ಆಳಂದ: ಕೊವಿಡ್-19 ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ವರವಾಗಬೇಕಿರುವ ಸ್ಥಳೀಯ ಸಾರ್ವಜನಿಕ ಆಸ್ಪತ್ರೆ ಹಲವು ಕೊರತೆಗಳಿಂದ ಬಳಲುತ್ತಿದ್ದು, ಮಂಗಳವಾರ ಸಂಸದ ಭಗವಂತ ಖೂಬಾ ಭೇಟಿ ನೀಡಿದ ಮೇಲೆ ಬದಲಾವಣೆ ಕಾಣುತ್ತದೆಯೇ ಎಂದು ಕಾಯ್ದು ನೋಡಬೇಕಿದೆ.
ಸಂಸದರ ಭೇಟಿ ಬೆನ್ನಲ್ಲೇ ಮಾದನಹಿಪ್ಪರಗಾ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾಗಿದ್ದ ಕೊರೊನಾ ವಾರಿಯರ್ ಅನಿಲ ವಿಠuಲ ಖಂಡೆ (35) ಎನ್ನುವರು ಸೋಂಕು ತಗುಲಿ ಮೃತಪಟ್ಟಿದ್ದಾರೆ. ಮೃತರು ಸೋಂಕಿಗೆ ಒಳಗಾದ ಮೇಲೆ ಏ.23ರಂದು ಕಲಬುರಗಿಯ ವಾತ್ಸಲ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ (6ನೇ ದಿನಕ್ಕೆ) ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತ ಸಿಬ್ಬಂದಿ ಮಹಾರಾಷ್ಟ್ರ ಗಡಿ ಭಾಗದ ಹಿರೋಳಿ ಗಡಿ ಚೆಕ್ ಪೋಸ್ಟ್‌ನಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸೋಂಕು ತಗುಲಿತ್ತು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಇದುವರೆಗೂ 2495 ಜನರಿಗೆ ಕೊರೊನಾ ಸೋಂಕು ತಗಲಿದೆ. ಈ ಪೈಕಿ 1966 ಮಂದಿ ಗುಣಮುಖರಾಗಿದ್ದರೇ, 31 ಜನರ ಬಲಿ ತೆಗೆದುಕೊಂಡಿದೆ. ಇಷ್ಟಾಗಿಯೂ ಸೋಂಕಿತರಿಗೆ ಸ್ಥಳೀಯ ಆಸ್ಪತ್ರೆಯಲ್ಲೇ ವೆಂಟಿಲೇಟರ್, ಸಮರ್ಪಕ ಆಕ್ಸಿಜನ್, ಐಸಿಯುನಂತ ಸೌಲಭ್ಯ ಒದಗಿಸದೇ ಇರುವುದು ವಿಪರ್ಯಾಸವಾಗಿದೆ. 140 ಹಳ್ಳಿ ಒಳಗೊಂಡ ತಾಲೂಕು ಕೇಂದ್ರ ಆಳಂದ ಪಟ್ಟಣದ ಬೃಹತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್, ಸಿಲಿಂಡರ್ ಹಾಗೂ ವೈದ್ಯರು, ಸಿಬ್ಬಂದಿ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ವೈದ್ಯರು ಹಿಂದೆ ಮುಂದೆ ನೋಡುವ ದಯನೀಯ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಹೊರತಲ್ಲ ಎನ್ನುವಂತೆ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸೌಲಭ್ಯ ಲಭ್ಯವಾಗುತ್ತಿಲ್ಲ. ತಾಲೂಕು ಆಸ್ಪತ್ರೆಗೆ ಬಂದರೆ ಇಲ್ಲೂ ಸಹ ಸಿಲಿಂಡರ್ ಕೊರತೆ ಆಗುತ್ತಿರುವ ಪರಿಸ್ಥಿತಿ ರೋಗಿಗಳಿಗೆ ಹಾಗೂ ವೈದ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿಗೆ ಸೂಕ್ತ ಚಿಕಿತ್ಸೆ ಇಲ್ಲದ್ದಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ಮಂದಿ ದಾಖಲಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಭರಿಸಿದ್ದಾರೆ.
