ಸೇಡಂ: ಪ್ರಧಾನಿ ನರೇಂದ್ರ ಮೋದಿಯೊಬ್ಬ ಕ್ರಿಮಿನಲ್, ಮಾಯದ ಮಾತಾಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಮತ್ತು ಮೋದಿ ಒಂದೇ ನಾಣ್ಯದ ಎರಡು ಮುಖಗಳು. ಪ್ರಧಾನಿ ಮೋದಿ ದೊಡ್ಡ ಕಳ್ಳ, ಕೆಸಿಆರ್ ಸಣ್ಣ ಕಳ್ಳ ಎಂದು ತೆಲುಗಿನ ಖ್ಯಾತ ನಟಿ, ಕಾಂಗ್ರೆಸ್ ನಾಯಕಿ ವಿಜಯಶಾಂತಿ ಟೀಕಿಸಿದರು.
ತಾಲೂಕಿನ ಮುಧೋಳ ಗ್ರಾಮದಲ್ಲಿ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಪರ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಮೋದಿ ಬಂಡವಾಳಶಾಹಿ ಅದಾನಿ ಮತ್ತು ಅಂಬಾನಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಆಪಾದಿಸಿದರು. ಅಚ್ಛೇ ದಿನ್ ಹೆಸರಲ್ಲಿ ರೈತರು, ಕಾರ್ಮಿಕರು, ಬಡವರನ್ನು ವಂಚಿಸಲಾಗುತ್ತಿದೆ.
ಕೇವಲ ನೀರವ ಮೋದಿ, ಲಲಿತ ಮೋದಿ, ಮೆಹುಲ್ ಚೌಕ್ತಿ ಅಂತವರು ದೇಶವನ್ನು ಲೂಟಿ ಮಾಡುತ್ತಿದ್ದರೂ ಮೋದಿ ಸುಮ್ಮನಿದ್ದಾರೆ.
ಜಿಎಸ್ಟಿಯಿಂದ ತಾತ, ಮುತ್ತಾತನ ಕಾಲದಲ್ಲಿನ ಚಿನ್ನಾಭರಣಕ್ಕೂ ಲೆಕ್ಕ ತೋರಿಸುವ ಪರಿಸ್ಥಿತಿ ಬಂದಿದೆ. ಮುಂದೊಂದು ದಿನ ತಿನ್ನುವ ಅನ್ನಕ್ಕೂ ಲೆಕ್ಕ ಕೇಳಬಹುದು ಎಂದರು.
ಜನರ ದಾರಿ ತಪ್ಪಿಸುತ್ತಿರುವ ಮಾಧ್ಯಮ: ಪ್ರಧಾನಿ ಮೋದಿ ಕೈಯಲ್ಲಿರುವ ದೇಶದ ಕೆಲವು ಮಾಧ್ಯಮಗಳು ಜನರ ದಾರಿ ತಪ್ಪಿಸುತ್ತಿವೆ. ಸತ್ಯ ಮರೆಮಾಚಲಾಗುತ್ತಿದೆ. ಯಾವೊಂದು ಚಾನಲ್
ಗಳು ಮೋದಿ ವಿರುದ್ಧ ಮಾತನಾಡಿದರೆ, ಚಾನಲ್‌ನ ಪರವಾನಗಿಯನ್ನೇ ರದ್ದು ಮಾಡುವಷ್ಟು ಶಕ್ತಿಯನ್ನು ಮೋದಿ ಹೊಂದಿದ್ದಾರೆ.
ಈಗ ಸೋಷಿಯಲ್ ಮೀಡಿಯಾಗಳು ಸತ್ಯವನ್ನು ತೋರಿಸುತ್ತಿವೆ ಎಂದರು. ಡಾ| ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ವಿಧಾನಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ, ಮುಕ್ರಂಖಾನ್, ಮಹಾಂತಪ್ಪ ಸಂಗಾವಿ, ಪ್ರತಿಭಾ ಪಾಟೀಲ, ಸುನೀತಾ ತಳವಾರ, ಧೂಳಪ್ಪ, ವೆಂಕಟರೆಡ್ಡಿ, ಜಗನ್ನಾಥ ಗೋಟೂರ, ರವಿ, ಹಾಜಿ ನಾಡೇಪಲ್ಲಿ, ದಾಮೋದರರೆಡ್ಡಿ, ಕುಸುಮಾ, ತೆಲಂಗಾಣ ಕಾಂಗ್ರೆಸ್ ನಾಯಕಿ ಶಾರದಾ ಇದ್ದರು.
ಕಾಲೇಜೇ ಜೂಜು ಅಡ್ಡೆ
ಗುಂಡೇಪಲ್ಲಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪದವಿ ಕಾಲೇಜು
ಸ್ಥಳದಲ್ಲಿ ಶಾಸಕ ರಾಜಕುಮಾರ ಪಾಟೀಲ ಜೂಜು ಅಡ್ಡೆ ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದಾರೆ. ಅಣ್ಣ-ತಮ್ಮ ಸೇರಿ ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಪರ್ಸಂಟೇಜ್ ಪಡೆಯುತ್ತಿದ್ದಾರೆ.
ಡಾ| ಶರಣಪ್ರಕಾಶ ಪಾಟೀಲ,
ಮಾಜಿ ಸಚಿವ