Advertisement

ಕನ್ನಡ ಸಾಹಿತ್ಯದಲ್ಲಿ ತತ್ವ ಪದ-ವಚನ ಅಡಕ

12:58 PM Jan 18, 2020 | Naveen |

ಕಲಬುರಗಿ: ತತ್ವಪದಗಳು ಕನ್ನಡ ಸಾಹಿತ್ಯದಲ್ಲಿ ಆಳ ಹಾಗೂ ಅಗಲವಾಗಿರುವಷ್ಟು ಬೇರ್ಯಾವುದೇ ಭಾಷೆಯ ಸಾಹಿತ್ಯದಲ್ಲಿ ವಿಸ್ತಾರವಾಗಿ ವ್ಯಾಪಿಸಿಕೊಂಡಿಲ್ಲ ಎಂದು ಚಿಂತಕ ತುಮಕೂರಿನ ನಟರಾಜ ಬೂದಾಳು ಹೇಳಿದರು.

Advertisement

ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿಜಿ ಮಹಿಳಾ ಕಾಲೇಜು, ಗುವಿವಿ, ಸಿಯುಕೆ ಜತೆಗೂಡಿ ನಗರದ ಪಿಡಿಎ ಕಾಲೇಜಿನ ಆವರಣದಲ್ಲಿರುವ ಸ್ಯಾಕ್‌ ಸಭಾಂಗಣದಲ್ಲಿ ಆಯೋಜಿಸಿರುವ “ಕನ್ನಡ ತತ್ವಪದ ಸಾಹಿತ್ಯ-ಅವಲೋಕನ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮುಖ್ಯ ಅತಿಥಿಯಾಗಿ ಅವರು ಆಶಯ ಭಾಷಣ ಮಾಡಿದರು.

ಗ್ರಾಮೀಣ ಭಾಷೆಯಾಗಿರುವ ತತ್ವಪದದ ನಿಜಶಕ್ತಿಯನ್ನು ಹೊಸಕಿ ಹಾಕುವ ಹುನ್ನಾರ ಆರಂಭದಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಅದರ ಪರಿಣಾಮವಾಗಿಯೇ ತತ್ವಪದ, ಏಕತಾರಿ, ವಚನಗಳು ಶಿಕ್ಷಣದಿಂದ ಹೊರಗುಳಿದಿದ್ದವು. ಈಗ ಹೊಸ್ತಿಲೊಳಗೆ ಕರೆಯಲು ಆರಂಭಿಸಿರುವುದು ಮಾದರಿ ಕೆಲಸವಾಗಿದೆ ಎಂದರು.

ತತ್ವಪದ, ವಚನಗಳು ಮೊದಲಾದವು ದೈವಿ ಮಾರ್ಗವಲ್ಲ, ಅವು ಗುರು ಮಾರ್ಗಿ ಎಂದ ಅವರು, ಚಿನ್ನದ ನಾಣ್ಯಗಳಿಂದ ತುಂಬಿರುವ ಹಳೆಯ ಪೆಟ್ಟಿಗೆ ಮೇಲೆ ಕುಳಿತುಕೊಂಡು ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ಒಮ್ಮೆ ಪೆಟ್ಟಿಗೆ ತೆಗೆದು ನೋಡಿದರೆ ಅದರಲ್ಲಿ ಚಿನ್ನದ ನಾಣ್ಯಗಳಿರುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಸಿಯುಕೆ ಸಮಕುಲಪತಿ ಡಾ| ಜಿ.ಆರ್‌.ನಾಯಕ ಉದ್ಘಾಟಿಸಿದರು. ಎಚ್‌ಕೆಇ ಆಡಳಿತ ಮಂಡಳಿ ಸದಸ್ಯ ನಿತೀನ್‌ ಬಿ.ಜವಳಿ ಅಧ್ಯಕ್ಷತೆ ವಹಿಸಿದ್ದರು. ಗುವಿವಿ ಕುಲಪತಿ ಡಾ| ದೇವಿದಾಸ ಮಾಲೆ, ಸಾಹಿತಿ ಡಾ| ಕೆ. ಷರೀಫಾ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Advertisement

ವಿಜಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ಮೀನಾಕ್ಷಿ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್‌ಕೆಇ ಆಡಳಿತ ಮಂಡಳಿ ಸದಸ್ಯ ಡಾ.ವೀರಭದ್ರಪ್ಪ ನಂದ್ಯಾಳ, ಸತೀಶಚಂದ್ರ ಹಡಗಲಿಮಠ, ಸಿಯುಕೆ ರಜಿಸ್ಟಾರ್‌ ಮುಕ್ತಾಕ ಪಟೇಲ್‌ ಅಹ್ಮದ್‌, ವಿಜಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ| ರಾಜೇಂದ್ರ ಕೊಂಡಾ, ಉಪ ಪ್ರಾಚಾರ್ಯ ವೀಣಾ ಹೊನಗುಂಟಿಕರ್‌, ಗುವಿವಿ ಕನ್ನಡ ಅಧ್ಯಯನ ಸಂಸ್ಥೆ ಡೀನ್‌ ಡಾ| ಎಚ್‌.ಟಿ. ಪೋತೆ, ಸಿಯುಕೆ ಕನ್ನಡ ವಿಭಾಗ ಮುಖ್ಯಸ್ಥ ಡಾ| ವಿಕ್ರಮ ವಿಸಾಜಿ, ತತ್ವಪದ ಹಾಡುಗಾರ ನಾಗಪ್ಪ ಪಂಚಾಳ, ಡಾ| ಮೀನಾಕ್ಷಿ ಬಾಳಿ ಹಾಜರಿದ್ದರು. ಡಾ| ನಾಗೇಂದ್ರ ಮಸೂತಿ, ಡಾ| ಶಾಂತಾ ಮಠ ನಿರೂಪಿಸಿದರು.

ಕೆ.ನೀಲಾ, ಕಾಶೀನಾಥ ಅಂಬಲಗಿ, ಪ್ರಭು ಖಾನಾಪುರ, ಆರ್‌.ಕೆ.ಹುಡಗಿ, ಡಾ| ಈಶ್ವರಯ್ಯ ಮಠ, ಶಾಂತಾ ಭೀಮಸೇನರಾವ್‌, ಡಾ| ಉಮಾ ರೇವೂರ, ಡಾ| ವಿಜಯಕುಮಾರ ಪರೂತೆ, ಡಾ| ನಾಗೇಂದ್ರಪ್ಪ ಮಸೂತಿ, ಡಾ| ಶ್ರೀಶೈಲ ನಾಗರಾಳ, ಡಾ| ಶಾಂತಾ ಮಠ, ಡಾ| ರೇಣುಕಾ, ಕೋದಂಡರಾಮ, ಪವಿತ್ರಾ ವಸ್ತ್ರದ, ಮಹೇಶ ಗವ್ಹಾಂರ ಮುಂತಾದವರಿದ್ದರು.

ನಂತರ ನಡೆದ ಗೋಷ್ಠಿಗಳಲ್ಲಿ ಕೇರಳದ ಶಿವರಾಮ ಶೆಟ್ಟಿ, ಕಲಬುರಗಿಯ ಡಾ| ಕಲ್ಯಾಣರಾವ್‌ ಪಾಟೀಲ, ಬೆಳಗಾವಿಯ ವೈ.ಬಿ. ಹಿಮ್ಮಡಿ, ಹಂಪಿಯ ರೆಹಮತ್‌ ತರೀಕೆರೆ, ಸೊಲ್ಲಾಪುರದ ಗುರುಲಿಂಗಪ್ಪ ದಬಾಲೆ, ದಾವಣಗೆರೆಯ ಮಲ್ಲಿಕಾರ್ಜುನ ಕಡಕೋಳ ವಿಷಯ ಮಂಡಿಸಿದರು.

ದೇಶ ಸದ್ಯ ಆತಂಕದ ಸ್ಥಿತಿಯಲ್ಲಿದೆ. ಇಂತಹ ಸಂದರ್ಭಗಳಿಗೆ ಸೂಕ್ತ
ಔಷಧ ಸಿಗುವುದು ತತ್ವಪದಗಳು ಮತ್ತು ವಚನಗಳಿಂದ ಮಾತ್ರ. ತತ್ವಪದಗಳು ನಮ್ಮನ್ನು ನಾವು ಅರಿತುಕೊಳ್ಳುವ ಮಾರ್ಗವನ್ನು ತೋರಿಸುವ ಶಕ್ತಿ ಹೊಂದಿವೆ. ನಾನು ಯಾರು ಎನ್ನುವುದರ ಆಸ್ಮಿತೆಯನ್ನು ತತ್ವಪದ ತೋರಿಸುತ್ತದೆ.
ನಟರಾಜ ಬೂದಾಳು,
ಚಿಂತಕ

Advertisement

Udayavani is now on Telegram. Click here to join our channel and stay updated with the latest news.

Next