Advertisement

ಸ್ಪರ್ಧಾತ್ಮಕ ಯುಗದಲ್ಲಿ ವೈಜ್ಞಾನಿಕ ಜ್ಞಾನ ಅಗತ್ಯ: ರೆಡ್ಡಿ

05:09 PM Jul 21, 2019 | Team Udayavani |

ಕಲಕೇರಿ: ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗವೆಂದು ಕರೆಯಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಲದು, ಜೊತೆಗೆ ವೈಜ್ಞಾನಿಕ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಕೆ.ಸಿ.ರೆಡ್ಡಿ ಫೌಂಡೇಶನ್‌ ಕಾರ್ಯದರ್ಶಿ ವಸಂತಾ ಕವಿತಾ ರೆಡ್ಡಿ ಹೇಳಿದರು.

Advertisement

ಕೆ.ಸಿ. ರೆಡ್ಡಿ ಸರೋಜಮ್ಮ ವೆಲ್ಫೇರ್‌ ಫೌಂಡೇಶನ್‌ ಮತ್ತು ಎನ್‌ಸಿಎಸ್‌ಟಿಸಿ ನ್ಯೂದೆಹಲಿ ಸಹಯೋಗದಲ್ಲಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ವಿಜ್ಞಾನ ಶಿಕ್ಷಣ ಬಗ್ಗೆ ಅಭಿರುಚಿ ಬೆಳೆಸುವುದು ಅವಶ್ಯವಾಗಿದೆ ಎಂದರು.

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸುವುದರ ಜೊತೆಗೆ ಸೃಜನಶೀಲತೆ, ಕೌಶಲ, ಹಾಗೂ ಕ್ರಿಯಾಶೀಲತೆಯನ್ನು ವ್ಯಕ್ತಪಡಿಸಲು ಒಂದು ವೇದಿಕೆ ದೊರೆಯುತ್ತದೆ ಇದರಿಂದ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕೆಂದು ಕರೆ ನೀಡಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂದಿಸಿದಂತೆ ಹೆಚ್ಚಿನ ಅರಿವನ್ನು ಮೂಡಿಸುವ ದೃಷ್ಠಿಯಿಂದ ಕೆ.ಸಿ.ರೆಡ್ಡಿ ಫೌಂಡೇಶನ್‌ ವತಿಯಿಂದ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡದ್ದು ಶ್ಲಾಘನೀಯವಾಗಿದ್ದು,

ಪ್ರೌಡಶಾಲಾ ಮಕ್ಕಳು ತಮ್ಮ ಬುದ್ದಿವಂತಿಕೆಯಿಂದ ತಾವೆ ತಯಾರಿಸಿದ ವಿಜ್ಞಾನ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಿರುವುದರಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಕಲಕೇರಿ ಪಿಎಸ್‌ಐ ನಾಗರಾಜ ಕಿಲಾರೆ ಹೇಳಿದರು.

Advertisement

ಡಾ| ವಿ.ಕೆ. ಜಾಲಹಳ್ಳಿಮಠ, ಆದರ್ಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೆ.ಎ. ಸಿರಸಗಿ, ನಿವೃತ್ತ ಶಿಕ್ಷಕ ಶಾಂತಗೌಡ ಪಾಟೀಲ, ಆನಂದ ಕುಲಕರ್ಣಿ, ಖಾಜಾಮಿನ ವಲ್ಲೀಭಾಯಿ, ಡಾ| ಶಶಿಕಾಂತ ಬಾಗೇವಾಡಿ ಮಾತನಾಡಿದರು.

ಡಾ| ವಿ.ಕೆ. ಜಾಲಹಳ್ಳಿಮಠ ಸಾನ್ನಿಧ್ಯ ವಹಿಸಿದ್ದರು. ಸಿಂದಗಿ ಬಿಇಒ ಹೊನ್ನಪ್ಪ ನಗನೂರ ವಸ್ತು ಪ್ರದರ್ಶನ ಮೇಳ ಉದ್ಘಾಟಿಸಿದರು. ಬಿ.ಜಿ. ಪಾಟೀಲ, ತಾಪಂ ಸದಸ್ಯ ಲಕ್ಕಪ್ಪ ಬಡಗೇರ, ಸುಮಂಗಲಾ ಕೋಳೂರ, ಆರ್‌.ಎಂ. ಬಡಿಗೇರ, ದರಸಮಮ್ಮದ ಮುಲ್ಲಾ, ಅಹ್ಮದಸಾಬ್‌ ಜಾಡಗಾರ, ಪ್ರಶಾಂತ ಪಾಟೀಲ,ಅಣ್ಣಪ್ಪಗೌಡ ಪಾಟೀಲ, ಮುನ್ನಾ ಸಿರಸಗಿ, ಮಹಾಂತೇಶ ಮೂಲಿಮನಿ, ಬಿ.ಡಿ. ಬಾಣಕಾರ, ಎಸ್‌.ಎಸ್‌. ಭಜಂತ್ರಿ ಇದ್ದರು.

ವಸ್ತು ಪ್ರದರ್ಶನದಲ್ಲಿ ಮಕ್ಕಳು ತಯಾರಿಸಿದ ಸ್ಮಾರ್ಟ್‌ಸಿಟಿ ಕಲ್ಪನೆ, ತ್ಯಾಜ್ಯ ವಸ್ತುಗಳ ಮರುಬಳಕೆ ಹಾಗೂ ನಿರ್ವಹಣೆ, ಮಳೆ ನೀರು ಕೊಯ್ಲು ವಿಧಾನ, ಸೋಲಾರ್‌ ಪ್ಲಾನೆಟ್, ನೀರು ಗಾಳಿಯ ಕಲ್ಮಷ ಮತ್ತು ಅರಣ್ಯಗಳ ನಾಶದಿಂದ ಉಂಟಾಗುವ ದುಷ್ಪರಿಣಾಮ ಹೀಗೆ ಎರಡು ನೂರಕ್ಕೂ ಹೆಚ್ಚು ವಿವಿಧ ಬಗೆಯ ವಿಜ್ಞಾನ, ತಂತ್ರಜ್ಞಾನ ಹಾಗೂ ಪರಿಸರಕ್ಕೆ ಸಂಬಂಧಿಸಿದ ಮಾದರಿಗಳು ಎಲ್ಲರ ಮೆಚ್ಚುಗಗೆ ಪಾತ್ರವಾದವು. ಕಲಕೇರಿ ಭಾಗದ ಸುಮಾರು 7-8 ಪ್ರೌಢಶಾಲೆಗಳ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಸ್ತು ಪ್ರದರ್ಶನ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next