Advertisement
ಬಂಜಾರಾ ಸಮುದಾಯದ ಡಾ| ಉಮೇಶ ಜಾಧವ್‌ಗೆ ಪೆಟ್ಟು ನೀಡುವ ಉದ್ದೇಶದಿಂದಲೇ ಬಂಜಾರಾ ಸಮುದಾಯದ ಮುಖಂಡರೇ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ್ ಚವ್ಹಾಣ, ಬಿಜೆಪಿಯ ಬೇಟಿ ಪಡಾವೋ-ಬೇಟಿ ಬಚಾವೋ ರಾಜ್ಯ ಸಂಚಾಲಕ ಸುಭಾಷ ರಾಠೊಡ ಸೇರಿ ಇತರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಈಗಾಗಲೇ ಮಾತುಕತೆ ನಡೆಸಿದೆಯಲ್ಲದೇ ಸೋಮವಾರ ನಗರಕ್ಕೆ ಆಗಮಿಸುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ವೇದಿಕೆ ಸಿದ್ಧಪಡಿಸಲಾಗಿದೆ. ಬಂಜಾರಾ ಸಮುದಾಯದ ಅಭಿವೃದಿಟಛಿ ಹಾಗೂ ಮುಂದಿನ ದಿನಗಳಲ್ಲಿ ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದಕ್ಕೆ ಬದ್ಧ ಎಂಬುದನ್ನು ಸಾರಲು ಕಾಂಗ್ರೆಸ್ ಮುಂದಾಗಿದೆಯಲ್ಲದೇ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯಲು ತಂತ್ರಗಾರಿಕೆ ರೂಪಿಸಿದೆ.
Related Articles
Advertisement
ಬಿಜೆಪಿ ಖಡಕ್ ಎಚ್ಚರಿಕೆಒಳಗೊಳಗೆ ಬಿಜೆಪಿ ಶಾಸಕರು ಹಾಗೂ ಮುಖಂಡರು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುತ್ತಾರೆಂಬ ಆರೋಪ ಹಾಗೂ ಗುಮಾನಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ಪಡೆಯುವ ಮತಗಳ ಆಧಾರದ ಮೇಲೆಯೇ ವಿಧಾನಸಭಾ ಟಿಕೆಟ್ ನೀಡುವುದಾಗಿ ಹೇಳಿದ್ದನ್ನು ನೋಡಿದರೆ ಬಿಜೆಪಿಯೂ ಸರ್ವ ನಿಟ್ಟಿನಿಂದ ತಂತ್ರಗಾರಿಕೆಗೆ ಮುಂದಾಗಿದೆ ಎಂದು ಕಾಣಿಸುತ್ತದೆ. ಚುನಾವಣೆ ಬಂದಾಗ ಮುಖಂಡರು ಹಾಗೂ ಕಾರ್ಯಕರ್ತರು ಒಂದು ಪಕ್ಷ ಬಿಟ್ಟು ಮತ್ತೂಂದು ಪಕ್ಷಕ್ಕೆ ಸೇರ್ಪಡೆಯಾಗುವುದು ಸಾಮಾನ್ಯ. ಚಿಂಚೋಳಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಬಿಜೆಪಿ ಪಾತ್ರವೇನೂ ಇಲ್ಲ.
● ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ, ಕಲಬುರಗಿ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಸ್ವತಃ ಅವರೇ ಬರುತ್ತಿದ್ದಾರೆ. ಮುಖ್ಯವಾಗಿ ಡಾ| ಉಮೇಶ ಜಾಧವ್‌ಗೆ ತಕ್ಕಪಾಠ ಕಲಿಸಬೇಕೆಂದು ಕೆಲ ಬಿಜೆಪಿ ಮುಖಂಡರೇ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಯಾರನ್ನೂ ಪಕ್ಷಕ್ಕೆ ತರುವ ನಿಟ್ಟಿನಲ್ಲಿ ಯತ್ನ ಮಾಡಿಲ್ಲ. ಇನ್ನೆರಡು ದಿನಗಳಲ್ಲಿ ಹಲವರು ಬಿಜೆಪಿ ತ್ಯಜಿಸಿ, ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ.
● ಜಗದೇವ ಗುತ್ತೇದಾರ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್, ಕಲಬುರಗಿ.