Advertisement

ಕ್ಷೇತ್ರಕ್ಕೆ ಮೋದಿ ಕೊಡುಗೆ ಏನು?

11:51 AM Apr 05, 2019 | |

ಕಲಬುರಗಿ: ನಾನು ಕಲಬುರಗಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಲ್ಲಿ ಮತ ಕೇಳುತ್ತೇನೆ. ಐದು ವರ್ಷಗಳ ಕಾಲ ನಿಮ್ಮ ಅಧಿಕಾರದಲ್ಲಿ ಕಲಬುರಗಿಗೆ ಯಾವುದೇ ಕೊಡುಗೆ ನೀಡದ ನೀವು, ನಿಮ್ಮ ಬಿಜೆಪಿ ಅಭ್ಯರ್ಥಿಗೆ ಯಾವ ಆಧಾರದ ಮೇಲೆ ಮತ ಕೇಳುತ್ತೀರಿ ಎಂದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನಿಸಿದರು.

Advertisement

ಕಲಬುರಗಿ ಲೋಕಸಭೆ ಮೀಸಲು ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆಲುವು ಬಯಸಿ ಮಲ್ಲಿಕಾರ್ಜುನ ಖರ್ಗೆ ಗುರುವಾರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಮೆರವಣಿಗೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಿಂದುಳಿದ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ 371ನೇ (ಜೆ) ಕಲಂ ಜಾರಿ ಮಾಡಿ ಕಾಂಗ್ರೆಸ್‌ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಈ ಭಾಗದಲ್ಲಿ 371ನೇ (ಜೆ)ಕಲಂ ಅನುಷ್ಠಾನವಾದ ನಂತರ 31 ಸಾವಿರ ಯುವಕರಿಗೆ ನೌಕರಿ ಸಿಕ್ಕಿದೆ. ಕಲಬುರಗಿಗೆ ನಾನು ವಿಮಾನ ನಿಲ್ದಾಣ, ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್‌ಐ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ರಾಷ್ಟ್ರೀಯ ಹೆದ್ದಾರಿಗಳು, ಸ್ಕಿಲ್‌ ಟ್ರೈನಿಂಗ್‌ ಸಂಸ್ಥೆ ಹೀಗೆ ಹತ್ತು-ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇದೇ ಕೆಲಸವನ್ನು ಮುಂದಿಟ್ಟುಕೊಂಡು ಜನತೆಯಿಂದ ಮತ ಕೇಳುತ್ತೇನೆ ಎಂದರು.

ನಾವು ಬೀದರ-ಕಲಬುರಗಿ ರೈಲ್ವೆ ಮಾರ್ಗವನ್ನು ಆರಂಭ ಮಾಡಿದ್ದೀವಿ. ನೀವು ಸ್ವಲ್ಪ ಕೆಲಸ ಮಾಡಿ ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದೀರಿ. ಕಲಬುರಗಿಗೆ ಬಂದು ಎನ್‌ವಿ ಗ್ರೌಂಡ್‌ನ‌ಲ್ಲಿ ನಿಂತು ಬೆಂಗಳೂರು, ಹುಬ್ಬಳ್ಳಿ, ರಾಯಚೂರು ಕೆಲಸಗಳಿಗೆ ಇಲ್ಲಿ ಬಟನ್‌ ಒತ್ತುತ್ತಿರಿ. ಇಲ್ಲಿ ಬಂದು ಬರೀ ಭಾಷಣ ಮಾಡುತ್ತೀರಿ. ಪ್ರಧಾನಿ ಮೋದಿ ಅವರೇ ನಿಮ್ಮ ಐದು ವರ್ಷ ಅಧಿಕಾರಾವಧಿಯಲ್ಲಿ ಕಲಬುರಗಿ ಮತ್ತು ಹೈದ್ರಾಬಾದ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ? ಮೋದಿ, ಮೋದಿ ಪಕ್ಷದವರು ಏನು ಮಾಡಿದ್ದಾರೆಂದು ಮತ ಕೇಳುತ್ತಾರೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next