ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ, ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಕಿಡಿಕಾರಿದರು.
Advertisement
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತಜ್ಞರು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ, ದೇಶದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ರೂಪಿಸಿದೆ. ಅದೇ ರೀತಿ ಪ್ರತಿಯೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯಕಾಪಾಡುವುದಾಗಿ ಕಾಂಗ್ರೆಸ್ ಭರವಸೆ ಕೊಟ್ಟಿದೆ. ಗಾಂಧಿಯನ್ನು ಕೊಂದವರು ದೇಶದ್ರೋಹಿಗಳೇ ಹೊರತು, ಕಾಂಗ್ರೆಸ್‌ನವರಲ್ಲ. ಕಾಂಗ್ರೆಸ್ ಪಕ್ಷ ಎಂದರೆ ಅಭಿವೃದ್ಧಿ, ಬಿಜೆಪಿ ಎಂದರೆ ಅಪಪ್ರಚಾರ ಎಂದು ಟೀಕಿಸಿದರು.
ತಂದ ನರೇಗಾ ಯೋಜನೆಯಿಂದ 14 ಕೋಟಿ ಜನರು ಆರ್ಥಿಕವಾಗಿ ಸದೃಢರಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿರುದ್ಯೋಗ ಸಮಸ್ಯೆ 45 ವರ್ಷಗಳಲ್ಲೇ
ಅಧಿಕವಾಗಿದೆ. ಕೃಷಿ ಮತ್ತು ಕೈಗಾರಿಕಾ ವಲಯ ಕುಂಠಿತಗೊಂಡಿದೆ ಎಂದು ದೂರಿದರು. ಪ್ರಧಾನಿ ಮೋದಿ ತಾವು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಬಿಜೆಪಿಯಂತೆ ಅಲ್ಲ. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳನ್ನು ಈಡೇರಿಸಿದೆ, ಈಡೇರಿಸುತ್ತೇವೆ ಎಂಬ
ಘೋಷ ವಾಕ್ಯದೊಂದಿಗೆ ಈ ಚುನಾವಣೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಡತನ ನಿರ್ಮೂಲನೆ ದಿಶೆಯಲ್ಲಿ ದೇಶದ ಶೇ.20ರಷ್ಟು ಎಂದರೆ 5 ಕೋಟಿ ಕಡುಬಡವ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿಗಳನ್ನು ಖಾತೆಗೆ ಹಾಕುವ “ನ್ಯಾಯ್’ ಯೋಜನೆ ಜಾರಿ ವಾಗ್ವಾನ ನೀಡಲಾಗಿದೆ. 2020ರೊಳಗೆ 34 ಕೋಟಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರದ 4 ಲಕ್ಷ ಹುದ್ದೆಗಳು, ಹಲವು ರಾಜ್ಯಗಳಲ್ಲಿ ಖಾಲಿ ಇರುವ 20 ಲಕ್ಷ ಹುದ್ದೆಗಳು, ಸೇವಾ ಆದ್ಯತಾ ವಲಯದ 10 ಲಕ್ಷ ಹುದ್ದೆಗಳು ಸೇರಿವೆ ಎಂದರು.
Related Articles
ಸಾಲ ಮನ್ನಾದಿಂದ ಸಾಲ ಮುಕ್ತಿಯತ್ತ ರೈತರನ್ನು ಕೊಂಡೊಯ್ಯಲಾಗುವುದು. ಜತೆಗೆ ಕೃಷಿ ಆಯೋಗ ರಚನೆ ಹಾಗೂ ಕೃಷಿ ಬಜೆಟ್ ಮಂಡಿಸುತ್ತೇವೆ. ಈಗಿರುವ ಜಿಎಸ್‌ಟಿ ಸರಳಿಕೃತಗೊಳಿಸಿ ಏಕರೂಪ ತೆರಿಗೆಯ ಜಿಎಸ್‌ಟಿ-2 ಜಾರಿಗೆ ತರಲಾಗುವುದು ಎಂದು ಹೇಳಿದರು.
Advertisement
ಒಂದರಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಮೊದಲ ಅಧಿವೇಶನದಲ್ಲೇ ಮಹಿಳೆಯರಿಗೆ ಲೋಕಸಭೆ, ವಿಧಾನಸಭೆ ಹಾಗೂ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಶೇ.33ರಷ್ಟು ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಾಗುವುದು ಎಂದು ವಿವರಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್‌ನ ಸದಸ್ಯರಾದ ಯು.ಬಿ. ವೆಂಕಟೇಶ, ಕೆ.ಸಿ. ಕೊಂಡಯ್ಯ, ಶರಣಪ್ಪ ಮಟ್ಟೂರು, ಮುಖಂಡರಾದ ಕೃಷ್ಣಾಜಿ ಕುಲಕರ್ಣಿ, ಸತ್ಯಪ್ರಕಾಶ ಹಾಜರಿದ್ದರು.
ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಜಾರಿಯಾದ 371ನೇ (ಜೆ) ಕಲಂ ಅಡಿಮೀಸಲಾತಿ ನೀಡುವುದು ಕಡ್ಡಾಯವಾಗಿದೆ. ಅದರಂತೆ ಇದುವರೆಗೆ 30,184 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇತ್ತೀಚೆಗೆ 10 ಸಾವಿರ
ಶಿಕ್ಷಕರ ಹುದ್ದೆಗಳಲ್ಲಿ ಈ ಭಾಗದಲ್ಲಿ 5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಜತೆಗೆ ಹೈ.ಕ ಭಾಗದ ಅಭ್ಯರ್ಥಿಗಳಿಗೆ ಐದು ಕೃಪಾಂಕ ನೀಡುವಂತೆ ಮನವಿ ಮಾಡಲಾಗಿದೆ.
.ಶರಣಪ್ಪ ಮಟ್ಟೂರು, ಎಂಎಲ್‌ಸಿ