Advertisement

ಕಳಸಾ ಬಂಡೂರಿ ಡಿಪಿಆರ್ ಅನುಮೋದನೆ: ರೈತರಿಗೆ ಹಬ್ಬದ ಸಂಭ್ರಮ

10:00 PM Dec 29, 2022 | Team Udayavani |

ನವಲಗುಂದ : ಈ ಭಾಗದ ಕನಸಿನ ಕೂಸು ಮಹಾದಾಯಿ ಯೋಜನೆಗಾಗಿ ಸತತ ಹೋರಾಟವನ್ನು ಇದೇ ವೇದಿಕೆಯಲ್ಲಿ ಮಾಡುತ್ತಾ ಬಂದಿರುತ್ತೇವೆ. ಬಿಜೆಪಿ ಸರಕಾರ ಡಿಪಿಆರ್ ಹೊರಡಿಸಿರುವುದು ರೈತರಿಗೆ ಹಬ್ಬದ ಸಂಭ್ರಮ ಸೃಷ್ಟಿ ಮಾಡಿದೆ. ಮಹಾದಾಯಿ ಕಳಸಾ ಬಂಡೂರಿ ಕಾಮಗಾರಿ ಕೆಲಸ ತೀವೃಗತಿಯಲ್ಲಿ ಸಾಗಿ ನೀರು ಈ ಭಾಗಕ್ಕೆ ಬರುವ ನಿರೀಕ್ಷೆ ರೈತರಲ್ಲಿ ಇದೆ ಎಂದು ರೈತ ಮುಖಂಡ ಸುಭಾಷಚಂದ್ರ ಗೌಡ ಪಾಟೀಲ ಹೇಳಿದರು.

Advertisement

ಅವರು ಗುರುವಾರ ಪಟ್ಟಣದ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿ ಮಾಲಾರ್ಪಣೆ ಮಾಡಿ ಮಾತನಾಡಿ, ತುಂಬಾ ಸಂತೋಷವಾಗಿದೆ. ಒಂದಲ್ಲ ಎರಡಲ್ಲ ಅನೇಕ ತೊಂದರೆಯನ್ನು ರೈತರು ಅನುಭವಿಸಿ ಕೊನೆಗೂ ಇದರ ಪ್ರತಿಫಲವನ್ನು ರೈತ ಹೋರಾಟಕ್ಕೆ ಸಿಕ್ಕಿದೆ. ಹೋರಾಟದಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸಿದ ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ ರಾಜಕೀಯ ಪಕ್ಷಗಳಿಗೆ ಧನ್ಯವಾದ ತಿಳಿಸುತ್ತೇವೆಂದು ಹೇಳಿದರು.

ಶ್ರಮಿಸಿದ ಎಲ್ಲರಿಗೂ ಅಭಿನಂದನೆ : ಲೋಕನಾಥ ಹೆಬಸೂರ

ಮಹಾದಾಯಿ ಯೋಜನೆಗಾಗಿ ಪಕ್ಷಾತೀತವಾಗಿ ರೈತರು, ವ್ಯಾಪಾರಸ್ಥರು, ಪತ್ರಕರ್ತರು ಎಲ್ಲ ರಾಜಕೀಯ ಪಕ್ಷದವರು ಬೆಂಬಲವನ್ನು ಸೂಚಿಸಿ ಹೋರಾಟಕ್ಕೆ ಸಾಥ ನೀಡಿದ ಫಲದಿಂದ ಬಿಜೆಪಿ ಸರಕಾರ ತಡವಾದರೂ ಮಹಾದಾಯಿ ಅಧಿಸೂಚನೆ ಹೊರಡಿಸಿರುವುದು ತುಂಬಾ ಸಂತೋಷ ಈ ಭಾಗದ ಜಲ್ವಂತ ಸಮಸ್ಯೆ ಮಹಾದಾಯಿ ಕಳಸಾ ಬಂಡೂರಿ ಹೋರಾಟಕ್ಕೆ ಜಯಸಿಕ್ಕಾಂತಾಗಿದೆ ಎಂದು ಪಕ್ಷಾತೀತ ಅಸಂಘಟಿತ ಕಾರ್ಮಿಕ, ರೈತ ಹೋರಾಟದ ಅಧ್ಯಕ್ಷ ಲೋಕನಾಥ ಹೆಬಸೂರ ಹೇಳಿದರು.

ಸುಮಾರು ವರ್ಷಗಳಿಂದ ಕಳಸಾ ಬಂಡೂರಿಗಾಗಿ ಹೋರಾಟ ಮಾಡಿ ಪೋಲಿಸರ ಲಾಠಿ ಏಟು ತಿದ್ದು ಜೈಲು ಸೇರಿ ಉಗ್ರ ಹೋರಾಟವಾಗಿರುವುದನ್ನು ಈ ಸಂದರ್ಭದಲ್ಲಿ ನೆನೆದುಕೊಳ್ಳಬೇಕು. ತಾಲೂಕಿನ ಎಲ್ಲ ಗ್ರಾಮದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಮಹಾದಾಯಿ ಹೋರಾಟಕ್ಕೆ ಹೆಗಲು ಕೊಟ್ಟು ಶ್ರಮವಹಿಸಿದ ಫಲದಿಂದ ಇಂದು ಸರಕಾರ ಡಿಪಿಆರ್ ಅನುಮೋದನೆಯನ್ನು ನೀಡಿದೆ. ಹೋರಾಟಕ್ಕೆ ತಾವು ಕೈಜೋಡಿಸಿದ ತಮ್ಮಗೆಲ್ಲರಿಗೂ ಅಭಿನಂದನೆಯನ್ನು ಹೇಳುತ್ತೇನೆ. ಇನ್ನು ಈ ಭಾಗದ ಸಚಿವರು ಡಿ.ಪಿ.ಆರ್ ಅನುಮೋದನೆಯ ನಂತರ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲವೇ ದಿನಗಳಲ್ಲಿ ಈ ಭಾಗಕ್ಕೆ ನೀರು ಹರಿಯುವಂತೆ ಮಾಡಬೇಕು ಅಷ್ಟೇ ಅಲ್ಲದೇ ಇನ್ನು ಮಹಾದಾಯಿ ಕಳಸಾ ಬಂಡೂರಿಗಾಗಿ ಹೋರಾಟದ ಸಂದರ್ಭದಲ್ಲಿ ಉಳಿದುಕೊಂಡಿರುವಂತಹ ರೈತರ ಮೇಲಿನ ಕೇಸುಗಳನ್ನು ವಜಾ ಮಾಡಬೇಕೆಂದು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಪಕ್ಷಾತೀತ ಹೋರಾಟ ಸಮಿತಿಯ ರೈತರಾದ ಶಿವಪ್ಪ ಸಂಗಳದ, ಬಸಪ್ಪ, ಮಲ್ಲಿಕಾರ್ಜುನಗೌಡ ಪಾಟೀಲ, ಸಂಗಪ್ಪ ನಿಡವಣೆ, ಉಮೇಶ ಪಲ್ಲೇದ, ರವಿ ತೋಟದ, ಮಂಜು ಕುಂಕಮಗಾರ, ರವಿ ತೋಟದ, ಮುರಗಯ್ಯ ಪೂಜಾರ, ಚನ್ನಬಸಪ್ಪ ಜಂಬಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next