Advertisement

ರಾಮನ ಸ್ಮರಣೆ: ಗಮನ ಸೆಳೆದ ಮೆರವಣಿಗೆ

10:50 AM Apr 14, 2019 | Naveen |

ಕಲಬುರಗಿ: ರಾಮ ನವಮಿ ನಿಮಿತ್ತ ಜಿಲ್ಲೆಯ ರಾಮ ಮಂದಿರ ಮತ್ತು ಹನುಮಾನ ಮಂದಿರಗಳಲ್ಲಿ ಬೆಳಗ್ಗೆಯಿಂದಲೇ ತೊಟ್ಟಿಲೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಮ ನವಮಿ ನಿಮಿತ್ತ ಮಂದಿರಗಳಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನಡೆಸಲಾಯಿತು. ತೊಟ್ಟಿಲುಗಳನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅನೇಕ ದೇವಸ್ಥಾನಗಳಿಗೆ ದೀಪಾಲಂಕಾರ
ಮಾಡಲಾಗಿತ್ತು.

Advertisement

ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ರಾಮ ನವಮಿ ನಿಮಿತ್ತ ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ನಂತರ ರಾಮದೇವರ ತೊಟ್ಟಿಲ ಪೂಜೆ, ಮಹಾಮಂಗಳಾರತಿ, ಮಂತ್ರಪುಷ್ಪ ಜರುಗಿದವು. ಗುಂಡಾಚಾರ್ಯ
ನರಿಬೋಳ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಿದವು.
ಮಹಿಳಾ ಭಜನಾ ಮಂಡಳಿಯವರು ಜೋಗುಳ ಪದ ಹಾಡಿದರು. ಪಂ.
ವೆಂಕಣ್ಣಾಚಾರ್ಯಾ ಮಳಖೇಡ ಅವರಿಂದ ಭಾಗವತ ಪ್ರವಚನ ನಡೆಯಿತು. ಗುಂಡೇರಾವ ದೇಸಾಯಿ, ಶಾಮರಾವ ಕುಲಕರ್ಣಿ, ಡಿ.ವಿ.ಕುಲಕರ್ಣಿ, ನಾರಾಯಣ ಎಂ.ಜೋಶಿ ಹಾಗೂ ಭಕ್ತರು ಇದ್ದರು.

ಹೊಸ ಜೇವರ್ಗಿ ರಸ್ತೆಯಲ್ಲಿರುವ ರಾಮಮಂದಿರದಲ್ಲಿ ಕಳೆದ ವಾರದಿಂದಲೇ
ರಾಮೋತ್ಸವ ಆಯೋಜಿಸಲಾಗಿತ್ತು. ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ ಮತ್ತು ಶ್ರೀರಂಗಪೂಜೆ ಜರುಗಿತು. ಬ್ರಹ್ಮಪುರದ ರಾಮ ದೇವಸ್ಥಾನ, ಉತ್ತರಾಧಿ
ಮಠದ ರುಕ್ಮಿಣಿ ವಿಠ್ಠಲ ಮಂದಿರ, ಜಗತ್‌ ಪ್ರದೇಶದ ರಾಘವೇಂದ್ರ ಸ್ವಾಮಿ ಮಠ, ಕರುಣೇಶ್ವರ ನಗರದ ಹನುಮಾನ ಮಂದಿರ ಸೇರಿ ನಾನಾ ಮಂದಿರಗಳಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಭಕ್ತರು ರಾಮನ ಸ್ಮರಣೆಯಲ್ಲಿ ತೊಡಗಿದ್ದರು. ರಾಮನ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸುಂಬರಿ, ಹಣ್ಣು-ಹಂಪಲು ವಿತರಿಸಲಾಯಿತು.

ರಾಮನ ಭವ್ಯ ಮೆರವಣಿಗೆ: ನಗರದ ಶ್ರೀ ರಾಮ ನವಮಿ ಉತ್ಸವ ಸಮಿತಿ ವತಿಯಿಂದ ರಾಮನವಮಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ 16 ಅಡಿ ಎತ್ತರ ರಾಮನ ಮೂರ್ತಿ ಭವ್ಯ ಮೆರವಣಿಗೆ ಗಮನ ಸೆಳೆಯಿತು. ನಗರದ ಆಳಂದ ರಸ್ತೆಯಿಂದ ಜಗತ್‌ ವೃತ್ತದ
ವರೆಗೆ ಸಾಗಿದ ಶೋಭಾ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಶ್ರೀರಾಮನ ಪೋಷಣೆ ಮೊಳಗಿಸಿದರು. ಜತೆಗೆ ಮಹಾರಾಷ್ಟದಿಂದ
ಬಂದಿದ್ದ ಬ್ಯಾಂಜೊ ತಂಡ ಮತ್ತು ಡೊಳ್ಳು, ಹಲಗೆ ಕುಣಿತ ಆಕರ್ಷಕವಾಗಿತ್ತು. ವಿವಿಧ ಮಠಗಳ ಮಠಾಧೀಶರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next