖ್ಯಮಂತ್ರಿ ಕಾಲಿಖೋ ಪುಲ್‌ ಅವರ ಶಂಕಾಸ್ಪದ ಸಾವಿನ ತನಿಖೆಯನ್ನು ಸಿಬಿಐ ನಡೆಸಬೇಕು ಎಂದು ಪುಲ್‌ ಅವರ ಪತ್ನಿ ದಾಂಗ್‌ವಿಮ್‌ಸಾಯಿ ಪುಲ್‌ ಅವರು ದೇಶದ ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

Advertisement

ಕಾಲಿಖೋ ಪುಲ್‌ ಅವರ ಡೆತ್‌ ನೋಟ್‌ ಆಧರಿಸಿ, ಉನ್ನತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾಡಲಾಗಿದ್ದ ಅದರೊಳಗಿನ ಆರೋಪಗಳ ಬಗ್ಗೆ ಎಫ್ಐಆರ್‌ ದಾಖಲಿಸಿಕೊಂಡು ಸಿಬಿಐ ತನಿಖೆ ನಡೆಯಬೇಕು ಎಂದು ಪುಲ್‌ ಅವರ ಪತ್ನಿ ದಾಂಗ್‌ವಿಮ್‌ಸಾಯಿ ಪುಲ್‌ ಅವರು ಒತ್ತಾಯಿಸಿದ್ದಾರೆ.

ತನ್ನ ಪತಿ ಬರೆದಿಟ್ಟಿದ್ದ ಡೆತ್‌ ನೋಟ್‌ ಅನ್ನು ಪತ್ರಿಕಾಗೋಷ್ಠಿ ನಡೆಸಿ ತಾನು ಬಹಿರಂಗಗೊಳಿಸಿದ ಬಳಿಕ ತನಗೆ, ತನ್ನ ಮಕ್ಕಳಿಗೆ ಹಾಗೂ ಕುಟುಂಬ ಸದಸ್ಯರಿಗೆ ಅರುಣಾಚಲ ಸರಕಾರದಿಂದ ಹಾಗೂ ಬೇರೆ ಬೇರೆ ಕಡೆಗಳಿಂದ ಜೀವ ಬೆದರಿಕೆಗಳು ಬರುತ್ತಿವೆ ಎಂದಾಕೆ ಹೇಳಿದ್ದಾರೆ. 

ಕಾಲಿಖೋ ಪುಲ್‌ ಅವರು ಅರುಣಾಚಲದಲ್ಲಿನ ಬಿರುಸಿನ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಕಳೆದ ವರ್ಷ ಫೆ.19ರಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೆ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಅನುಸರಿಸಿ ಪುಲ್‌ ತಮ್ಮ ಮುಖ್ಯಮಂತ್ರಿ ಪದವನ್ನು ಕಳೆದುಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next