Advertisement

ಕಳಸದ ಕಳಸೇಶ್ವರ

12:39 PM Feb 18, 2017 | |

    ಚಿಕ್ಕಮಗಳೂರಿನಿಂದ ಕೇವಲ 96 ಕಿ.ಮೀ ಅಂತರದಲ್ಲಿರುವ  ಈ ಪುಣ್ಯ ಕ್ಷೇತ್ರವೇ  ಕಳಸ.   ಭದ್ರಾ ನದಿಯ ತಟದಲ್ಲಿರುವ ಈ ಕ್ಷೇತ್ರ  ಶಿವ ನೆಲೆಸಿದ  ಪಾವನ ಭೂಮಿಯಾಗಿದೆ.ಇಲ್ಲಿ ಶಿವ ಕಳಸೇಶ್ವರನಾಗಿ  ನೆಲೆನಿಂತಿದ್ದಾನೆ.ಇದರ  ಹಿಂದೆ ಒಂದು  ಐತಿಹ್ಯವೇ ಇದೆ.

Advertisement

      ಹಿಂದೆ  ಶಿವ-ಪಾರ್ವತಿಯರ  ಕಲ್ಯಾಣೋತ್ಸವದ ಸಂದರ್ಭದಲ್ಲಿ  ಎಲ್ಲ  ಸುರರು, ಕಿಂಕರರು, ಗಣಗಳು, ಯಕ್ಷರು, ಸಾಧುಸಂತರು,ದೇವ ದೇವತೆಗಳು ಹಿಮಾಲಯದ ಕೈಲಾಸ  ಪರ್ವತ‌ದಲ್ಲಿ ನೆರೆದಿದ್ದರು. ಹೀಗೆ  ಸರ್ವರೂ  ಒಂದೆಡೆ  ಸಮ್ಮಿàಲಿತರಾದಾಗ ಭೂಲೋಕವೇ  ವಾಲತೊಡಗಿತು. ಇದರಿಂದ ಚಿಂತಿತನಾದ  ಶಿವ  ಅಗಸ್ತ್ಯ  ಮುನಿಗಳಿಗೆ ದಕ್ಷಿಣ  ದಿಕ್ಕಿನಲ್ಲಿರುವ ಎತ್ತರದ  ಸ್ಥಳವೊಂದಕ್ಕೆ ತೆರಳಿ  ಭೂಲೋಕದ  ಸಮತೋಲನ  ಕಾಪಾಡುವಂತೆ ಆಜಾnಪಿಸಿದನು. ಆತನ   ಆಜ್ಞೆಯನ್ನು   ಪಾಲಿಸಲೇಬೇಕು. ಆಗ  ಅಗಸ್ತ್ಯರು  ಗಿರಿಜಾ ಕಲ್ಯಾಣವನ್ನು   ನೋಡಬೇಕೆಂಬ ತಮ್ಮ  ಹೆಬ್ಬಯಕೆಯನ್ನು   ವ್ಯಕ್ತಪಡಿದಾಗ  ಇದಕ್ಕೆ  ಒಪ್ಪಿದ  ಶಿವ ಅಗಸ್ತ್ಯರಿಗೊಂದು  ವರ ಕರುಣಿಸುತ್ತಾನೆ.   ಅದೇನೆಂದರೆ  ಅಗಸ್ತ್ಯರು  ಎಲ್ಲೇ ಇದ್ದರೂ  ಗಿರಿಜಾಕಲ್ಯಾಣ ವೀಕ್ಷಿಸಬಹುದು ಎಂಬ ಜಾnನ  ದೃಷ್ಟಿಯನ್ನು  ಅನುಗ್ರಹಿಸುತ್ತಾನೆ.   ಇದರಿಂದ ಸಂತಸಗೊಂಡ ಮುನಿಗಳು ದಕ್ಷಿಣ  ದಿಕ್ಕಿಗಿರುವ ಪ್ರಸ್ತುತ  ಕಳಸ  ಕ್ಷೇತ್ರಕ್ಕೆ ಬಂದು ನೆಲೆಸುತ್ತಾರೆ. ಮಹಾಜಾnನಿಗಳಾದ  ಇವರ  ಆಗಮನದಿಂದ  ಭೂಲೋಕದಲ್ಲಿ  ಮತ್ತೆ ಮೊದಲಿನಂತೆ ಸಮತೋಲನ  ಉಂಟಾಗುತ‌¤ದೆ.  ಆಗ  ಮುನಿಗಳು  ಈ ಕ್ಷೇತ್ರದಲ್ಲೆ  ತಮ್ಮ   ಬಳಿ ಇದ್ದ  ಕಳಸದಿಂದಲೇ  ಗಿರಿಜಾಕಲ್ಯಾಣವನ್ನು  ವೀಕ್ಷಿಸುತ್ತಾರೆ.  ಅವರ  ಕಳಸದಿಂದ ಒಂದು ಶಿವಲಿಂಗ ಉದ್ಭವವಾಗುತ್ತದೆ  ಅದನ್ನು  ಈ ಕ್ಷೇತ್ರದಲ್ಲಿ  ಪ್ರತಿಷ್ಠಾಪಿಸುತ್ತಾರೆ.   ಆದ್ದರಿಂದ  ಕಳಸದಿಂದ  ಹುಟ್ಟಿದ  ಶಿವನು  ಇಲ್ಲಿ  ಕಳಸೇಶ್ವರನಾಗಿ  ಹೆಸರು ಪಡೆಯುತ್ತಾನೆ.   ಅಂತೆಯೇ ಈ  ಕ್ಷೇತ್ರ ಕಳಸ ಎಂದು  ಹೆಸರು ಪಡೆದುಕೊಂಡಿದೆ.     

