Advertisement
ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿವಿಯಿಂದ ನಡೆಯುತ್ತಿರುವ ಇಂಡಕ್ಸನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವೇ ಕುಟುಂಬ ಎಂದು ತಿಳಿದುಕೊಂಡು ಮುನ್ನಡೆದಲ್ಲಿ ಮಾತ್ರ ಭಾರತ ಸಮೃದ್ಧ ರಾಷ್ಟ್ರವಾಗುವುದಕ್ಕೆ ಸಾಧ್ಯ. ಇದರಲ್ಲಿ ಹೆಚ್ಚಿನ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಹೀಗಾಗಿ ತಾವು ಅಧ್ಯಯನ ಮಾಡುವ ವಿಷಯದಲ್ಲಿ ಪಾರದರ್ಶಕತೆ, ಗುಣಾತ್ಮಕ ಶಿಕ್ಷಣ ಪಡೆಯಬೇಕು ಎಂದರು. ಶರಣಬಸವ ವಿದ್ಯಾಸಂಸ್ಥೆಯಲ್ಲಿ ಎಂಜಿನಿಯರಿಂಗ್, ಬಿಬಿಎಂ, ಕಲಾ, ವಿಜ್ಞಾನ ಸೇರಿದಂತೆ ವಿವಿಧ ಹೊಸ ಕೋರ್ಸ್‌ಗಳು ಆರಂಭವಾಗಿವೆ. ಈ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವಾಗ ದೇಶದೆಲ್ಲೆಡೆ ಉದ್ಯೋಗವಕಾಶ ದೊರೆತರೆ ಖುಷಿಯಿಂದ ಹೋಗಬೇಕು. ಅವಕಾಶಗಳು ಮತ್ತೆ ಮರಳಿ ಬರುವುದಿಲ್ಲ. ನಿಮ್ಮ ಕರ್ತವ್ಯದಿಂದ ದೇಶಾಭಿಮಾನ ಹೆಚ್ಚುತ್ತದೆ ಎಂದು ಹೇಳಿದರು.
Advertisement
ಅಖಂಡ ಭಾರತವೇ ಸಂಪತ್ತು: ಬಿದರಿ
02:51 PM Aug 17, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.