ಇಷ್ಟಾಗಿಯೂ ಕೆಲವರು ಜೀವ ಉಳಿಸಿಕೊಳ್ಳಲಾಗದೇ ಶವದೊಂದಿಗೆ ಹಿಂದಿರುಗಿ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಆಸ್ಪತ್ರೆಯಲ್ಲಿ ಏಳು ದೊಡ್ಡ ಸಿಲಿಂಡರ್ ಹಾಗೂ 12 ಸಣ್ಣ ಪ್ರಮಾಣದ ಸಿಲೆಂಡರ್‌ಗಳಿವೆ. ಎಂಟು ಮಂದಿ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ರೋಗಿಗಳು ದಾಖಲಾದರೆ ಈ ಸಿಲಿಂಡರ್‌ಗಳು ಸಾಕಾಗುವುದಿಲ್ಲ. ಬೇಡಿಕೆಗಾಗಿ 20 ದೊಡ್ಡ ಹಾಗೂ 20 ಸಣ್ಣ ಪ್ರಮಾಣದ ಸಿಲಿಂಡರ್‌ಗಳ ಪ್ರಸ್ತಾವನೆಯನ್ನು ಆಸ್ಪತ್ರೆ ವೈದ್ಯಾಧಿ ಕಾರಿಗಳು ಜಿಲ್ಲಾ ಆರೋಗ್ಯಾ ಧಿಕಾರಿಗೆ ಸಲ್ಲಿಸಿದ್ದಾರೆ. ಹೀಗಾಗಿ ಆಕ್ಸಿಜನ್ ಸಿಲಿಂಡರ್‌ಗಳ ಕೊರತೆಯಿಂದ ಕೋವಿಡ್ ರೋಗಿಗಳನ್ನು ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗಿದೆ.
40 ಹಾಸಿಗೆ ಸಜ್ಜು: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ನೂರು ಹಾಸಿಗೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಒಟ್ಟು 40 ಹಾಸಿಗೆ ಮೀಸಲಿಟ್ಟಿದ್ದು, ಇದರಲ್ಲಿ 16ರಿಂದ 20 ಹಾಸಿಗೆ ಚಾಲ್ತಿಯಲ್ಲಿವೆ. ಇನ್ನುಳಿದ 20 ಹಾಸಿಗೆ ಕಾಯ್ದಿರಿಸಲಾಗಿದೆ. 15 ಸಿಬ್ಬಂದಿಗೆ ಸೋಂಕು: ಸಾರ್ವಜನಿಕ ಆಸ್ಪತ್ರೆಯ ಇರುವ ಸಿಬ್ಬಂದಿಗಳಲ್ಲಿ 15 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಓರ್ವ ವೈದ್ಯರು ಸೇರಿ ನಾಲ್ವರು ಗುಣಮುಖರಾಗಿದ್ದಾರೆ. ಓರ್ವ ಮಹಿಳಾ ವೈದ್ಯೆ, ಲಾಬ್ ಟೆಕ್ನಿಶೀಯನ್, ಐವರು ಗ್ರೂಪ್ ಡಿ. ನೌಕರರು, ಫಾರ್ಮಶಿಸ್ಟ್ ಹಾಗೂ ಮೂವರು ಸ್ಟಾಪ್‌ನರ್ಸ್ ಗಳಿಗೆ ಸೋಂಕು ತಗಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಆಸ್ಪತ್ರೆಗೆ ಮತ್ತಷ್ಟು ಸಿಬ್ಬಂದಿ ಕೊರತೆ ಎದುರಾಗಿದೆ.
ವೈದ್ಯ-ಸಿಬ್ಬಂದಿ ಕೊರತೆ: ಆಸ್ಪತ್ರೆಗೆ ಬೇಕಾಗಿರುವ ವೈÂರ ಸಂಖ್ಯೆ 10, ಸ್ಟಾಪ್‌ನರ್ಸ್ 10, ಗ್ರೂಫ್ ಡಿ. ನೌಕರರು 10 ಜನರ ಬೇಡಿಕೆ ಇದೆ. ಕೋವಿಡ್ ಚಿಕಿತ್ಸೆಯ ಕೊರತೆಗಳ ನಡುವೆ 8879 ಜನರಿಗೆ ಕೋವಿಡ್ -19 ತಪಾಸಣೆ ಕೈಗೊಳ್ಳಲಾಗಿದೆ. 1947 ಜನರಿಗೆ ವಾಕ್ಸಿನ್ ನೀಡಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿ ಕಾರಿ ಡಾ| ಚಂದ್ರಕಾಂತ ನರಿಬೋಳ ತಿಳಿಸಿದ್ದಾರೆ.