Advertisement

ಎಸ್ಕೇಪ್‌ ಅಗಿದ್ದ ರೇಪ್‌ ಆರೋಪಿ ತಾಜುದ್ದೀನ್‌ ಕಾಲಿಗೆ ಪೊಲೀಸ್‌ ಗುಂಡು

10:45 AM Jun 27, 2017 | |

ಕಲಬುರಗಿ: ಇಲ್ಲಿನ ನಾಗನಹಳ್ಳಿ ಬಳಿ ಜೈಲಿನಿಂದ ಪರಾರಿಯಾಗಿದ್ದ ರೇಪ್‌ ಆರೋಪಿ ಕೈದಿಯೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ನಾಗನಹಳ್ಳಿ ಎಂಬಲ್ಲಿ  ಅಡಗಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ತಾಜುದ್ದೀನ್‌ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಪೇದೆಯೊಬ್ಬರಿಗೆ ಇರಿದು ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದು ತಾಜುದ್ದೀನ್‌ ಬಲಗಾಲಿಗೆ ಗುಂಡು ಹೊಕ್ಕಿದೆ.

ತಾಜುದ್ದೀನ್‌ನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಗೊಂಡಿರುವ ಪೇದೆ ರಘುವೀರ್‌ ಅವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

2016 ರ ಜೂನ್‌ 23 ರಂದು ತಾಜುದ್ದೀನ್‌ ಜೈಲಿನಿಂದ ಪರಾರಿಯಾಗಿದ್ದ. ಗುಲಬರ್ಗಾ ವಿವಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next