Advertisement

ಪ್ರಯೋಗಾತ್ಮಕ ಕಲಿಕೆ ಅನ್ವೇಷಣೆಗೆ ಸಹಕಾರಿ

12:37 PM Aug 17, 2019 | Naveen |

ಕಲಬುರಗಿ: ಅಭ್ಯಾಸದಲ್ಲಿ ಪ್ರಯೋಗಾತ್ಮಕವಾಗಿ ಕಲಿಯುವ ವಿಧಾನ ಅಳವಡಿಸಿಕೊಂಡಲ್ಲಿ ಜ್ಞಾನವೃದ್ಧಿಯಾಗಿ ಹೊಸದೊಂದು ಅನ್ವೇಷಣಿಗೆ ಸಹಕಾರಿ ಆಗುತ್ತದೆ ಎಂದು ಸಿಸ್ಕೊ ಕಂಪನಿಯ ವಿತರಣಾ ಅಧಿಕಾರಿ ರಾಜ್‌ ಬಿರಾದಾರ ಹೇಳಿದರು.

Advertisement

ಶರಣಬಸವ ವಿವಿಯ ಇಂಡಕ್ಷನ್‌ (ದೀಕ್ಷಾರಂಭ-2019) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಶಸ್ಸನ್ನು ಹೆಸರು, ಹಣ, ಪ್ರಬಲವಾದ ಶಕ್ತಿಯಿಂದ ಸಾಧಿಸಲು ಸಾಧ್ಯವಿಲ್ಲ. ಯಶಸ್ಸು ನಾವು ಮಾಡುವ ವಿಶಿಷ್ಟವಾದ ಕೆಲಸದಿಂದ ಬರುತ್ತದೆ ಎಂದರು.

ಶಿಕ್ಷಣ ಕೇತ್ರದಲ್ಲಿ ಇರುವರು ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಹೆಮ್ಮೆ, ಗೌರವ ಬೆಳೆಸಿಕೊಳ್ಳಿ. ಇದರಿಂದ ಕ್ಷೇತ್ರದಲ್ಲಿ ಪ್ರಬಲ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಪದವೀಧರರು ಹೆಚ್ಚಾಗುತ್ತಿದ್ದಾರೆ. ಆದರೆ ಅವರೆಲ್ಲರೂ ಉದ್ಯೋಗಸ್ಥರಾಗುತ್ತಿಲ್ಲ. ಇದಕ್ಕೆ ಕಾರಣ ಶೈಕ್ಷಣಿಕ ಕ್ಷೇತ್ರದಲ್ಲಿನ ಅನಾಸಕ್ತಿಯೇ ಕಾರಣ ಎಂದರು.

ಸಿಸ್ಕೊ ಕಂಪನಿಯ ಇನ್ನೊಬ್ಬ ಹಿರಿಯ ವಿತರಣಾ ಅಧಿಕಾರಿ ಶೀಲಾ ಪಾಟೀಲ ಮಾತನಾಡಿ, ಹೊಂದಿರುವ ಕನಸು ಸಾಕಾರಗೊಳಿಸಲು ಕಲಿಕೆ ಪದ್ಧತಿ ಬದಲಿಸಿಕೊಳ್ಳಿ. ಪಠ್ಯದ ವಿಷಯಸಾರ ಕಂಠಪಾಠ ಮಾಡದೇ, ಇಷ್ಟಪಟ್ಟು ಓದಿ, ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಅರ್ಥಮಾಡಿಕೊಂಡು ಓದಿದ ಅಭ್ಯಾಸ ಭವಿಷ್ಯ ರೂಪಿಸುತ್ತದೆ ಎಂದರು.

ಅಧಿಕಾರಿ ವೆಂಕಟೇಶ ಕಸ್ತೂರಿ ಮಾತನಾಡಿ, ಅಂತರ್ಜಾಲದಿಂದ ಅಭ್ಯಾಸದ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯ. ಆದರೆ ಅದನ್ನೇ ಹೆಚ್ಚಿಗೆ ನೆಚ್ಚಿಕೊಳ್ಳಬಾರದು. ಸಮಾಜ ಮತ್ತು ಒಂದು ಕಂಪನಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಿ ಎಂದು ಹೇಳಿದರು.

Advertisement

ಪ್ರೊ| ಶರಣಬಸವಪ್ಪ ಪಾಟೀಲ ಸ್ವಾಗತಿಸಿದರು. ವಿವಿ ಸಮ ಕುಲಪತಿ ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ, ಡಾ| ಬಸವರಾಜ ಮಠಪತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next