Advertisement

ಕಲಬುರಗಿ:  ಬೈಕ್ ಗಳ ಮುಖಾಮುಖಿ ಢಿಕ್ಕಿ; ಮೂವರು ಸ್ಥಳದಲ್ಲೇ ಸಾವು

11:46 AM Jul 16, 2022 | Team Udayavani |

ಕಲಬುರಗಿ(ಚಿಂಚೋಳಿ):  ಬೈಕ್ ಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಂಚೋಳಿ ತಾಲೂಕಿನ ಶಿರೋಳ್ಳಿ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.

Advertisement

ಮೃತರನ್ನು ಶಿರೋಳ್ಳಿಯ ಜಗನ್ನಾಥ (42), ಮಹಿಬೂಬ್ ಅಲಿ (52) ಹಾಗೂ ಶಾದಿಪುರದ ಶ್ರೀಕಾಂತ ಎಂದು ಗುರುತಿಸಲಾಗಿದೆ. ತಲೆಗೆ ಭಾರಿ ಪೆಟ್ಟು ಬಿದ್ದು ಮೂವರು ಸ್ಥಳದದಲ್ಲೇ ‌ಮೃತಪಟ್ಟಿದ್ದಾರೆ.

ಅಮರ ಎಂಬಾತ‌ ಗಾಯಗೊಂಡಿದ್ದಾ‌ನೆ. ಗಾಯಾಳುವನ್ನು ಸೇಡಂ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.  ಘಟನಾ  ಸ್ಥಳಕ್ಕೆ ‌ಸುಲೇಪೇಟ ಸಿಪಿಐ ಜಗದೀಶ್ ಕೆಜಿ,ಪಿಎಸೈ ಸುಖಾನಂದ ಭೇಟಿ ಪರೀಶಿಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರ 2ನೇ ವಿವಾಹವಾಗಲು ಅನುಮತಿ ಕಡ್ಡಾಯ: ಬಿಹಾರ ಸರ್ಕಾರದ ಅಧಿಸೂಚನೆಯಲ್ಲೇನಿದೆ?

 

Advertisement
Advertisement

Udayavani is now on Telegram. Click here to join our channel and stay updated with the latest news.

Next