Advertisement

ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಪಾಲನೆ

06:31 PM Apr 23, 2020 | Naveen |

ಕಲಬುರಗಿ: ನಗರದ ಕೇಂದ್ರ ಬಸ್‌ ನಿಲ್ದಾಣ ಪಕ್ಕದ ಕಣ್ಣಿ ಮಾರುಕಟ್ಟೆಯಿಂದ ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆಗೆ ಸ್ಥಳಾಂತರಗೊಂಡ ತರಕಾರಿ ಮಾರುಕಟ್ಟೆಯಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮ ಹಾಗೂ ಸೂಕ್ತ ಮಾಹಿತಿ ಒದಗಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಸಗಟು ವ್ಯಾಪಾರ ಹಾಗೂ ಚಿಲ್ಲರೆ ವ್ಯಾಪಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆಯಲ್ಲದೇ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆಯಲ್ಲದೇ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅದಲ್ಲದೇ ಮಾಹಿತಿ ಕೇಂದ್ರ ಸ್ಥಾಪಿಸಿ ಧ್ವನಿವರ್ಧಕ ಮೂಲಕ ಸೂಕ್ತ ಮಾಹಿತಿ ನೀಡುವುದು ಸೇರಿದಂತೆ ಇತರ ವ್ಯವಸ್ಥೆಗಳನ್ನು ಪೊಲೀಸ್‌ ಆಯುಕ್ತ ಎನ್‌. ಸತೀಶಕುಮಾರ, ಉಪ ಆಯುಕ್ತ ಡಿ. ಕಿಶೋರಬಾಬು, ಸಂಚಾರ ವಿಭಾಗದ ಎಸಿಪಿ ವಿರೇಶ ಕರಡಿಗುಡ್ಡ ನಿರ್ದೇಶನದಲ್ಲಿ ಕೈಗೊಳ್ಳಲಾಗಿದೆ. ಸಂಚಾರಿ ಇನ್ಸಪೆಕ್ಟರ್‌ ರಮೇಶ ಕಾಂಬಳೆ, ಸಿಬ್ಬಂದಿಗಳಾದ ಚಂದ್ರಕಾಂತ ಸೇರಿದಂತೆ ಇತರರು ಎಲ್ಲ ವ್ಯವಸ್ಥೆಗಳ ಕಾರ್ಯಪಾಲನೆಯಲ್ಲಿ ನಿಗಾ ವಹಿಸುತ್ತಿದ್ದಾರೆ.

ಮಾರುಕಟ್ಟೆಯುದ್ದಕ್ಕೂ ಮಾಹಿತಿ ಫ‌ಲಕ ಸಹ ಅಳವಡಿಸಲಾಗಿದೆ. ಮುಖ್ಯವಾಗಿ ದ್ವಾರ ಸ್ಥಾಪಿಸಿ ಸ್ಕ್ರೀನಿಂಗ್‌ ಮಾಡಲಾಗುತ್ತಿದೆ. ಹೀಗೆ ಯಾವುದೇ ಗೊಂದಲ ಹಾಗೂ ಇತರೆಗಳಿಗೆ ಅವಕಾಶ ನೀಡದೇ ಮಾರುಕಟ್ಟೆಗೆ ಕ್ರಮ ಕೈಗೊಳ್ಳಲಾಗಿದೆ. ಕಣ್ಣಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಮೀತಿ ಮೀರಿತ್ತು. ಹೀಗಾಗಿ ರೈತರು ಕೇಳಿದ ದರಕ್ಕೆ ತರಕಾರಿ ಮಾರಾಟ ಮಾಡಿ ಹೋಗುತ್ತಿದ್ದರು. ಆದರೆ ಇದಕ್ಕೆ ಕಡಿವಾಣ ಹಾಕಿರುವುದು ಬಹು ಮುಖ್ಯವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಬೀದಿ ದೀಪದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಇದೇ ತೆರನಾದ ತರಕಾರಿ ಮಾರುಕಟ್ಟೆ ನಗರದ ನಾಲ್ಕು ಕಡೆ ವ್ಯವಸ್ಥೆ ಕಲ್ಪಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next