Advertisement

ಕಲಬುರಗಿ ನನ್ನ  ಕೈ ಬಿಡಲ್ಲ; ಮಲ್ಲಿಕಾರ್ಜುನ ಖರ್ಗೆ ಮಾತು

12:30 AM Mar 22, 2019 | |

ಪ್ರಧಾನಿಯಾಗುವ ಬಗ್ಗೆ ಹಗಲು ಕನಸು ಕಾಣುವುದಿಲ್ಲ. ನನ್ನನ್ನು ಸೋಲಿಸಲು ಕೆಲವರು ಈ ರೀತಿ ಪದ ಹುಡುಕಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು. ಇಲ್ಲಿ ಇಂತು, ಪರಂತು ನಡೆಯುವುದಿಲ್ಲ. ನಲ್ವತ್ತು, ಐವತ್ತು ದಿನಗಳಲ್ಲಿ ಎಲ್ಲ ಮುಗಿಯುತ್ತೆ. ಈಗ ಹೈಪ್‌ ಕ್ರಿಯೇಟ್‌ ಮಾಡಿ, ಕೆಲಸ ಮಾಡಿರುವವರಿಗೆ ಶಹಬ್ಟಾಸ್‌ಗಿರಿ ಕೊಡುವ ಬದಲು ಇಂಥ ಮುಜುಗರ ಮಾಡಬೇಡಿ… 
-ಇದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತು. ಕಲಬುರಗಿ ಕ್ಷೇತ್ರದ ಸ್ಪರ್ಧೆ ಮತ್ತು ಮೋದಿ ಅವರ ಐದು ವರ್ಷಗಳ ಆಡಳಿತ, ತಮ್ಮ ಹೋರಾಟ, ರಾಜ್ಯ ರಾಜಕೀಯದ ಬಗ್ಗೆ ಅವರು ಉದಯವಾಣಿ ಜತೆಗೆ ಮುಕ್ತವಾಗಿ ಮಾತನಾಡಿದ್ದಾರೆ.

Advertisement

ಈ ಬಾರಿ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಲು ಬಿಜೆಪಿ ರಾಷ್ಟ್ರೀಯ ನಾಯಕರೇ ಪಣ ತೊಟ್ಟಿದ್ದಾರಂತೆ?
ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವನು. ಸಂಸತ್ತಿನಲ್ಲಿ ವಿಪಕ್ಷ ನಾಯಕನಾಗಿ ಮಾತನಾಡಿದ್ದು ಅವರಿಗೆ ನೋವುಂಟು ಮಾಡಿರಬಹುದು. ಆರ್‌ಎಸ್‌ಎಸ್‌ ಬಗ್ಗೆ, ಅವರ ಆಡಳಿತ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದು, ಅವರಿಗೆ ಇಷ್ಟ ಆಗಿಲ್ಲ ಎಂದು ಕಾಣಿಸುತ್ತದೆ. ಅದೇ ಕಾರಣಕ್ಕೆ ದಿಲ್ಲಿಯಿಂದ ಗಲ್ಲಿಯವರೆಗೂ ಸಂಘಟಿತರಾಗಿ ಸೋಲಿಸಲು ಪ್ರಯತ್ನ ನಡೆಸಿದ್ದಾರೆ. ನನ್ನ ಹಣೆಬರಹ ಬರೆಯುವವರು ಕಲಬುರಗಿಯಲ್ಲಿದ್ದಾರೆ; ದಿಲ್ಲಿಯಲ್ಲಿ ಇಲ್ಲ. ಕಲಬುರಗಿ ಜನರು ಯಾವಾಗಲೂ ನನಗೆ ಆಶೀರ್ವಾದ ಮಾಡಿಕೊಂಡೇ ಬಂದಿದ್ದಾರೆ. ಹೀಗಾಗಿ ಅವರೇ ನನಗೆ ಜನಾರ್ದನ, ಅವರೇ ನನಗೆ ಬ್ರಹ್ಮ… ದಿಲ್ಲಿ ನಾಯಕರು ಎಷ್ಟೇ ಕೆಟ್ಟದ್ದನ್ನು ಮಾಡಬೇಕೆಂದುಕೊಂಡರೂ ಕಲಬುರಗಿ ಜನ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತಾರೆ…

