Advertisement

ನರೇಗಾ ಕೂಲಿ ಹಣಕ್ಕಾಗಿ ಧರಣಿ ಸತ್ಯಾಗ್ರಹ

01:27 PM Dec 19, 2019 | Naveen |

ಕಲಘಟಗಿ: ತಾಲೂಕಿನ ತಂಬೂರ ಗ್ರಾಪಂ ವ್ಯಾಪ್ತಿ ಎನ್‌ಆರ್‌ಇಜಿ ಕಾಮಗಾರಿಯಲ್ಲಿ ಕೂಲಿ ಹಣ ಪಾವತಿಸಲು ಹಾಗೂ ಕೂಲಿ ಕೆಲಸ ನೀಡಲು ಆಗ್ರಹಿಸಿ ಅಲ್ಲಿನ ಕೂಲಿ ಕಾರ್ಮಿಕರು ಮತ್ತು ಕಾಯಕ ಬಂಧುಗಳು ಗ್ರಾಪಂ ಕಾರ್ಯಾಲಯ ಎದುರು ಬುಧವಾರ ಅರ್ನಿದಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

Advertisement

ತಾವು ಕಳೆದ ಮೇ ತಿಂಗಳಿನಲ್ಲಿ ಮಾಡಿದ ಕೂಲಿ ಹಣವನ್ನು ಇದುವರೆಗೂ ಪಾವತಿಸಿಲ್ಲ. 2018-19ನೇ ಸಾಲಿನ ನಿರುದ್ಯೋಗ ಭತ್ಯೆ ನೀಡಿರುವುದಿಲ್ಲ. ಅಲ್ಲದೇ ಅಂದಿನಿಂದ ಇಂದಿನವರೆಗೂ ನಮಗೆ ಕೂಲಿ ಕೆಲಸ ನೀಡುತ್ತಿಲ್ಲ. ಕಾನೂನಿನನ್ವಯ ಕೆಲಸ ಮಾಡಿದ 15 ದಿನಗಳಲ್ಲಿ ಕೂಲಿ ಪಾವತಿಸಬೇಕು. ಒಂದು ವೇಳೆ ಕೂಲಿ ಪಾವತಿಸದಿದ್ದಲ್ಲಿ ವಿಳಂಬ ಪಾವತಿ ಕೊಡಬೇಕು ಹಾಗೂ ಮುಂದೆ ಕೆಲಸ ಮಾಡಲು ಎನ್‌ಎಂಆರ್‌ ಕೊಡಬೇಕು. 2018 ಮತ್ತು 2019 ಎರಡು ವರ್ಷದ ಕಾಯಕ ಬಂಧುಗಳ ಪಗಾರ ನೀಡಿಲ್ಲ. ಇಲ್ಲಿನ ಅಧಿ ಕಾರಿಗಳ ವಿಳಂಬ ನೀತಿಯಿಂದಾಗಿ ನಮ್ಮೆಲ್ಲರ ದಿನನಿತ್ಯದ ಜೀವನ ನಡೆಸುವುದೇ ದುಸ್ತರವಾಗಿದೆ. ತಮಗೆಲ್ಲರಿಗೂ ತಕ್ಷಣ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಧರಣಿಗೆ ಮುಂದಾದರು.

ಸುದ್ದಿ ತಿಳಿದ ಕೂಡಲೇ ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಗ್ರಾಪಂ ಅಧ್ಯಕ್ಷೆ ನಿರ್ಮಲಾ ಉಡಪಿ, ಅಭಿವೃದ್ಧಿ ಅಧಿ ಕಾರಿ ರವಿರಾಜಗೌಡ ಹಿರೇಗೌಡ್ರ, ತಾಪಂನ ಎಸ್‌.ದಿವಾಕರ ಅವರು ಧರಣಿ ಸ್ಥಳಕ್ಕೆ ಆಗಮಿಸಿ, ತಕ್ಷಣ ಎನ್‌ಎಂಆರ್‌ ನೀಡುವ ವ್ಯವಸ್ಥೆ ಮಾಡಲಾಗುವುದು. ಕೂಲಿ ಹಣ ಸರಕಾರದಿಂದಲೇ ಬರಬೇಕಿದೆ. ಒಂದು ವಾರದಲ್ಲಿ ಆ ಹಣವು ನೇರವಾಗಿ ನಿಮ್ಮ ಖಾತೆಗಳಿಗೆ ಜಮೆಯಾಗಲಿದೆ. ಬಾಕಿ ಉಳಿದ ಪಗಾರವನ್ನೂ ನೀಡಲಾಗುವುದು. ಮುಂದೆ ಯಾವುದೇ ರೀತಿಯ ಸಮಸ್ಯೆಗಳುಂಟಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.

ಗ್ರಾಮದ ಕೂಲಿ ಕಾರ್ಮಿಕರ ಕಾಯಕ ಬಂಧುಗಳಾದ ಮಹಾದೇವಿ ಹಿರೇಮಠ, ಜಯಶ್ರೀ ಕಳಸೂರ, ಸುಗಂಧಾ ಡೌರಿ, ಬೇಗಮ್‌ ನಾನಾಪುರಿ, ನಜಬುನ್‌ ಹುಲಗೂರ, ಮನ್ನಾಬಿ ಟೊಣ್ಣೆಮೀರಾನವರ, ನಂದಾ ಬಾವಕಾರ, ಫಕ್ಕಿರೇಶ ಮಠಪತಿ, ಸುಭಾಷ ಜಾಧವ, ಜನ್ನತಬೀ ಶೆರೆವಾಡ, ಗೌಸುಸಾಬ ನಂದಿಗಟ್ಟಿ, ಮಾರುತಿ ಕಳಸೂರ, ಫಕ್ಕೀರ ಜಾಧವ, ಲಲಿತಾ ಪಾಳೇಕರ, ವಿರುಪಾಕ್ಷಿ ಬಾವನ್ನವರ, ದೇವಕ್ಕ ಪಾಟೀಲ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next