Advertisement

ಇಬ್ಬರು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಪಾಪಿ ತಂದೆ ಪರಾರಿ

09:59 AM Jan 04, 2020 | keerthan |

ಕಲಬುರಗಿ: ತಂದೆಯೋರ್ವ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಗುರುವಾರ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.

Advertisement

ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯ ಭೈರಂಪಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದ್ದು, ರೋಹಿತಾ (4), ಪರ್ವಿತಾ  (2) ತಂದೆಯಿಂದಲೇ ಕೊಲೆಯಾದ ದುರ್ದೈವಿಗಳು. ಸಂಜು ಆಲಿಯಾಸ್ ಕುಮ್ಶೆಟ್ಟಿ ಮಕ್ಕಳನ್ನು ಕೊಲೆಗೈದ ಪಾಪಿ.

ಹೈದರಾಬಾದ್ ನಲ್ಲಿ ಸಂಜು ಕೆಲಸ ಮಾಡುತ್ತಿದ್ದ ಇತ್ತೀಚಿಗೆ ತಾಂಡಾಕ್ಕೆ ಬಂದಿದ್ದ. ಮದ್ಯ ವ್ಯಸನಿಯಾಗಿರುವ ಇವನು ಇಬ್ಬರು ಮಕ್ಕಳನ್ನು ಹೊಲಕ್ಕೆ ಕರೆದೊಯ್ದು ವಿಷಕುಡಿಸಿ ಸಾಯಿಸಿದ್ದಾನೆ ಎನ್ನಲಾಗಿದೆ.

ತಾಂಡಾದ ಖೀರುನಾಯಕ ಎಂಬುವರ ಹೊಲದಲ್ಲಿ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಮಿರಿಯಾಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಆರೋಪಿ ನಾಪತ್ತೆಯಾಗಿದ್ದಾನೆ. ಆತನ ಬಗೆಗೂ ಅನುಮಾನಗಳಿದ್ದು, ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next