Advertisement

ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ರ ಆಪ್ತ ಭೀಮರಾವ್ ಕುಲಕರ್ಣಿ ನಿಧನ

03:55 PM Dec 29, 2022 | Team Udayavani |

ಯಡ್ರಾಮಿ: ಪಟ್ಟಣದ ಹಿರಿಯ ಜೀವಿ, ಮಾಜಿ ಮುಖ್ಯಮಂತ್ರಿ ದಿ. ಎನ್. ಧರ್ಮಸಿಂಗ್ ಅವರ ಆಪ್ತರಲ್ಲಿ ಒಬ್ಬರಾದ ಭೀಮರಾವ್ ಮಲ್ಹಾರರಾವ್ ಕುಲಕರ್ಣಿ (76) ಗುರುವಾರ ಡಿ. 29 ರಂದು ಬೆಳಗ್ಗೆ ನಿಧನ ಹೊಂದಿದರು.

Advertisement

ತಮ್ಮ ಇಡೀ ಬದುಕಿನುದ್ದಕ್ಕೂ ಕಾಂಗ್ರೆಸ್ಸಿನ ಕಟ್ಟಾ ಕಾರ್ಯಕರ್ತರಾಗಿ ನಿಷ್ಠೆ, ಸರಳತೆಯಿಂದ ಅಂತಃಕರಣದ ಬದುಕು ಸಾಗಿಸಿದವರು ಭೀಮರಾವ್ ಕುಲಕರ್ಣಿ. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಜಿಡಗಿಯ ಲಿ.ಸಿದ್ಧರಾಮ ಶಿವಯೋಗಿಗಳ ಅಪ್ಪಟ ಶಿಷ್ಯ. ಕಷ್ಟದ ಮಡುವಿನಲ್ಲಿ ಬಿದ್ದು ಹೊರಬರದೇ ತೊಳಲಾಡುವವರನ್ನು ತಮ್ಮ ಅಮೋಘ ಹಾಸ್ಯ ಚುಟುಕುಗಳ ಮುಖಾಂತರ ನಗಿಸಿ ಕಷ್ಟದ ಮಡುವಿನಿಂದ ಹೊರತಂದು ನಗಿಸುವ ನಗೆ ಮಾಂತ್ರಿಕರು ಹೌದು! ನಕ್ಕು ನಗಿಸಿ ನೋವ ಮರೆಸುವ ಹಾಸ್ಯ ಕಲಾಪ್ರೇಮಿ.

ಅಷ್ಟೇ ಅಲ್ಲದೇ ಅದ್ಭುತ ಓದುಗಾರ. ಎಂಬತ್ತರ ದಶಕದಲ್ಲಿ ಮನೆಯಲ್ಲಿಯೇ ಗ್ರಂಥಾಲಯ ತೆರೆದ ಅಪ್ಪಟ ಪುಸ್ತಕ ಪ್ರಿಯ. ಸಾವಿರಾರು ಪುಸ್ತಕಗಳ ಸಂಗ್ರಹ ಈಗಲೂ ಅವರ ಮನೆಯಲ್ಲಿ ಕಾಣಬಹುದು. ಗ್ರಾಮವಲ್ಲದೇ ಊರಲ್ಲಿರುವ ನವ ತರುಣರಿಗೆ ಓದಿನ ಪ್ರಪಂಚ ಅರುಹಿಸುವುದರ ಮೂಲಕ ಓದಿನ ನಶೆ ಬೀರಿದವರು.  ಅವರ ಅಭಿಮಾನಿಯೊಬ್ಬ ಹೀಗೆ ಹೇಳುತ್ತಾನೆ,”ನಮಗೊಂದಿಷ್ಟು ಜ್ಞಾನ ಬಂದಿರುವುದಾದರೆ ಅದು ಭೀಮರಾವ್ ಅವರು ಬೆಳೆಸಿದ ಓದಿನ ಹವ್ಯಾಸದಿಂದ” ಎಂಬುವುದು ಅಭಿಮಾನದ ಮಾತು. ಪಟ್ಟಣದ ಇನ್ನೋರ್ವ ನಾಯಕ ದಿ. ಮಹಾಂತಗೌಡ ಪಾಟೀಲರ ಪರಮಾಪ್ತ ಗೆಳೆಯ ಭೀಮರಾವ್, ಧರ್ಮಸಿಂಗ್ ರ ಚುನಾವಣೆಯಲ್ಲಿ ಸಾಯಂಕಾಲದ ವೇಳೆ ಹಳೆಯ ಬತ್ತಿ ಗ್ಯಾಸ್ ಗಳನ್ನು ಹೆಗಲ ಮೇಲೆ ಹೊತ್ತು ಪಕ್ಷದ ಪ್ರಚಾರ ಗೈದ ಕಾಂಗ್ರೆಸ್ಸಿಗರು.  ಏನನ್ನು ನಿರೀಕ್ಷಿಸದೇ ಕೆಲಸ ಮಾಡಿದವರು. ಇವರ ರಾಜಕಾರಣದ ಆದರ್ಶ ಈಗಿನ ಯಾವುದೇ ಪಕ್ಷದ ಕಾರ್ಯಕರ್ತರಿಗೂ ಮಾದರಿ.

Advertisement

Udayavani is now on Telegram. Click here to join our channel and stay updated with the latest news.

Next