ರಾಮನಗರ: ವಿದ್ಯುತ್ ಸ್ಪರ್ಶಿಸಿ ಚಿಂದಿ ಹಾಯುವ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮೇರಿ (30) ಮೃತಪಟ್ಟ ಮಹಿಳೆ.
ಮಂಗಳವಾರ ನಗರದಲ್ಲಿ ಚಿಂದಿ ಆಯುವ ವೇಳೆ ವಿದ್ಯುತ್ ಕಂಬಕ್ಕೆ ಹಬ್ಬಿದ ಬಳ್ಳಿಯಿಂದ ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತಪಟ್ಟಿದ್ದರು, ಘಟನೆಗೆ ಸಂಬಂಧಿಸಿ ಮಹಿಳೆಯ ಕುಟುಂಬ ಸದಸ್ಯರು ಕನಕಪುರ ಬೆಸ್ಕಾಂ ಕಚೇರಿ ಮುಂದೆ ಮಹಿಳೆಯ ಶವ ಇಟ್ಟು ಸೂಕ್ತ ಪರಿಹಾರ ನೀಡುವಂತೆ ಪ್ರತಿಭಟನೆ ನಡೆಸಿದ್ದರು ಈ ವೇಳೆ ಮಹಿಳೆಯ ಅಂತ್ಯಸಂಸ್ಕಾರಕ್ಕೆ 20 ಸಾವಿರ ಪರಿಹಾರ ನೀಡುವ ಭರವಸೆ ನೀಡಿದ್ದರು. ಇಂದು ಹಣ ನೀಡದೆ ನುಣಚಿಕೊಳ್ಳುತ್ತಿರೋ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರೈತ ಸಂಘ ಸಾಥ್ ನೀಡಿದೆ.
ವಿದ್ಯುತ್ ಕಂಬದ ಬಳಿ ಗಿಡ ಬಳ್ಳಿಗಳ ತೆರವು ಮಾಡದೇ ನಿರ್ಲಕ್ಷ್ಯ ವಹಿಸಿರೋ ಬೆಸ್ಕಾಂ ಸಿಬ್ಬಂದಿಗಳ ಕಾರ್ಯದಿಂದಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಸೂಕ್ತ ಪರಿಹಾರ ನೀಡುವಂತೆ ಶವ ಇಟ್ಟು ಪ್ರತಿಭಟನೆಗೆ ಮುಂದಾದ ರೈತ ಸಂಘ.
ಇದನ್ನೂ ಓದಿ: Flag Hoisting ವೇಳೆ ಅಂಬೇಡ್ಕರ್,ಗಾಂಧೀಜಿ ಭಾವಚಿತ್ರ ಇಡದೆ ಅವಮಾನ;ವಿದ್ಯಾರ್ಥಿಗಳ ಪ್ರತಿಭಟನೆ