Advertisement

ತುಂಬಿದ ಕಳಸಕೊಪ್ಪ ಕೆರೆ: ಕೋಡಿ ಮೂಲಕ ನೀರು ಹೊರಗೆ

07:50 PM Sep 28, 2019 | Naveen |

„ಚಂದ್ರಶೇಖರ ಆರ್‌.ಎಚ್‌
ಕಲಾದಗಿ: ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ ಕಳಸಕೊಪ್ಪ ಕೆರೆ ಭರ್ತಿಯಾಗಿದೆ. ಬಾಗಲಕೋಟೆ ತಾಲೂಕಿನ ಐದು ಗ್ರಾಮಗಳ 1142 ಹೆಕ್ಟೇರ್‌ ಪ್ರದೇಶ ನೀರಾವರಿಗೆ ಒಳಪಡಿಸುವ ಕಳಸಕೊಪ್ಪ ಕೆರೆ ಬುಧವಾರ ರಾತ್ರಿ ಸಂಪೂರ್ಣವಾಗಿ ತುಂಬಿ ಕೋಡಿಯ ಮೂಲಕ ನೀರು ಹೊರ ಬೀಳುತ್ತಿದೆ.

Advertisement

ಅಭಾವ ಕಡಿಮೆ: ಕೆರೆ ತುಂಬಿಕೊಳ್ಳುವುದರಿಂದ ಈ ಭಾಗದ ಹತ್ತಾರು ಗ್ರಾಮಗಳ ರೈತರ ಕೊಳವೆ ಬಾವಿಗಳು ಪುನಶ್ಚೇತನಗೊಳ್ಳುತ್ತಿದ್ದು ರೈತರಿಗೆ ಆಸರೆಯಾಗಿದೆ.

ಕೊಡಿ ಮೂಲಕ ಹೊರ: ಕೆರೆಗೆ ಹೇರಕಲ್‌ ದಕ್ಷಿಣ ಏತ ನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ತುಂಬಿಸುತ್ತಿರುವುದು ಈ ಭಾಗದ ರೈತರ ಮೊಗದಲ್ಲಿ ಸಂತಸ ಉಂಟಾಗಿದೆ. 2016ರಲ್ಲಿ ಈ ಕೆರೆಗೆ ಮೊದಲ ಬಾರಿಗೆ ದಕ್ಷಿಣ ಹೇರಕಲ್‌ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಲು ಚಾಲನೆ ನೀಡಲಾಗಿತ್ತು, ಆ ವರ್ಷ ಪೂರ್ಣ ಪ್ರಮಾಣದಲ್ಲಿ ತುಂಬಿರಲಿಲ್ಲ, 2017, 2108ರಲ್ಲಿ ಕೆರೆಯು ತುಂಬಿ ಕೊಡಿಯ ಮೂಲಕ ನೀರು ಹೊರ ಚೆಲ್ಲಿದೆ. ಈ ವರ್ಷವೂ ತುಂಬಿ ಕೊಡಿಯ ಮೂಲಕ ಹೊರ ಚೆಲ್ಲುತ್ತಿದೆ. ರೈತರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ಮಳೆಯಿಂದ ಶೀಘ್ರ ಭರ್ತಿ: ಪ್ರಸಕ್ತ ವರ್ಷ ಜು 14ರಂದು ಕೆರೆಗೆ ನೀರು ತುಂಬಲು ಚಾಲನೆ ನೀಡಲಾಗಿತ್ತು. ಈ ವರ್ಷ
ಕೆರೆಯು ಬಹು ಬೇಗ ತುಂಬಿಕೊಂಡಿದೆ. ನಿರಂತರ ಯಾವುದೇ ಅಡೆ ತಡೆ ಇಲ್ಲದೆ ಜಾಕ್‌ವೆಲ್‌ ಪಂಪ್‌ಹೌಸ್‌ ಮೂಲಕ ನೀರು ತುಂಬಿಸುತ್ತಿರುವುದು ಮತ್ತು ಕಳೆದ ಮೂರು ದಿನದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳು
ತುಂಬಿ ಬೋರ್ಗರೆಯುತ್ತಿವೆ.

ಸಣ್ಣ ಜರಿಯಂತಾದ ಕೋಡಿ: ಕಳಸಕೊಪ್ಪ ಕೆರೆ 200 ಹೆಕ್ಟೇರ್‌ ಪ್ರದೇಶವನ್ನು ಮುಳುಗಡೆಯಾಗಿಸಿ ನೀರು ತುಂಬಿ ಹೊರಚೆಲ್ಲುವ ಓಗಿ ಮಾದರಿಯ ಕೋಡಿ 909 ಅಡಿ ಉದ್ದವಿದೆ.

0.24 ಟಿಎಂ.ಸಿ ನೀರು: ಕೆರೆ ನೀರು ನಿಲ್ಲುವ ಎತ್ತರ 5.4
ಮೀಟರನಷ್ಟಿದ್ದು, 17.8 ಅಡಿ ನೀರು ಸಂಗ್ರಹಣಾ ಸಾಮರ್ಥ ಇದ್ದು ನೀರಿನ ಮಟ್ಟ 5.4 ಮೀಟರ್‌ನಷ್ಟು ತುಂಬಿಕೊಂಡು 17.8 ಅಡಿ ತುಂಬಿಕೊಂಡಿದೆ. ಒಟ್ಟು 0.24 ಟಿಎಂ.ಸಿ ನೀರು ಸಂಗ್ರಹಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next