Advertisement
ಕೋವಿಡ್-19 ಸೋಂಕಿನಿಂದ 76 ವರ್ಷದ ವೃದ್ಧ ಮೃತಪಟ್ಟಿದ್ದಲ್ಲದೇ, ಆತನ ಪುತ್ರಿ ಮತ್ತು ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು ಹರಡಿ ದಿಗ್ಭ್ರಮೆಗೊಳಿಸಿತ್ತು. ಕೋವಿಡ್-19 ಕಳಂಕದಿಂದ ಕಲಬುರಗಿ ಎಂದರೆ ನೆರೆ ಜಿಲ್ಲೆಯವರು ಭಯ ಭೀತರಾಗುತ್ತಿದ್ದರು. ಆದರೆ, ಜಿಲ್ಲಾಡಳಿತದ ಅಧಿಕಾರಿಗಳ ತಂಡ ಸಮರ್ಥವಾಗಿ ಮಹಾಮಾರಿ ಸೋಂಕನ್ನು ಎದುರಿಸುವ ಕಾರ್ಯ ನೀತಿ ಕೈಗೊಂಡಿತ್ತು. ಕೊರೊನಾ ಕಾಣಿಸಿಕೊಂಡ ದಿನದಿಂದಲೇ “ಲಾಕ್‌ಡೌನ್’ಗೆ ಒತ್ತು ಕೊಟ್ಟು ಜಿಲ್ಲೆಯ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸಿತ್ತು.
Related Articles
Advertisement
ಐಸೋಲೇಟೆಡ್ ವಾರ್ಡ್, ಹೋಂ ಕ್ವಾರಂಟೈನ್ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಇಎಸ್‌ಐ ಡೀನ್ ನೇತೃತ್ವದ ಸಮಿತಿ, ಸುಳ್ಳು ಸುದ್ದಿಗಳನ್ನು ಹರಡದಂತೆ ಕಡಿವಾಣ ಹಾಕಲು ಎಸ್‌ಪಿ ಹಾಗೂ ನಗರ ಪೊಲೀಸ್ ಆಯುಕ್ತ ಅವರನ್ನೊಳಗೊಂಡ ಸಮಿತಿ ಹಾಗೂ ಕೋವಿಡ್-19ಹೋರಾಟದಲ್ಲಿ ಪಾಲ್ಗೊಳ್ಳುವ ಆರೋಗ್ಯ, ಸ್ವಚ್ಛತೆ, ಪಾಲಿಕೆ ಸಿಬ್ಬಂದಿಗೆ ತರಬೇತಿ ಕೊಡುವುದು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹ ಪ್ರತ್ಯೇಕವಾದ ಸಮಿತಿ ಶ್ರಮಿಸುತ್ತಿದೆ.
27,000 ಜನರ ಗುರುತು: ಕೋವಿಡ್-19 ಹೊರಡದಂತೆ ತಡೆಯಲು ವಿದೇಶದಿಂದ ಮರಳಿ ಬಂದವರ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಣ್ಣಿಡುವ ಕಾರ್ಯ ಮಾಡಿತ್ತು. ಜತೆಗೆ ಹೊರದೇಶದಿಂದ ಬಂದವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಕರೆ ನೀಡಿತು. ಇದುವರೆಗೆ 487 ಜನ ವಿದೇಶಯಾನಿಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಮಾನವ ಅಭಿವೃದ್ಧಿ ಸಮಿತಿ ಜಿಲ್ಲಾದ್ಯಂತ ಅಭಿಯಾನ ಕೈಗೊಂಡ ಕಳೆದ ಒಂದು ತಿಂಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದ 27 ಸಾವಿರ ಜನರನ್ನು ಪತ್ತೆ ಹಚ್ಚಲಾಗಿದೆ. ಇದಕ್ಕಾಗಿ 205 ವೈದ್ಯರು, 1,686 ವೈದ್ಯಕೀಯ ಸಿಬ್ಬಂದಿ, 1,844 ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 3,735 ಜನ ಶ್ರಮಿಸುತ್ತಿದ್ದಾರೆ.
ಕೋವಿಡ್-19 ವಿಷಯದಲ್ಲಿ ಯಾವುದೇ ಸ್ಥಿತಿ ಉದ್ಭವಿಸಿದರೂ ಎದುರಿಸಲು ಜಿಲ್ಲಾಡಳಿತ ಸಿದ್ಧತೆಯಲ್ಲಿ ನಿರತವಾಗಿದೆ. ಐಎಸ್‌ಐ ಮತ್ತು ಜಿಮ್ಸ್ ಆಸ್ಪತ್ರೆಗಳನ್ನು ಕೋವಿಡ್-19ಗೆ ಮೀಸಲು ಎಂದು ಘೋಷಿಸಲಾಗಿದೆ. ಸರ್ಕಾರದ ನಿರ್ದೇಶನ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಬೆಡ್ ಗಳನ್ನೂ ಸಜ್ಜುಗೊಳಿಸಲಾಗುತ್ತಿದೆ. –ಶರತ್ ಬಿ., ಜಿಲ್ಲಾಧಿಕಾರಿ, ಕಲಬುರಗಿ
ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಹೊರ ಜಿಲ್ಲೆ, ಹೊರ ರಾಜ್ಯದಿಂದ 27 ಸಾವಿರ ಜನರನ್ನು ಗುರುತಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್‌ಪೋಸ್ಟ್ ಮೂಲಕ ಬಂದ ಮತ್ತು ಈಗಾಗಲೇ ಗ್ರಾಮಕ್ಕೆಬಂದು ಸೇರಿದವರ ತಾಳೆ ಹಾಕುವ ಕಾರ್ಯ ಮಾಡಲಾಗುತ್ತಿದೆ. – ಡಾ|ರಾಜಾ ಪಿ., ಸಿಇಒ, ಜಿಪಂ.
-ರಂಗಪ್ಪ ಗಧಾರ