ಸ್ವತಂತ್ರವಾಗಬೇಕಾದರೆ ಅಪ್ಪ-ಮಗನಿಗೆ ಮನೆಗೆ ಕಳುಹಿಸುವ ಕೆಲಸ ಮತದಾರರು ಮಾಡಬೇಕೆಂದು ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಹೇಳಿದರು.
Advertisement
ನಗರದ ಲಕ್ಷ್ಮಿಗಂಜ್‌ನಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಈ ಭಾಗದ ಸಿಮೆಂಟ್ ಕಾರ್ಖಾನೆಗಳು ಬಂದ್ ಆಗಿವೆ. ಗ್ರಾನೈಟ್ ಗಣಿಗಳಿಗೆ ಹೊಲಿಕೆ ಮಾಡಿ ಕಲ್ಲಿನ ಗಣಿಗಳು ಮುಚ್ಚಲಾಗಿದೆ. ಸಾವಿರಾರು ಜನರಿಗೆ ಕೆಲಸವಿಲ್ಲದೇ ಗುಳೆ ಹೋಗುತ್ತಿದ್ದಾರೆ. ಆದರೆ ಖರ್ಗೆ ಅವರಿಗೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಮೆಂಟ್ ಕಾರ್ಖಾನೆಗಳು ಪ್ರಾರಂಭ ಮಾಡುವ ಸಾಹಸಕ್ಕೂ ಕೈ ಹಾಕಿಲ್ಲ. ಒಂದು ವೇಳೆ ನಗರದ ಎರಡು ಕಾರ್ಖಾನೆಗಳು ಪ್ರಾರಂಭವಾಗಿದ್ದರೇ ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಆದರೆಇದ್ಯಾವುದು ಮಾಡದೇ, ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತ ಹೊರಟಿದ್ದಾರೆ. ಕಲಬುರಗಿ ಜಿಲ್ಲೆ ಹಿಂದುಳಿಯಲು ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಮಗ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದು ವಾಗ್ಧಾಳಿ ನಡೆಸಿದರು.
ಖರ್ಚು ಮಾಡಿ ಮತದಾನ ಮಾಡಲು ಬರುತ್ತಿದ್ದಾರೆ. ನಮ್ಮ ಜನರು ಸ್ವಾಭಿಮಾನಿಗಳು. ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಬಿಕ್ಷೆ ಎಂದಿಗೂ ಬೇಡುವುದಿಲ್ಲ. ಇವರಿಗೆ ಸೋಲಿನ ಭೀತಿ ಎದುರಾಗಿದೆ. ಆದ್ದರಿಂದ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಎರಡನೇ ರೂಪ ನರೇಂದ್ರ ಮೋದಿಯವರು. ಅವರಿಗೆ ಪ್ರಧಾನ ಮಂತ್ರಿ ಮಾಡಬೇಕು. ಅಪ್ಪ-ಮಗನಿಗೆ ಮನೆಗೆ ಕಳುಹಿಸುವಂತ ಕೆಲಸ ಮತದಾರರು ಮಾಡಬೇಕೆಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಸದಸ್ಯ ಶಶೀಲ ನಮೋಶಿ, ಶಾಸಕ ಬಸವರಾಜ ಮತ್ತಿಮೂಡ, ಶರಣಪ್ಪ ಹದನೂರ, ನಗರ ಘಟಕದ ಅಧ್ಯಕ್ಷ ಸುಭಾಷ ಜಾಪೂರ, ಭೀಮರಾವ ಸಾಳೊಂಕೆ, ಅರುಣ ಪಟ್ಟಣಕರ, ಅಣವೀರ ಇಂಗಿನಶೆಟ್ಟಿ, ನರೇಂದ್ರ ವರ್ಮಾ, ಮುಕ್ತಾರ ಅಹ್ಮದ, ಮಹ್ಮದ ಜೀಲಾನಿ, ಭೀಮಣ್ಣ ಖಂಡ್ರೆ, ನಾಗರಾಜ ಮೇಲಗಿರಿ, ಜ್ಯೋತಿ ಶರ್ಮಾ, ಭಾಗೀರತಿ ಗುನ್ನಾಪುರ, ಪಾರ್ವತಿ ಪವಾರ, ರವಿ ರಾಠೊಡ, ಅನಿಲ ಬೊರಗಾಂವಕರ, ದೇವದಾಸ
ಜಾಧವ, ಅಣ್ಣಪ್ಪ ದಸ್ತಾಪುರ, ಡಾ| ಅಶೋಕ ಜಿಂಗಾಡೆ ಇದ್ದರು.ಬಸವರಾಜ ಬಿರಾದಾರ ನಿರೂಪಿಸಿದರು. ದೇವದಾಸ ಜಾಧವ ವಂದಿಸಿದರು.