ಕೆದಂಬಾಡಿ: ಹೆತ್ತವರು ಮಕ್ಕಳ ಕಲಿಕೆಯ ಕಡೆ ಹೆಚ್ಚು ಗಮನ ಹರಿಸಬೇಕಾದುದು ಅತಿ ಅಗತ್ಯವಾಗಿದ್ದು, ಶಿಕ್ಷಕರ ಪಾತ್ರ ವನ್ನು ಕೂಡ ಹೆತ್ತವರು ನಿರ್ವಹಿಸಬೇಕು ಎಂದು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರು ಹೇಳಿದರು.
ತಿಂಗಳಾಡಿ ಸರಕಾರಿ ಮಾದರಿ ಉನ್ನತೀಕ ರಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾ| ಮಟ್ಟದ ಓದು ಬರೆಹ ಅಭಿವ್ಯಕ್ತಿ ಸಾಮರ್ಥ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಹೆತ್ತವರು ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ನುಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಸಹ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾ ಧಿಕಾರಿ ವಿಷ್ಣುಪ್ರಸಾದ್ ಸಿ. ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಕುಕ್ಕ ಎಂ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ತಾ| ಅಧ್ಯಕ್ಷ ಮಾಮಚ್ಚನ್ ಎಂ., ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಬಲ್ಲಾಳ್, ಮುಖ್ಯಗುರು ನಿರಂಜನ ಎಂ.ಜೆ. ಉಪಸ್ಥಿತರಿದ್ದರು. ನೋಡಲ್ ಅಧಿಕಾರಿ, ಬಿಆರ್‌ಪಿ ದಿನೇಶ ಗೌಡ ಕೆ. ಸ್ವಾಗತಿಸಿದರು. ಕೆಯ್ಯೂರು ಕ್ಲಸ್ಟರ್ ಸಿಆರ್‌ಪಿ ಅಬ್ದುಲ್ ಬಶೀರ್ ಕೆ. ವಂದಿಸಿದರು. ವಿದ್ಯಾರ್ಥಿನಿಯ ರಾದ ಪ್ರಸಾದಿನಿ ಮತ್ತು ಶಂಬ್ರಿàನಾ ನಿರೂಪಿಸಿದರು.
ಬಳಿಕ ತಾಲೂಕಿನ ವಿವಿಧ ಕ್ಲಸ್ಟರ್‌ಗಳ ವಿದ್ಯಾರ್ಥಿಗಳಿಗೆ ಓದು ಬರೆಹ ಮತ್ತು ಅಭಿವ್ಯಕ್ತಿ ಸ್ಪರ್ಧೆಗಳನ್ನು ನಡೆಸಲಾಯಿತು. ತಾಲೂಕಿನ ವಿವಿಧ ಶಾಲೆಗಳ 450 ವಿದ್ಯಾರ್ಥಿಗಳು, 180 ಶಿಕ್ಷಕರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.