ಐವತ್ತು ವರ್ಷಗಳಲ್ಲಿ ಹೈ.ಕ. ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಇದೆಯಲ್ಲ?
ಆರ್ಟಿಕಲ್‌ 371 (ಜೆ) ಅನುಷ್ಠಾನ, ಕಲಬುರಗಿಯಲ್ಲಿ ಸರಕಾರಿ ಮೆಡಿಕಲ್‌ ಕಾಲೇಜ್‌, ರೈಲ್ವೇ ಯೋಜನೆ, ಎಂಜಿ ನಿಯರಿಂಗ್‌ ಕಾಲೇಜು, ಇಎಸ್‌ಐ ಕಾಲೇಜು ಸ್ಥಾಪನೆ, ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ರಾಷ್ಟ್ರೀಯ ಹೆದ್ದಾರಿ ಗಳ ನಿರ್ಮಾಣ ಮಾಡಿದ್ದೇನೆ.

 ಬಿಜೆಪಿಯ ಕೆಲವರು ಮೀಸಲಾತಿ ವ್ಯವಸ್ಥೆ ಬಗ್ಗೆ ಅಪಸ್ವರ ತೆಗೆಯುತ್ತಾರಲ್ಲವೇ?
ಅವರು ಸಂವಿಧಾನ ವ್ಯವಸ್ಥೆ ತೆಗೆದು ಹಾಕಿ ತಮ್ಮದೇ ಆದ ವ್ಯವಸ್ಥೆ ತರಲು ಬಯಸುತ್ತಿದ್ದಾರೆ. ಅದಕ್ಕೆ ಅವರಿಗೆ ಸಂವಿಧಾನ ಮತ್ತು ಮೀಸಲಾತಿ ಮೇಲೆ ಕಣ್ಣಿದೆ. ಮುಂದೆ ಆರಿಸಿ ಬಂದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ತೆಗೆದು ಹಾಕಿ, ಅಧ್ಯಕ್ಷೀಯ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನ ನಡೆಸುತ್ತಾರೆ. ಈಗ ದೇಶದ ಜನರು ಮಹತ್ವದ ನಿರ್ಣಯ ಕೈಗೊಳ್ಳಬೇಕಿದೆ. ನಿರಂಕುಶಾಧಿಕಾರಿ ಮನಃಸ್ಥಿತಿಯವರು ಅಧಿಕಾರಕ್ಕೆ ಬಂದರೆ ಮುಂದೆ ಪ್ರಜಾತಂತ್ರ ವ್ಯವಸ್ಥೆ ತೊಂದರೆಗೆ ಸಿಲುಕುತ್ತದೆ.

ಕಲಬುರಗಿಯಲ್ಲಿ ನಿಮ್ಮ ಮಗನಿಗೆ ಮಂತ್ರಿ ಸ್ಥಾನ ಕೊಡಿಸಲು ಬೇರೆಯವರಿಗೆ ಅವಕಾಶ ತಪ್ಪಿಸಿದಿರಿ ಎನ್ನುವ ಆರೋಪ ಕೇಳಿ ಬರುತ್ತಿದೆಯಲ್ಲ ?
ಅವೆಲ್ಲ ಹೊಟ್ಟೆಕಿಚ್ಚಿನಿಂದ ಹೇಳುತ್ತಾರೆ. ಅವನು ಪರಿಶಿಷ್ಟ ಜಾತಿಯ ಮೀಸಲು ವರ್ಗಕ್ಕೆ ಸೇರಿದವನಾಗಿದ್ದಾನೆ. ಆ ಕೋಟಾದಡಿ ಅವನಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಒಂದು ಮಂತ್ರಿ ಸ್ಥಾನ ಕೊಡಿಸಲು ನಾನು ಸರ್ಕಸ್‌ ಮಾಡಬೇಕಾ? 
 

Advertisement

ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ನಷ್ಟವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲ ?
ಮೈತ್ರಿ ಮಾಡಿಕೊಂಡಾಗ ಕೆಲವು ಬಾರಿ ಪಡೆದುಕೊಳ್ಳುತ್ತೇವೆ, ಕೆಲವು ಬಾರಿ ಕಳೆದುಕೊಳ್ಳುತ್ತೇವೆ. ಈ ದೇಶದ ಸಂವಿಧಾನಕ್ಕೆ ಬದ್ಧವಾಗಿ ನಿಲ್ಲುವ ಜನರು ನಾವು. ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಬೆಲೆ ಕೊಟ್ಟು ಉಳಿಸಲು ಪ್ರಯತ್ನ ಮಾಡುವವರು ನಾವು. ಜಾತ್ಯತೀತ ತಣ್ತೀಗಳು ಉಳಿಯಬೇಕೆಂದು ಸಮಾನ ಮನಸ್ಕ ಪಕ್ಷಗಳು ಒಂದಾದ ಮೇಲೆ ಸ್ವಲ್ಪ ಹೆಚ್ಚಾಕಡಿಮೆ ಆಗುತ್ತದೆ. ಆರ್‌ಎಸ್‌ಎಸ್‌ ತಣ್ತೀ ಸೋಲಿಸುವುದೇ ನಮ್ಮ ಗುರಿ.