  ಈ ಕಳಸೇಶ್ವರನ  ಜೊತೆಗೆ   ಪಾರ್ವತಿಯದೇ  ಸರ್ವಾಂಗ ಸುಂದರಿ ಅಮ್ಮನಾಗಿ  ಇಲ್ಲಿ  ನೆಲೆಸಿದ್ದಾಳೆ.  ಈ  ಕ್ಷೇತ್ರದ  ಇನ್ನೊಂದು ವೈಶಿಷ್ಟ್ಯತೆಯೆನೆಂದರೆ ಇಲ್ಲಿ  ಗಣಪತಿಯು ಗಂಡುರೂಪ ಹಾಗೂ ಹೆಣ್ಣುರೂಪದಲ್ಲಿ  ನೆಲೆಸಿದ್ದಾನೆ. ಇದಕ್ಕೂ ಕೂಡ ಒಂದು ಐತಿಹ್ಯವಿದೆ. ಹಿಂದೆ ಈ  ಪ್ರದೇಶದಲ್ಲಿದ್ದ  ತಾಳಕಾಸುರನೆಂಬ ರಾಕ್ಷಸನನ್ನು  ಗಣಪತಿ ಗಜ ಸ್ವರೂಪದಲ್ಲಿ  ಸಂಹರಿಸಿರುತ್ತಾನೆ.ಇದಕ್ಕೆ  ಒಂದು ಗಂಡು ಆನೆ ಕೂಡ ಸಹಕರಿಸಿರುತ್ತದೆ. ಆದ್ದರಿಂದ ಇಲ್ಲಿ  ಗಣಪತಿಯ  ಎರಡು ರೂಪಗಳ  ವಿಗ್ರಹಗಳನ್ನು   ಪ್ರತಿಷ್ಠಾಪಿಸಲಾಗಿದೆ.

ಹಚ್ಚ  ಹಸಿರಿನ ಸುಂದರವಾದ ಪ್ರಕೃತಿ ಮಡಿಲಿನಲ್ಲಿ ನೆಲೆನಿಂತಿರುವ ಈ  ಕಳಸೇಶ್ವರ ದೇವಸ್ಥಾನ ಸಾಕಷ್ಟು  ವಿಶಾಲವಾದ ಆವರಣ ಹೊಂದಿದ್ದು, ಒಳಭಾಗದಲ್ಲಿ  ಒಂದು ಗಂಡು ಗಣಪತಿ ಹಾಗೂ ಹೆಣ್ಣು ಗಣಪತಿಯ ಪ್ರತ್ಯೇಕ ಎರಡು ಚಿಕ್ಕ  ಮಂದಿರಗಳಿವೆ.  ಮುಂದೆ  ಹೊದಂತೆ  ಪ್ರದಕ್ಷಿಣೆಗಾಗಿ  ದೊಡ್ಡದಾದ ಪ್ರಾಕಾರವನ್ನು  ನಿರ್ಮಿಸಲಾಗಿದೆ.  ಒಳ ಭಾಗದ ಗರ್ಭಗುಡಿಯಲ್ಲಿ ಬೆಳ್ಳಿಯ  ಪ್ರಭಾವಳಿಯ ಮಧ್ಯದಲ್ಲಿ  ಕಳಸೇಶ್ವರ  ಲಿಂಗರೂಪದಲ್ಲಿ ನೆಲೆಸಿದ್ದಾನೆ.

ಇನ್ನು   ಈ ಕಳಸ ಕ್ಷೇತ್ರವು  5 ಕಿ.ಮೀ ವ್ಯಾಪ್ತಿಯಲ್ಲಿ ಐದು  ಅತ್ಯಮೂಲ್ಯವಾದ ತೀರ್ಥಹೊಂಡಗಳನ್ನು  ಹೊಂದಿದೆ. ಅವುಗಳೆಂದರೆ  ವಸಿಷ್ಠತೀರ್ಥ,  ನಾಗತೀರ್ಥ – ಇಲ್ಲಿ  ಸ್ನಾನ  ಮಾಡುವುದರಿಂದ ನಾಗದೋಷ ಪರಿಹಾರ, ಕೋಟಿ ತೀರ್ಥ – ಅಗಸ್ತ್ಯರ  ಕೋರಿಕೆಯಂತೆ ಕೋಟಿ  ದೇವತೆಗಳು ನೆಲೆಸಿದ  ತೀರ್ಥ,  ರುದ್ರತೀರ್ಥ, ಅಂಬುತೀರ್ಥ – ಪಾರ್ವತಿ ದೇವಿಗೆ ಅರ್ಪಿತವಾಗಿರುವ  ತೀರ್ಥಕುಂಡ. ಹೀಗೆ ಪಂಚ ತೀರ್ಥಗಳು  ಈ ಕ್ಷೇತ್ರದಲ್ಲಿರುವುದೇ ಇಲ್ಲಿನ  ಇನ್ನೊಂದು ವಿಶೇಷ ಎನ್ನಲಾಗುತ್ತಿದೆ.ಇನ್ನು  ಪ್ರತಿವರ್ಷ  ಶಿವರಾತ್ರಿ ಹಾಗೂ ಗಿರಿಜಾಕಲ್ಯಾಣವನ್ನು ಇಲ್ಲಿ  ಅದ್ದೂರಿಯಾಗಿ   ಆಚರಿಸಲಾಗುತ್ತದೆ.

Advertisement

ಆಶಾ. ಎಸ್‌.ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next