Advertisement

ಅವಾಂತರ ಸೃಷ್ಟಿಸಿದ ಗಾಳಿ-ಮಳೆ

09:57 AM Jun 03, 2019 | Naveen |

ಕಲಬುರಗಿ: ನಗರದಲ್ಲಿ ಎರಡನೇ ದಿನ ಸುರಿದ ಮಳೆ ಅವಾಂತರ ಸೃಷ್ಟಿಸಿತ್ತು. ರವಿವಾರ ಮಧ್ಯಾಹ್ನದ ವೇಳೆ ಮಳೆ ಆರಂಭಕ್ಕೂ ಮುನ್ನ ಜೋರಾದ ಗಾಳಿ ಬೀಸಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಎರಡು ಮರಗಳು, ಕಂಬಗಳು ನೆಲಕ್ಕುರುಳಿದವು.

Advertisement

ಶನಿವಾರ ತಡರಾತ್ರಿ ಅಲ್ಲಿಲ್ಲಿ ತುಂತುರು ಮಳೆಯಾಗಿತ್ತು. ರವಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಗರಾದ್ಯಂತ ಅರ್ಧ ಗಂಟೆ ಕಾಲ ತುರುಸಿನ ಮಳೆ ಸುರಿಯಿತು. ಇದರಿಂದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದ ಆವರಣದಲ್ಲಿ ಎರಡು ಮರಗಳು ಧರೆಗುರುಳಿದವು. ಮರಗಳ ಕೆಳಗೆ ಕೆಲ ಬೈಕ್‌ಗಳನ್ನು ನಿಲ್ಲಿಸಲಾಗಿತ್ತು. ಹರಸಾಹಸ ಪಟ್ಟು ಮಾಲೀಕರು ತಮ್ಮ ಬೈಕ್‌ಗಳನ್ನು ಹೊರ ತೆಗೆದುಕೊಂಡರು.

ಸರ್ದಾರ ವಲ್ಲಭಭಾಯಿ ವೃತ್ತದಿಂದ ಜಗತ್‌ ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ವಿದ್ಯುತ್‌ ಕಂಬವೊಂದು ಬಾಗಿದ್ದರಿಂದ ಕೆಲ ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು. ತಕ್ಷಣವೇ ಸ್ಥಳಕ್ಕೆ ಬಂದ ಜೆಸ್ಕಾಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಂಬವನ್ನು ಮೇಲೆತ್ತುವ ಕೆಲಸ ಮಾಡಿದರು.

ಅಪ್ಪನ ಕೆರೆ ರಸ್ತೆಯ ಮಹಾನಗರ ಪಾಲಿಕೆ ಕಚೇರಿ ಸಮೀಪವೂ ಮರ ಹಾಗೂ ವಿದ್ಯುತ್‌ ಕಂಬವೊಂದು ಅರ್ಧಕ್ಕೆ ಮುರಿದು ರಸ್ತೆಗೆ ಬಾಗಿದ್ದವು. ಹೀಗಾಗಿ ಇಲ್ಲಿಯೂ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ನಂತರದಲ್ಲಿ ಜೆಸ್ಕಾಂ ಅಧಿಕಾರಿಗಳು ಕಂಬ ಹಾಗೂ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ಸರ್ದಾರ ವಲ್ಲಭ ಭಾಯಿ ವೃತ್ತದ ಬಳಿ ಭಾರಿ ಗಾಳಿಗೆ ಬ್ಯಾರಿಕೇಡ್‌ಗಳ ರಸ್ತೆ ಉರುಳಿ ಬಿದ್ದವು. ಸಾರ್ವಜನಿಕರ ಸಹಾಯದೊಂದಿಗೆ ಸಂಚಾರಿ ಪೊಲೀಸರು ಬ್ಯಾರಿಕೇಡ್‌ಗಳ ಮೇಲೆತ್ತಿಟ್ಟರು.

Advertisement

ಮಕ್ಕಳ ಸಂಭ್ರಮ: ಮಳೆಗೂ ಮುನ್ನ ಎಂದಿನಂತೆ ರವಿವಾರವೂ 41.1 ಡಿಗ್ರಿ ತಾಪಮಾನ ದಾಖಲಾಗಿ, ಬಿಸಿಲಿನ ಝಳ ನಾಗರಿಕರನ್ನು ಹೈರಾಣಾಗಿಸಿತ್ತು. ಮಧ್ಯಾಹ್ನ ಏಕಾಏಕಿ ಬಿರುಗಾಳಿ ಬೀಸತೊಡಗಿತ್ತು. ಬಳಿಕ ಗುಡುಗು ಸಹಿತ ಮಳೆ ಜೋರಾದ ಮಳೆ ಸುರಿಯಿತು. ಇದರಿಂದಾಗಿ ಹಲವು ಬಡಾವಣೆಗಳ ರಸ್ತೆಯಲ್ಲಿ ನೀರು ಹರಿದವು. ರಸ್ತೆಯಲ್ಲಿ ಹರಿದು ನಿಂತ ನೀರಿನಲ್ಲಿ ಮಕ್ಕಳು ಆಟವಾಡಿ ಸಂಭ್ರಮಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next