5 ವರ್ಷದಲ್ಲಿ ಮೋದಿ ಸರಕಾರದ ವಿರುದ್ಧ ನಿಮ್ಮ ಕಾರ್ಯ ವೈಖರಿ ನೆಮ್ಮದಿ ತಂದಿದೆಯಾ ?
ನಾನು ಕೇವಲ 44 ಜನ ಸಂಸದರ ಬೆಂಬಲದೊಂದಿಗೆ ಕೇಂದ್ರ ಸರಕಾರ ಎಲ್ಲೆಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಕಂಡು ಬಂದಿದೆಯೋ ಆ ಸಂದರ್ಭದಲ್ಲಿ ದೇಶದ ಜನರ ಪರವಾಗಿ ಧ್ವನಿ ಎತ್ತಿ ಜನರಿಗೆ ಶಕ್ತಿ ಕೊಟ್ಟಿದ್ದೇನೆ. ಕೇಂದ್ರ ಸರಕಾರ ಸಂವಿಧಾನದ, ಪ್ರಜಾಪ್ರಭುತ್ವ, ಸ್ವಾಯತ್ತ ಸಂಸ್ಥೆಗಳ ವಿರುದ್ಧ ಯಾವಾಗ ನಡೆದುಕೊಂಡಿದೆಯೋ ಆಗ ಸಂಸತ್ತಿನಲ್ಲಿ ಪ್ರಶ್ನಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಅವರು ಮನಸು ಮಾಡಿದ್ದರೆ ನನ್ನನ್ನು ಅಧಿಕೃತ ವಿಪಕ್ಷದ ನಾಯಕ ಎಂದು ಅಧಿಕಾರ ನೀಡಬಹುದಿತ್ತು. ಆ ಅಧಿಕಾರ ಪ್ರಧಾನಿ ಮತ್ತು ಸ್ಪೀಕರ್‌ ಅವರಿಗೆ ಇತ್ತು. ಅದಕ್ಕಾಗಿ ದೊಡ್ಡ ತಿದ್ದುಪಡಿ ಏನೂ ಮಾಡುವ ಅಗತ್ಯವಿರಲಿಲ್ಲ. ಆದರೂ ಪ್ರಧಾನಿಯವರು ಅವಕಾಶ ತಪ್ಪಿಸಿದರು. 

 ಮೀಸಲಾತಿ ಲಾಭ: ಈಗಲೇ ಹೇಳಲಾಗದು
ಮೇಲ್ಜಾತಿ ಬಡವರಿಗೆ ಮೀಸಲಾತಿ ಕಲ್ಪಿಸಿರುವುದು ಒಳ್ಳೆಯದಲ್ಲವೇ ಎಂಬ ಪ್ರಶ್ನೆಗೆ ಇದೆಲ್ಲ ಸೂಕ್ಷ್ಮ ವಿಷಯ . ಚುನಾವಣೆ ಸಂದರ್ಭದಲ್ಲಿ ಇದನ್ನು ಜಾರಿಗೆ ತಂದಿದ್ದಾರೆ. ನಾವೆಲ್ಲ ಅದಕ್ಕೆ ಬೆಂಬಲ ಸೂಚಿಸಿ ದ್ದೇವೆ. 8 ಲಕ್ಷ ರೂ.ಗಳವರೆಗೆ ಆದಾಯದ ಮಿತಿ ಹಾಕಿರು ವುದರಿಂದ ಯಾರಿಗೆ ಲಾಭ ಸಿಗುತ್ತದೆ ಎನ್ನುವುದನ್ನು ನೋಡಬೇಕು. ಮಂಡಲ್‌ ಆಯೋಗ ಬಂದಾಗಲೂ ಈ ರೀತಿ ಅನೇಕ ಚರ್ಚೆಗಳು ನಡೆದಿದ್ದವು ಎಂದರು.

 ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next