Advertisement

ಬಸವನಾಡಲ್ಲಿ ಶಶಿಪ್ರಭೆ

07:29 PM Jun 18, 2021 | Adarsha |

ಅಧಿಕಾರ ಸುಲಭಕ್ಕೆ ಸಿಗುವುದಿಲ್ಲ ಹಾಗೂ ಸಿಕ್ಕಅಧಿಕಾರ ಸಮಯೋಚಿತ ಬಳಕೆ ಆಗದಿದ್ದಲ್ಲಿಅದು ಸವಕಲಾಗುತ್ತದೆ. ಅಲ್ಲದೆ ಅಧಿಕಾರ ಎಂಬುದುಕೇವಲ ಚಲಾಯಿಸಲಷ್ಟೇ ಇರುವುದಲ್ಲ. ಅದು ನಿನ್ನನ್ನುನಂಬಿರುವ ಜನರ ಸೇವೆ ಮಾಡಲು ಸಿಕ್ಕ ಸದಾವಕಾಶ.ಇಂಥ ಜನಸೇವೆ ಮಾಡುವ ಕಾರ್ಯದಲ್ಲಿ ಅನೇಕ ಸಮಸ್ಯೆ, ಸವಾಲುಗಳು ಎದುರಾಗುವುದು ಸಹಜ.

Advertisement

ಅವುಗಳನ್ನು ಸಮರ್ಥವಾಗಿ ಎದುರಿಸಲು ಇಚ್ಛಾಶಕ್ತಿ,ಆತ್ಮವಿಶ್ವಾಸ, ಛಲಗಾರಿಕೆ ಬೇಕು. ಇವೆಲ್ಲ ಬಲ್ಲವರುಹೇಳುವ ತಿಳಿವಳಿಕೆಯ ಮಾತುಗಳು. ಇಂಥ ಆದರ್ಶದಮಾತುಗಳಲ್ಲಿ ಗಟ್ಟಿ ವಿಶ್ವಾಸವಿಟ್ಟು ಅದನ್ನೇ ತಮ್ಮಜೀವನದಲ್ಲಿ ರೂಢಿಸಿಕೊಂಡು ಜನ ಸೇವೆಗೆ ಪಣತೊಟ್ಟವರು ಸಚಿವೆ ಶಶಿಕಲಾ ಜೊಲ್ಲೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಸಚಿವೆಯಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಂಪುಟದಲ್ಲಿರುವಏಕೈಕ ಸಚಿವೆ ಎಂಬ ಹಿರಿಮೆಸಂಪಾದಿಸಿರುವ ಶಶಿಕಲಾಜೊಲ್ಲೆ ಅವರಿಗೆಸಿಕ್ಕಅಧಿಕಾರ ಸಾಲು ಸಾಲು ಮುಳ್ಳಿನ ಹಾದಿಯಾಗಿತ್ತು.

ಸಮಸ್ಯೆಯ ಆಗರವೇ ಆಗಿತ್ತು. ಹದಿನಾಲ್ಕು ತಿಂಗಳ ಹಿಂದೆಸಚಿವ ಸಿ.ಸಿ. ಪಾಟೀಲ ಅವರಿಂದ ವಿಜಯಪುರ ಜಿಲ್ಲೆಯಉಸ್ತುವಾರಿ ಅಧಿಕಾರ ಜೊಲ್ಲೆಯವರ ಹೆಗಲೇರಿದಾಗಬಸವನಾಡಿನಲ್ಲಿ ಅವರನ್ನು ಸ್ವಾಗತಿಸಿದ್ದು ಕೋವಿಡ್‌ ಮೊದಲ ಅಲೆ. ಅದರ ಬೆನ್ನಲ್ಲೇಬಾಧಿಸಿದ ಅತಿವೃಷ್ಠಿ ಹಾಗೂ ಜಿಲ್ಲೆಯಜೀವನದಿಗಳು ಸೃಷ್ಟಿಸಿದ ಪ್ರವಾಹ.ಆದರೆ ಎಂತಹ ಸವಾಲುಗಳೇಎದುರಾದರೂ ಧೃತಿಗೆಡದೆವಿಜಯಪುರ ಜಿಲ್ಲೆಯ ಸಮಗ್ರಅಭ್ಯುದಯಕ್ಕೆ ಪಣ ತೊಟ್ಟವರುಶಶಿಕಲಾ ಜೊಲ್ಲೆ.ನನ್ನ ಪತಿಗೆ ಶೈಕ್ಷಣಿಕ ಕಾಣಿಕೆ ನೀಡಿರುವವಿಜಯಪುರ ಜಿಲ್ಲೆ ನನ್ನ ಮಟ್ಟಿಗೆ ತವರು. ಇಲ್ಲಿನಸೈನಿಕ ಶಾಲೆಯಲ್ಲಿ ಓದಿರುವ ನನ್ನ ಪತಿ ಅಣ್ಣಾಸಾಹೇಬ್‌ಜೊಲ್ಲೆ ಅವರಿಗೆ ಅಕ್ಷರ ದೀಕ್ಷೆ ನೀಡಿದ ಬಸವೇಶ್ವರರಪುಣ್ಯಭೂಮಿ ಇದು.

