Advertisement

ಜಗತ್ತಿನಲ್ಲಿ ಭಾರತ ಸಂವಿಧಾನವೇ ಶ್ರೇಷ್ಠ: ನ್ಯಾ|ದೀಕ್ಷಿತ್‌

05:04 PM May 23, 2019 | Naveen |

ಕಲಬುರಗಿ: ಭಾರತದ ಸಂವಿಧಾನ ಮೇಧಾವಿಗಳಿಂದ ರಚನೆಯಾಗಿದೆ. ಅಮೆರಿಕಾ ಸೇರಿದಂತೆ ಇತರ ರಾಷ್ಟ್ರಗಳ ಸಂವಿಧಾನಕ್ಕಿಂತ ನಮ್ಮ ದೇಶದ ಸಂವಿಧಾನ ಶ್ರೇಷ್ಠ ಎಂದು ಹೈಕೋರ್ಟ್‌ ಕಲಬುರಗಿ ಪೀಠದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹೇಳಿದರು.

Advertisement

ನಗರದ ಹೈದ್ರಾಬಾದ್‌-ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ ಮಂಗಳವಾರ ವಕೀಲ ವಿ.ಬಿ. ದೇಶಪಾಂಡೆ ಸ್ಮರಣಾರ್ಥ ಹಮ್ಮಿಕೊಂಡಿದ್ದ ‘ಸಂವಿಧಾನ ಕಾರ್ಯನಿರ್ವಹಣೆಯಲ್ಲಿ ನಾಗರಿಕರ ಪಾತ್ರ’ (371ನೇ ಜೆ)ಕಲಂಗೆ ಪೂರಕವಾಗಿ) ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಮೆರಿಕಾದ ಸಂವಿಧಾನದಲ್ಲಿ ಗುಲಾಮಗಿರಿ ವಿರುದ್ಧ ಬರೆಯಬೇಕಿದ್ದ ರಚನಾಕಾರರು ತಮ್ಮ ಮನೆಯಲ್ಲಿ 50 ಜನ ಸೇವಕರನ್ನಿಟ್ಟುಕೊಂಡಿದ್ದವರು. ಆದರೆ, ಡಾ| ಬಿ.ಆರ್‌.ಅಂಬೇಡ್ಕರ್‌ ಸೇರಿದಂತೆ ಭಾರತದ ಸಂವಿಧಾನ ರಚನಕಾರರು ಶ್ರದ್ಧೆಯಿಂದ ಕಷ್ಟ ಪಟ್ಟು ಸಂವಿಧಾನ ರಚಿಸಿದ್ದಾರೆ. ದೇಶದ ಜನರ ಆಶೋತ್ತರಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ ಎಂದು ಹೇಳಿದರು.

ದೇಶದ ಸಂವಿಧಾನ ರಚಿಸಿಯಾಗಿದೆ. ಸಂವಿಧಾನದೊಂದಿಗೆ ನಾಗರಿಕರು ಕಾರ್ಯನಿರ್ವಹಣೆ ಮಾಡಬೇಕು. ಆಗ ಸಂವಿಧಾನ ಉಳಿಯಲು ಸಾಧ್ಯ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಜನರನ್ನು ಜಾಗೃತಗೊಳಿಸುವುದೇ ಸಂವಿಧಾನ ಕಾರ್ಯವಾಗಿದೆ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ಸಂವಿಧಾನದಲ್ಲಿರುವ ಅಂಶಗಳ ಜಾರಿಗಳನ್ನು ನಾಗರಿಕರೇ ತಿಳಿಸಿಕೊಂಡಬೇಕು. ಹೈ-ಕ ಭಾಗದ 371ನೇ ಜೆ) ಕಲಂ ಸಮರ್ಪಕ ಅನುಷ್ಠಾನವೂ ನಾಗರಿಕರ ಮೇಲೆ ನಿಂತಿದೆ ಎಂದು ಹೇಳಿದರು.

ಸಂವಿಧಾನ ಜಾರಿಯಾದ ಬಳಿಕ ಅನೇಕ ಬಾರಿ ತಿದ್ದುಪಡಿಗಳಾಗಿವೆ. ಎಷ್ಟೇ ತಿದ್ದುಪಡಿಗಳಾದರೂ, ತಿದ್ದುಪಡಿ ಪ್ರಯತ್ನಗಳು ನಡೆದರೂ ಸಂವಿಧಾನ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.

Advertisement

ಮತ್ತೂಬ್ಬ ನ್ಯಾಯಮೂರ್ತಿ ಸುನಿಲದತ್ತ ಯಾದವ ಮಾತನಾಡಿ, ಸಂವಿಧಾನದಡಿ ಹೈ-ಕ ಪ್ರದೇಶಕ್ಕೆ 371ನೇ(ಜೆ) ಕಲಂ ಜಾರಿ ಮಾಡಲಾಗಿದೆ. ಅದರ ಅನುಷ್ಠಾನ ಯಾವ ರೀತಿಯಲ್ಲಿ ಆಗಬೇಕು. ಯಾರಿಗೆ ಎಷ್ಟು ಮೀಸಲಾತಿ ದೊರೆಯಬೇಕು ಎಂಬುದನ್ನು ನಾಗರಿಕರೇ

ನಿರ್ಧರಿಸುವಂತಾಗಬೇಕು. 371ನೇ (ಜೆ) ಕಲಂನ ಆಶಯಗಳನ್ನು ಆಡಳಿತ ಮತ್ತು ಅಧಿಕಾರಿ ವರ್ಗಕ್ಕೆ ತಿಳಿಸಿಕೊಟ್ಟು, ಅದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಕೀಲ ವಿ.ಬಿ.ದೇಶಪಾಂಡೆ ಪ್ರತಿಷ್ಠಾನದ ಪಿ.ವಿ.ದೇಶಪಾಂಡೆ, ಎಚ್ಕೆಸಿಸಿಐ ಕಾರ್ಯದರ್ಶಿ ಶಶಿಕಾಂತ ಪಾಟೀಲ, ಕಾರ್ಯಕ್ರಮದ ಉಪಸಮಿತಿ ಅಧ್ಯಕ್ಷ ಆನಂದ ದಂಡೋತಿ ಪಾಲ್ಗೊಂಡಿದ್ದರು.

ಜಗತ್ತಿನಲ್ಲಿ ಸಂವಿಧಾನದ ಪರಿಕಲ್ಪನೆ ಮುನ್ನವೇ ಬಸವಣ್ಣನವರು ಸಮಾಜ ಸುಧಾರಣೆಗೆ ನಾಂದಿ ಹಾಡಿದ್ದರು. ನಮ್ಮ ಸಂವಿಧಾನದಲ್ಲಿ ಅನೇಕ ಭಾವಚಿತ್ರಗಳು ಇದೆ. ಆದರೆ, ಬಸವಣ್ಣನವರು ಭಾವಚಿತ್ರ ಇರದೇ ಇರುವುದು ಬೇಸರದ ಸಂಗತಿ. ಅದೇ ರೀತಿ ಧರ್ಮಶಾಸ್ತ್ರ ತಜ್ಞ ಪಿ.ವಿ.ಕಾಳೆ ಕೂಡ ಸಂವಿಧಾನ ರಚನಾ ಸಮಿತಿ ಸದಸ್ಯರಾಗಬೇಕಿತ್ತು.
ಕೃಷ್ಣ ಎಸ್‌. ದೀಕ್ಷಿತ್‌,
ನ್ಯಾಯಮೂರ್ತಿ, ಹೈಕೋರ್ಟ್‌ ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next