Advertisement

ವೀರಶೈವ ಮಹಾಸಭಾ ಚುನಾವಣೆಗೆ ಪೈಪೋಟಿ

11:07 AM Sep 20, 2019 | Naveen |

ಕಲಬುರಗಿ: ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿರುವ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ ರಾಜಕೀಯ ಚುನಾವಣೆ ಮೀರಿಸುವ ಮಟ್ಟಿಗೆ ರಂಗೇರಿದ್ದು, ಅಧ್ಯಕ್ಷ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಸಿದ್ದಾರೆ.

Advertisement

ಸೆ. 29ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಗುರುವಾರ ಸರತಿ ಸಾಲಿನಲ್ಲಿ ನಿಂತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಐದು ವರ್ಷ ಅವಧಿಯ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಸಿದ್ದರೆ, 30 ಸದಸ್ಯ ಸ್ಥಾನಕ್ಕೆ 88 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಸಮಾಜದ ಹಿರಿಯರು, ಕಿರಿಯರೆಲ್ಲರೂ ಚುನಾವಣೆಗೆ ತಮ್ಮ ಪ್ರತಿಷ್ಠೆ ಪಣಕ್ಕಿಟ್ಟು ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಇಳಿದಿದ್ದರಿಂದಎಲ್ಲೆಡೆ ಚುನಾವಣೆಯದ್ದೇ ಮಾತು ಕೇಳಿ ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಸಂಬಂಧ ಹತ್ತು ದಿನಗಳಿಂದ ಕರೆಯಲಾಗಿದ್ದ ಸಭೆಯಲ್ಲಿ ಸಂಧಾನ ನಡೆಯದೇ ಕೈ-ಕೈ ಮಿಲಾಯಿಸುವ ಮಟ್ಟಿಗೆ ಹೋಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸಮಾಜದ ಹಿರಿಯರಾದ ಜಿ.ಡಿ.ಅಣಕಲ್, ಶಿವಶರಣಪ್ಪ ಸೀರಿ, ಸುಭಾಷ ಬಿರಾದಾರ, ಸಮಾಜದ ಹಾಲಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಮಾಜಿ ಮೇಯರ್‌ ಶರಣಕುಮಾರ ಮೋದಿ ನಾಮಪತ್ರ ಸಲ್ಲಿಸಿದ್ದು, ಸೆ. 23ರಂದು ನಾಮಪತ್ರ ವಾಪಸ್ಸಾತಿಗೆ ಕೊನೆ ದಿನವಿದೆ.

30 ಸದಸ್ಯ ಸ್ಥಾನಗಳಿಗೆ ಒಟ್ಟಾರೆ ನಾಮಪತ್ರ ಸಲ್ಲಿಸಿದ್ದು, ಹಿರಿಯರು-ಕಿರಿಯರು ಸ್ಪರ್ಧಿಸಿರುವುದು ವಿಶೇಷವಾಗಿದೆ. ಶರಣಕುಮಾರ ಮೋದಿ, ಅರುಣಕುಮಾರ ಪಾಟೀಲ, ಜಿ.ಡಿ.ಅಣಕಲ್ ಅವರು ಹೆಚ್ಚಿನ ಸದಸ್ಯರೊಂದಿಗೆ ಫೆನಾಲ್ ರಚಿಸಿಕೊಂಡು ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ.

Advertisement

30 ಸದಸ್ಯ ಸ್ಥಾನಗಳಲ್ಲಿ 10 ಸ್ಥಾನಗಳು ಮಹಿಳೆಯರಿಗೆ ಮೀಸಲಿದ್ದು, ಈ 10 ಸ್ಥಾನಗಳಿಗೆ 20 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇಂದಿರಾ ರೆಡ್ಡಿ, ಶಶಿಕಲಾ ಎಸ್‌. ಸಿರಿ, ಚಂದನಾ ಹಾರಕೂಡೆ, ಮಹಾಲಕ್ಷ್ಮೀ ಶಿವಪುತ್ರಪ್ಪ, ಅಂಬಿಕಾ ದುರ್ಗಿ, ಜಯಶ್ರೀ ರಾಜಶೇಖರ ಪಾಟೀಲ, ಅಂಬುತಾಯಿ ಗುಬ್ಯಾಡ್‌, ಶಾರದಾಬಾಯಿ, ಭಾರತೀಬಾಯಿ, ಅನ್ನಪೂರ್ಣ ಸಂಗಶೆಟ್ಟಿ, ಶೀಲಾ ಬಿ. ಮುತ್ತಿನ, ಆಶಾದೇವಿ ಖೂಬಾ, ಜಗದೇವಿ ಅಷ್ಠಗಿ, ಅಂಬಿಕಾ ಜೆ. ಮಾಲಿಪಾಟೀಲ, ಶ್ರೀದೇವಿ ಎಸ್‌. ಸರಸಣಗಿ, ಡಾ| ಸುಧಾ ಹಾಲಕಾಯಿ, ಗೌರಿ ಆರ್‌. ಚಿಚಕೋಟಿ, ಡಾ| ನಾಗವೇಣಿ ಎಸ್‌. ಪಾಟೀಲ, ಸಾವಿತ್ರಿ ಎಸ್‌. ಕುಳಗೇರಿ, ಬೇಬಿನಂದಾ ಆರ್‌. ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರಗಳನ್ನು ಉಪ ಚುನಾವಣಾಧಿಕಾರಿ ಹಾಗೂ ನ್ಯಾಯವಾದಿ ಶರಣಬಸಪ್ಪ ಕಾಡಾದಿ ಸ್ವೀಕರಿಸಿದರು. ಸಹಾಯಕರಾಗಿ ನಾಗಣ್ಣ ಗಣಜಲಕೇಡ, ಬಸವರಾಜ ಆವಂಟಿ, ರಾಚಪ್ಪ ಅಕ್ಕೋಣಿ, ಸಂಗಣ್ಣ ಇಜೇರಿ, ಸಿದ್ಧಾಜಿ ಪಾಟೀಲ, ಗಿರಿರಾಜ ಶಿರವಾಳ, ರಮೇಶ ಕಡಾಳೆ, ಶಾಂತವೀರ ತುಪ್ಪದ ಕಾರ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next