Advertisement

ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ: 15 ಜನರ ಮೇಲೆ ಪ್ರಕರಣ ದಾಖಲು

09:47 AM Mar 31, 2020 | keerthan |

ಬಳ್ಳಾರಿ: ಕೋವಿಡ್-19 ಹಿನ್ನೆಲೆ ಈಗಾಗಲೇ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿಆರ್ ಪಿಸಿ ಸೆಕ್ಷನ್ 144 ಅನ್ವಯ ಕರ್ಪ್ಯೂ ಜಾರಿಗೊಳಿಸಲಾಗಿದ್ದರೂ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿಯಲ್ಲಿ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ 15 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

Advertisement

ಗೊಲ್ಲರಹಳ್ಳಿ ಗ್ರಾಮದ ಮುಖಂಡರಾದ ಕಾಳಪ್ಪ ಫಕ್ಕಿರಪ್ಪ (ವ:42), ಜಿ.ಬಿ.ನಾಗರಾಜ (50), ದಾಸರ ವೆಂಕಟೇಶ (46), ಕೋಮಾರಪ್ಪ(70), ಅನಂತಪ್ಪ ಡಿ.ಕೆ(58), ಸುರೇಶ ಮೈಲಪ್ಪ(36), ಕೆಂಚಪ್ಪ ಕಾಳಪ್ಪ(45), ಸಣ್ಣ ಹನುಮಂತಪ್ಪ(85),ನಾಗರಾಜ ಬನ್ನಿಯಪ್ಪ(40),ಈರಮ್ಮನವರ್ ಕೆಂಚಪ್ಪ(70),ಪುರ್ಲಿ ಕಾಳಶ್ರಪ್ಪ(40),ಸೋಮಪ್ಪ ಹುಚ್ಚಪ್ಪ(32),ಸುಣಗಾರ ದುರ್ಗೇಶ(37),ಗುರಿಕಾರ ಕಾಳಪ್ಪ ಮತ್ತು ಬಲವಂತಪ್ಪ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ನಿರ್ಲಕ್ಷ್ಯ ವಹಿಸಿ, ಸಂಜೆ 6ರ ಸುಮಾರಿಗೆ ಎಳೆಯುವ ತೇರನ್ನು ಮಧ್ಯಾಹ್ನ 3:30ಕ್ಕೆ ಎಳೆಯಲಾಗಿದೆ. ರಥ ಎಳೆಯುವ ಸಮಯದಲ್ಲಿ ಗ್ರಾಮದ ಜಿ.ಬಿ.ನಾಗರಾಜ ಇವರ ಕಾಲಿನ ಮೇಲೆ ರಥದ ಚಕ್ರ ಹಾಯ್ದು ಕಾಲಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದಲ್ಲಿ ಒಂದು ದಿನ ಮುಂಚೆ ತೆರಳಿ ರಥೋತ್ಸವ ಜರುಗಿಸದಂತೆ ಹಾಗೂ ಕೋವಿಡ್-19 ವೈರಸ್ ಕುರಿತು ತಿಳಿವಳಿಕೆ ನೀಡಿ ಬರಲಾಗಿದೆ. ಆದರೂ ಮಾ.29ರಂದು ಆದೇಶ ಉಲ್ಲಂಘಿಸಿ ರಥೋತ್ಸವ ಜರುಗಿಸಲಾಗಿದೆ ಎಂದು ಡಣಾಯನಕೇರೆ ಪಿಡಿಒ ಜಿಲಾನ್ ರಜಾಕ್ ಸಾಬ್ ಅವರು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Advertisement

ಈ ಆರೋಪಿಗಳ ಮೇಲೆ ಸೆಕ್ಷನ್ 188, 269, 337 ಹಾಗೂ ಇನ್ನಿತರ ಸೆಕ್ಷನ್ ಗಳಡಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next