Advertisement

ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪನ: ಗ್ರಾಮಸ್ಥರಿಗೆ ಧೈರ್ಯ ತುಂಬಿದ ಭೂವಿಜ್ಞಾನಿಗಳು

02:33 PM Oct 17, 2021 | Team Udayavani |

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪನದಿಂದ ಭಯಭೀತರಾದ ಜನರಿಗೆ ಧೈರ್ಯ ತುಂಬುವಂಥ ಕೆಲಸಕ್ಕಾಗಿ ಎಂದು ಹೈದ್ರಾಬಾದ್ ಮತ್ತು ಕಲಬುರಗಿ ನಗರದ ಭೂವಿಜ್ಞಾನಿಗಳು ಗ್ರಾಮಕ್ಕೆ ಬಂದು ಭೂಕಂಪ ಕಂಪನ ಮಾಪನ ಯಂತ್ರ ವನ್ನು ಜೋಡಿಸಿ ಜನರಿಗೆ ತಿಳಿವಳಿಕೆ ನೀಡಿದರು .

Advertisement

ಭೂಮಿಯಿಂದ ಭೂಮಿಯಿಂದ ಹೊರಡುವ ಶಬ್ದದಿಂದ ಭೂಮಿ ಅಲುಗಾಡಬಹುದು ಸಣ್ಣಸಣ್ಣ ಭೂಕಂಪದಿಂದ ಯಾವುದೇ ಅನಾಹುತ ಆಗೋದೆಲ್ಲ ಐದಕ್ಕಿಂತ ಹೆಚ್ಚು ಆದರೆ ಜನರಿಗೆ ತೊಂದರೆ ಆಗಲಿದೆ .

ಆದರೆ ಯಾವುದೇ ಭಯಪಡುವ ಅಗತ್ಯವಿಲ್ಲ ಇನ್ನು ಮುಂದೆ ಇಲ್ಲಿನ ಯಂತ್ರದಲ್ಲಿ ದಾಖಲಾಗುವ ಎಲ್ಲಾ ಡಾಟಾಗಳು ನಮಗೆ ಮಾಹಿತಿ ನೀಡುತ್ತವೆ ಸದ್ಯ ನಾವು  ಯಂತ್ರ ಜೋಡಿಸುವ ಸಂದರ್ಭದಲ್ಲಿ ಭೂಮಿ ಕಂಪಿಸಿದೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ ಎಂದು ಹೈದ್ರಾಬಾದಿನ ಭೂ ವಿಜ್ಞಾನಿ ಡಾಕ್ಟರ್ ಶಶಿಧರ್ ಮತ್ತುಡಾಕ್ಟರ್ ಸುರೇಶ್ ತಿಳಿಸಿದರು .

ಗಡಿಕೇಶ್ವರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಯ ಕಂಪನದಿಂದ ಧೈರ್ಯ ತುಂಬುವಂತೆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಅನಗತ್ಯವಾಗಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಜನರಿಗೆ ಕಿವಿಗೊಡಬಾರದೆಂದು ತಹಸೀಲ್ದಾರ್ ಅಂಜುಮ ತಬಸ್ಸುಮ್  ಮನವಿ ಮಾಡಿಕೊಂಡರು.

Advertisement

ಡಾಕ್ಟರ್ ರಮೇಶ್ ಎಲ್ ದಿಕ್ಪಾಲ್ ಡಾಕ್ಟರ್ ಅಣವೀರಪ್ಪ ಬಿರಾದಾರ್ ಡಾಕ್ಟರ್ ಅಭಿನಯ ಭೂವಿಜ್ಞಾನಿಗಳು ಸಿಸ್ಮೋಮೀಟರ್ ಯಂತ್ರ ಜೋಡಿಸುವ ಸಂದರ್ಭದಲ್ಲಿ ಭಾಗವಹಿಸಿದ್ದರು .

-ಶಾಮರಾವ್ ಚಿಂಚೋಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next