ನಾನು ಈ ನೆಲದ ಋಣ ತೀರಿಸಲುಬಂದಿರುವ ಈ ಜಿಲ್ಲೆಯ ಮನೆ ಮಗಳು. ಜಿಲ್ಲೆಯಹಿರಿಯರಿಗೆ ಮಗಳಾಗಿ, ಕಿರಿಯರಿಗೆ ಸಹೋದರಿಯಾಗಿ,ಮಕ್ಕಳ ಪಾಲಿಗೆ ಮಮತೆಯ ಮಾತೆಯಾಗಿ ನಿಮ್ಮೊಂದಿಗೆನಾನಿದ್ದೇನೆ. ಜಿಲ್ಲೆಯ ಜನರ ಸಮಸ್ಯೆ ಆಲಿಸಿ, ಅವರಕಣ್ಣೀರು ಒರೆಸುವುದು ನನ್ನ ಆದ್ಯ ಕರ್ತವ್ಯ.ಜಿಲ್ಲೆಯ ಜನ ನಿರ್ಭಯವಾಗಿರಿ.ಈ ಮಹತ್ವದ ಸೇವಾ ಕಾಯಕಮಾಡಲು ನನಗೆ ಅವಕಾಶಸಿಕ್ಕಿರುವುದು ನನ್ನಸುದೈವ ಎಂದಿದ್ದಸಚಿವೆಶಶಿಕಲಾ ಜೊಲ್ಲೆ ವಿನಮ್ರ ಭಾವದಿಂದ ಹೇಳಿದ್ದನ್ನು ಛಲದಿಂದತಮ್ಮ ಕಾರ್ಯಗಳ ಮೂಲಕ ಸಾಧಿಸಿ ತೋರಿಸುತ್ತಿದ್ದಾರೆ.

ಕಳೆದ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಕಾಣಿಸಿಕೊಂಡರೂಪಾಂತರಿ ಕೊರೊನಾ ಸೋಂಕಿನ ಎರಡನೇ ಅಲೆಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆಸರಣಿ ಸಭೆ ನಡೆಸಿ ಪರಿಸ್ಥಿತಿ ನಿಭಾಯಿಸುವಲ್ಲಿಇನ್ನಿಲ್ಲದ ಪರಿಶ್ರಮ ಪಟ್ಟರು. ಜನರಲ್ಲಿಕೋವಿಡ್‌ ಜಾಗೃತಿ ಮೂಡಿಸಲುಸ್ವಯಂ ಬೀದಿಗೆ ಇಳಿದ ಸಚಿವೆಶಶಿಕಲಾ ಜೊಲ್ಲೆ, ಸಾರ್ವಜನಿಕರಿಗೆಮಾಸ್ಕ್ ವಿತರಣೆ ಮೂಲಕ ಸೋಂಕನ್ನುಎದುರಿಸುವ ಹಾಗೂ ಅದರೊಂದಿಗೆಸುರಕ್ಷಿತ ಕ್ರಮಗಳೊಂದಿಗೆ ಜೀವಿಸುವಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.ಕೋವಿಡ್‌ ವಾರಿಯರ್ಸ್‌ಗಳಿಗೆ ಆತ್ಮಸೈ§ರ್ಯ,ಮಂಗಳಮುಖೀಯರಿಗೆ ನೆರವು, ಫುಡ್‌ ಕಿಟ್‌ ವಿತರಣೆ,ಜಿಲ್ಲಾ ವಾಸ್ತವ್ಯ ಹೀಗೆ ಅನೇಕ ರೀತಿಯಲ್ಲಿ ಕೊರೊನಾಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕಜಿಲ್ಲೆಯಲ್ಲಿ ರಾಜಕೀಯವಾಗಿ ತಮಗೆ ಲಾಭ ಇಲ್ಲದಿದ್ದರೂ”ನಾನು ವಿಜಯಪುರ ಜಿಲ್ಲೆಯ ಹೆಮ್ಮೆಯ ಮಗಳಾಗಿ ಸೇವೆಮಾಡುವೆ’ ಎಂದು ಜಿಲ್ಲೆಯ ಜನತೆಗೆ ಕೊಟ್ಟಿದ್ದ ವಚನ ಉಳಿಸಿಕೊಂಡಿದ್ದಾರೆ.

