Advertisement

ಶಾಶ್ವತ ನೀರು ಪೂರೈಕೆಗೆ 750 ಕೋಟಿ ಬಿಡುಗಡೆ

01:14 PM Jul 03, 2019 | Naveen |

ಕಲಬುರಗಿ: ಮಹಾನಗರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಗೆ 750 ಕೋಟಿ ರೂ. ಅನುದಾನದ ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಘೋಷಿಸಿದರು.

Advertisement

ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ಮಂಗಳವಾರ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ನಗರವನ್ನು ಮಾದರಿ ನಗರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದರು.

ಕಲಬುರಗಿ ಮಹಾನಗರ ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯ ಒದಗಿಸುವುದು. ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು ಕಲ್ಪಿಸುವ ಸಂಬಂಧ 750 ಕೋಟಿ ರೂ. ವೆಚ್ಚದ ಯೋಜನೆಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದರು.

ಭೀಮಾ ನದಿ, ಬೆಣ್ಣೆತೊರಾ ನೀರು ಸೋರಿಕೆಯಾದಂತೆ ನೀಡಿಕೊಳ್ಳಲಾಗುವುದು. ನಗರದಲ್ಲಿರುವ 72 ಕಲ್ಯಾಣಿಗಳು ಮತ್ತು ಬಾವಿಗಳು ಸೇರಿದಂತೆ ಮುಂತಾದ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಯೋಜನೆ ಸಾಕಾರಗೊಳಿಸಿ ದಿನದ 24 ಗಂಟೆಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ವಿಶ್ವಾಸದಿಂದ ನುಡಿದರು.

ನಗರದಲ್ಲಿ 1,050 ಕಿ.ಮೀ ಕುಡಿಯುವ ನೀರಿನ ಪೈಪ್‌ಲೈನ್‌ ಇದೆ. 850 ಕಿ.ಮೀ. ಪೈಪ್‌ಲೈನ್‌ನಲ್ಲಿ ಇಂತಿಷ್ಟು ದಿನಕ್ಕೆ ನೀರು ಸರಬರಾಜು ಆಗುತ್ತಿದೆ. ಉಳಿದ 200 ಕಿ.ಮೀ. ಪೈಪ್‌ಲೈನ್‌ ನಿರಂತರ ನೀರು ಪೂರೈಕೆ ಹೊಂದಿದೆ. ಈಗಾಗಲೇ ನೀರಿನ ಪೈಪ್‌ ಲೈನ್‌ಗಳನ್ನು ಅಳವಡಿಸಲು ಅಮೃತ ಯೋಜನೆಯಡಿಯಲ್ಲಿ 140 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಇದೇ ವೇಳೆ ಐಎಸ್‌ಐ ಗುರುತು ಇಲ್ಲದ ನೀರಿನ ಕ್ಯಾನ್‌ ವಾಟರ್‌ ಮಾರುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ವಿವಿಧ ಸೌಕರ್ಯಗಳ ವಿತರಣೆ: ಇದೇ ವೇಳೆ ಮಹಾನಗರ ಪಾಲಿಕೆ ವತಿಯಿಂದ ವಿವಿಧ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸಚಿವರಾದ ಯು.ಟಿ.ಖಾದರ್‌ ಮತ್ತು ಪ್ರಿಯಾಂಕ್‌ ಖರ್ಗೆ ಸೌಕರ್ಯಗಳನ್ನು ವಿತರಿಸಿದರು.

ಮೂರು ಅಂಗವಿಕಲ ಸಂಸ್ಥೆಗಳಿಗೆ 10 ಕಂಪ್ಯೂಟರ್‌, ಗ್ಯಾಸ್‌ ಸೌಲಭ್ಯ, ಬ್ಯೂಟಿ ಪಾರ್ಲರ್‌ ತರಬೇತಿ ಪಡೆದ ಫಲಾನುಭವಿಗಳು ಮತ್ತು ಎಸ್‌ಸಿ, ಎಸ್‌ಟಿ ಅನುದಾನದಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಯಿತು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್‌, ಬಸವರಾಜ ಮುತ್ತಿಮಡು, ಖನೀಜ್‌ ಫಾತೀಮಾ, ಡಾ| ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಹಾಗೂ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್‌, ಮಹಾನಗರ ಪಾಲಿಕೆ ಆಯುಕ್ತರಾದ ಬಿ. ಫೌಜಿಯಾ ತರನ್ನಮ್‌, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next