Advertisement

ಇದ್ದೂ ಇಲ್ಲದಂತಾದ ಶುದ್ಧ ಕುಡಿಯುವ ನೀರಿನ ಘಟಕ

11:24 AM Feb 29, 2020 | Naveen |

ಕಲಾದಗಿ: ಗ್ರಾಮೀಣ ಜನರ ಆರೋಗ್ಯ ಸುಧಾರಣೆಗೆ ಸರಕಾರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಶುದ್ಧ ನೀರನ್ನು ಒದಗಿಸುತ್ತಿದೆ. ಆದರೆ, ಹಿರೇಶೆಲ್ಲಿಕೇರಿಯಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಎಲ್ಲದಂತಾಗಿದೆ.

Advertisement

ಹಿರೇಶೆಲ್ಲಿಕೇರಿ ಗ್ರಾಮದಲ್ಲಿ ಹಿಂದಿನ ಶಾಸಕರಾಗಿದ್ದ ಜೆ.ಟಿ. ಪಾಟೀಲ ಅವಧಿಯಲ್ಲಿ ಘಟಕ ನಿಮಾಣಗೊಳಿಸಿ ಘಟಕ ಉದ್ಘಾಟಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಉದ್ಘಾಟನೆಯಾದಾಗಿನಿಂದ ಘಟಕ ಪದೇ ಪದೇ ದುರಸ್ತಿಗೆ ಬರುತ್ತಿದ್ದು, ಜನರಿಗೆ ಶುದ್ಧ ನೀರು ಮಾಯಾಜಲ ಇದ್ದಂತೆ ಎಂಬ ಅನುಮಾನ ಮೂಡಿದೆ. ಒಮ್ಮೆ ನೀರು ದೊರೆತರೆ, ಮತ್ತೆರಡು ದಿನದಲ್ಲಿ ಘಟಕ ಬಂದ್‌ ಆಗಿರುತ್ತದೆ. ಘಟಕ ಉದ್ಘಾಟನೆಯಾದಾಗಿನಿಂದ ನೀರು ಪಡೆದ ದಿನಗಳಿಗಿಂತ ನೀರು ಪಡೆಯದ ದಿನಗಳೆ ಹೆಚ್ಚು ಎನ್ನುತ್ತಿದ್ದಾರೆ ಗ್ರಾಮಸ್ಥರು.

2 ಸಾವಿರಕ್ಕೂ ಅಧಿ ಕ ಜನ: ಹಿರೇಶೆಲ್ಲಿಕೇರಿಯಲ್ಲಿ 600 ಕುಟುಂಬಗಳು, 2000ಕ್ಕೂ ಅ ಧಿಕ ಜನಸಂಖ್ಯೆ ಹೊಂದಿದೆ. ಕಲಾದಗಿ, ನೀರಬೂದಿಹಾಳ, ಚಿಕ್ಕಶೆಲ್ಲಿಕೇರಿ ಶುದ್ಧ ಕುಡಿಯುವ ನೀರಿನ ಘಟಕದಿಂದಲೇ ನೀರನ್ನು ತಂದು ಕುಡಿಯಬೇಕಾದ ಪರಿಸ್ಥಿತಿ ಇದೆ.

ನೀರಿಗಾಗಿ ಅಲೆದಾಟ: ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಐದಾರು ಕಿಲೋ ಮೀಟರ್‌ ದೂರವಿರುವ ಕಲಾದಗಿ, ನೀರಬೂದಿಹಾಳ, ಚಿಕ್ಕಶೆಲ್ಲಿಕೇರಿ ಗ್ರಾಮಕ್ಕೆ ಬಂದು ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತುಂಬಿಕೊಂಡು ಹೋಗಿ ಶುದ್ದ ನೀರು ಸೇವನೆ ಮಾಡುತ್ತಿದ್ದಾರೆ.

2ರೂಗೆ 20 ರೂ. ಖರ್ಚು: ಇಪ್ಪತ್ತು ಲೀಟರ್‌ ಬಾಟಲಿ ನೀರಿಗೆ 2 ರೂಪಾಯಿ ನಾಣ್ಯ ಇಲ್ಲವೇ ಕಾರ್ಡ್‌ ಹಚ್ಚಿ ತುಂಬಿಕೊಂಡು ಹೋಗಿ ಕುಡಿಯುವ ಬದಲು ದೂರ ಊರಿಗೆ ಹೋಗಿ ಬರಲು 20 ರೂಪಾಯಿ ಪೆಟ್ರೋಲ್‌ ಖರ್ಚು ಮಾಡಬೇಕಾಗಿದೆ ಎಂದು ಗ್ರಾಮಸ್ಥ ಬಸವಂತಪ್ಪ ಸೂಳಿಕೇರಿ ದೂರಿದ್ದಾರೆ.

Advertisement

ಸರಕಾರದ ಆದೇಶ ಮೇರೆಗೆ ಆರ್‌ಒ ಪ್ಲಾಂಟ್‌ಗಳನ್ನು ನಿರ್ವಹಣೆಗೆ ಖಾಸಗಿ ಏಜೆನ್ಸಿಯವರಿಗೆ ನೀಡಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಯಾರು ಏಜೆನ್ಸಿ ಪಡೆದಿದ್ದಾರೋ ಅವರಿಗೆ ಶೀಘ್ರ ದುರಸ್ತಿ ಮಾಡಲು ಸೂಚನೆ ನೀಡಲಾಗುವುದು.
ಎನ್‌.ವಾಯ್‌.ಬಸರಿಗಿಡದ,
ಬಾಗಲಕೋಟೆ ಇಒ

ಗ್ರಾಮದಲ್ಲಿ ಮೊದಲೇ ಗಡಸು ನೀರು ಇದೆ. ಜನರು ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸಿಗುತ್ತಿಲ್ಲ. ಪದೇ ಪದೇ ರಿಪೇರಿಗೆ ಬರುತ್ತದೆ. ಇದರಿಂದ ಜನರಿಗೆ ತೊಂದರೆಯಾಗಿದೆ.
ರಾಜು ಮರಪುಲಿ,
ಹಿರೇಶೆಲ್ಲಿಕೇರಿ ಗ್ರಾಮಸ್ಥ

ಚಿಕ್ಕಶೆಲ್ಲಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿನ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅದರಲ್ಲಿ ಎರಡು ಗ್ರಾಪಂ ನಿರ್ವಹಣೆ ಮಾಡುತ್ತಿತ್ತು. ಉಳಿದೆರಡು ಐದು ವರ್ಷದವರೆಗೆ ಗುತ್ತಿಗೆ ಪಡೆದವರದಾಗಿತ್ತು. ಈಗ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಘಟಕದ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಯವರಿಗೆ ನೀಡಲಾಗಿದೆ. ದುರಸ್ತಿಗೆ ಕ್ರಮ ವಹಿಸಲಾಗುವುದು.
ಸಿ.ಎಚ್‌.ಪವಾರ,
ಚಿಕ್ಕಶೆಲ್ಲಿಕೇರಿ ಗ್ರಾಪಂ ಪಿಡಿಒ

„ಚಂದ್ರಶೇಖರ .ಆರ್‌.ಎಚ್‌

Advertisement

Udayavani is now on Telegram. Click here to join our channel and stay updated with the latest news.

Next