Advertisement
ಮಾರ್ಚ್ 10ರಂದು ಲೋಕಸಭೆ ಚುನಾವಣೆ ಘೋಷಣೆಯಾಗುವ ಮೂರು ದಿನಗಳ ಮುಂಚೆ ಮಾರ್ಚ್ 6ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಶಿವರಾತ್ರಿ ಅಮಾವಾಸ್ಯೆಯಂದು ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ ಆಗಮಿಸಿ ಚುನಾವಣೆ ರಣಕಹಳೆ ಮೊಳಗಿಸಿದ್ದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಡಾ| ಉಮೇಶ ಜಾಧವ ಪ್ರಧಾನಿ ಕಾರ್ಯಕ್ರಮದ ವೇದಿಕೆ ಮೇಲೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.
Related Articles
Advertisement
ಏ. 16ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುರುಮಿಠಕಲ್ ಕ್ಷೇತ್ರ ಹಾಗೂ ಚಿತ್ತಾಪುರದಲ್ಲಿ ಏ. 17ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುಮಿಠಕಲ್ ಕ್ಷೇತ್ರ. ಅಫಜಲಪುರ, ಜೇವರ್ಗಿ ಹಾಗೂ ಕಲಬುರಗಿ ನಗರದಲ್ಲಿ ಚುನಾವಣೆ ಪ್ರಚಾರ ಸಭೆಗಳನ್ನು ನಡೆಸಿದರು.
ಚುನಾವಣೆ ಪ್ರಚಾರದ ಬಹಿರಂಗ ಪ್ರಚಾರದ ಕೊನೆ ದಿನವಾದ ಏ. 21ರಂದು ಕಾಂಗ್ರೆಸ್‌ನಿಂದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಕಲಬುರಗಿ ಉತ್ತರ, ಶಹಾಬಾದ ಹಾಗೂ ಕಲಬುರಗಿ ನಗರದಲ್ಲಿ ಚುನಾವಣೆ ಪ್ರಚಾರಸಭೆ ನಡೆಸಿದರು. ಅದೇ ರೀತಿ ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ಬಿಜೆಪಿ ಹಿರಿಯ ನಾಯಕ ಮುರಳೀಧರರಾವ್ ಪ್ರಚಾರ ಸಭೆ ನಡೆಸಿದರಲ್ಲದೇ ಅಭ್ಯರ್ಥಿ ಜತೆ ರೋಡ್ ಶೋ ನಡೆಸಿದರು. ಏ. 23ರಂದು ಈ ಎಲ್ಲ ಪ್ರಚಾರ ಸಭೆಗಳಿಗೆ ಹಾಗೂ ಶೋಗಳಿಗೆ ಉತ್ತರವಾಗಿ ಚುನಾವಣೆ ನಡೆಯಿತು. ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.
ಪ್ರತಿಶತ ಫಲಿತಾಂಶ ಹೆಚ್ಚಳ: ಜಾಧವ್‌ಗೆ ಅನುಕೂಲವೇ?ಕಲಬುರಗಿ: ಕಳೆದ ಸಲಕ್ಕಿಂತ ಶೇ. 2ರಷ್ಟು ಮತದಾನ ಹೆಚ್ಚಳವಾಗಿರುವುದು ಅದರಲ್ಲೂ ಗ್ರಾಮೀಣ ಭಾಗದ ಮತದಾರರಲ್ಲಿ ಕಂಡು ಬಂದಿರುವ ಉತ್ಸಾಹ ಅವಲೋಕಿಸಿದರೆ ಯಾರಿಗೆ ಅನುಕೂಲವಾಗಬಹುದೆಂಬ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಹೆಚ್ಚಿನ ಶೇಕಡಾವಾರು ಮತದಾನ ಬಿಜೆಪಿ ಅಭ್ಯರ್ಥಿ ಪರ ಅನುಕೂಲವಾಗಬಹುದೇ? ಎನ್ನುವ ನಿಟ್ಟಿನಲ್ಲಿ ಅಂದಾಜಿಸಲಾಗುತ್ತಿದೆ. ವಲಸೆ ಹೋಗಿದ್ದ ಮತದಾರರು ವಾಪಸ್ಸು ಬಂದಿರುವುದು ಜಾಧವ ಪರ ಚಲಾಯಿಸಿರುವುದಾಗಿ ತಿಳಿಸಿದ್ದಾರೆ. ಮುಖ್ಯವಾಗಿ 2014ರಲ್ಲಿ 10 ಲಕ್ಷ ಮತದಾನವಾಗಿತ್ತು. ಈ ಸಲ 19.45 ಲಕ್ಷ ಮತದಾರರಲ್ಲಿ 11 ಲಕ್ಷ 55 ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹೊಸ ಮತದಾರರ ಒಲವು ಬಿಜೆಪಿ ಕಡೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಾಧವಗೆ ಸಹಾಯವಾಗುವುದೆಂದು ಬಿಜೆಪಿ ಮೂಲಗಳು ಹೇಳುತ್ತಿವೆ.