Advertisement

ಕೋವಿಡ್‌ ಸೋಂಕಿನ ಭೀಕರತೆ ಸಂದರ್ಭದಲ್ಲಿಸವಾಲುಗಳನ್ನು ಎದುರಿಸುವ ಹಂತದಲ್ಲಿ ಸ್ವಯಂ ಕೋವಿಡ್‌ಸೋಂಕಿಗೆ ಸಿಲುಕಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರು,ತಾವೇ ಆಸ್ಪತ್ರೆ ಸೇರಿ ವೈದ್ಯಕೀಯ ಆರೈಕೆ ಪಡೆಯುತ್ತಿದ್ದಸಂದರ್ಭದಲ್ಲೂ ವಿಜಯಪುರ ಜಿಲ್ಲೆ ಜನತೆಯ ಯೋಗ ಕ್ಷೇಮ ವಿಚಾರಿಸುತ್ತಿದ್ದರು.

ವಿಜಯಪುರ ಜಿಲ್ಲಾಡಳಿತದಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತ,ಪರಿಸ್ಥಿತಿ ನಿಭಾಯಿಸುವಲ್ಲಿವಿಶೇಷ ನಿಗಾಇರಿಸಿದ್ದರು.ಆರ್‌ಟಿಪಿಸಿಆರ್‌ ಕೇಂದ್ರಗಳಸ್ತಾಪನೆ-ಆಕ್ಸಿಜನ್‌ ಘಟಕಗಳಮಂಜೂರುಕೊರೊನಾ ಮೊದಲ ಅಲೆ ಗಂಭೀರ ಸ್ವರೂಪದಲ್ಲಿದ್ದಾಗಲೇಲಾಕ್‌ಡೌನ್‌ ನಿರ್ಬಂಧ ವಿಧಿಸಿದ್ದಾಗಲೇ ಜಿಲ್ಲೆಗೆ ಮೊದಲಬಾರಿ ಆಗಮಿಸಿದ ಶಶಿಕಲಾ ಜೊಲ್ಲೆ ಆತಂಕ ಪಡಲಿಲ್ಲ.ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿನಾವು ಯಶಸ್ವಿಯಾಗುತ್ತೇವೆ.

ಜಿಲ್ಲೆಗೆ ತ್ವರಿತವಾಗಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪಿಸಲು ಪ್ರಾಮಾಣಿಕಪ್ರಯತ್ನ ಮಾಡುತ್ತೇವೆ ಎಂದು ವಚನ ಕೊಟ್ಟಿದ್ದರು.ಕೊಟ್ಟ ಮಾತಿನಂತೆ ಜಿಲ್ಲೆಗೆ ಸರ್ಕಾರಿ ಹಾಗೂ ಖಾಸಗಿಆಸ್ಪತ್ರೆಗಳಲ್ಲಿ ಕೋವಿಡ್‌ ಪರೀಕ್ಷೆಯ ಪ್ರಯೋಗಾಲಯಸ್ಥಾಪಿಸಿ, ಕೊಟ್ಟ ಮಾತಿಗೆ ತಪ್ಪಲಾರೆ ಎಂಬುದನ್ನುಸತ್ಯವಾಗಿಸಿದರು. ಇದರಿಂದ ಗಂಟಲು ದ್ರವ ಮಾದರಿಪರೀಕ್ಷೆಗಾಗಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಜಿಲ್ಲೆಗಳಪ್ರಯೋಗಾಲಯದ ಒತ್ತಡದಿಂದ ಫಲಿತಾಂಶ ವಿಳಂಬಆಗುತ್ತಿದ್ದ ಸಮಸ್ಯೆ ನೀಗಿದೆ. ಇದೀಗ ಬಸವನಾಡಿನಜನತೆಗಾಗಿ ಮೂರು ಆಕ್ಸಿಜನ್‌ ಘಟಕಗಳನ್ನು ಮಂಜೂರಿಮಾಡಿಸಿದ್ದಾರೆ. ವಿಜಯಪುರ, ಮುದ್ದೇಬಿಹಾಳ ಹಾಗೂಬಸವನಬಾಗೇವಾಡಿ ತಾಲೂಕಗಳಲ್ಲಿ ತಲಾ 81 ಲಕ್ಷ ರೂ.ವೆಚ್ಚದಲ್ಲಿ ಆಕ್ಸಿಜನ್‌ ಘಟಕ ನಿರ್ಮಿಸುವ ಕಾರ್ಯದಲ್ಲಿತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next