ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದತ್ತ ಪ್ರಸ್ತುತ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಚಿತ್ತ ಹರಿದಿದೆ.
Advertisement
ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಈ ಸಲವಾದರೂ ಬಿಜೆಪಿಗೆ ಹೆಚ್ಚಿನ ಮತಗಳು ಬೀಳಬೇಕೆಂದು ಕಸರತ್ತು ನಡೆದಿದ್ದರೇ,ಉತ್ತರದಂತೆ ದಕ್ಷಿಣದಲ್ಲಿಯೂ ಲೀಡ್ ಪಡೆಯಬೇಕೆಂದು ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಕಸರತ್ತು ನಡೆಸಿದೆ.
ಬರುತ್ತಿರುವ ವಿಷಯವೇ ಪ್ರಮುಖವಾಗಿ ಈ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ. ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಳೆದ ವಿಧಾನಸಭಾ ಚುನಾವಣೆಯಲ್ಲಿ 5431 ಮತಗಳ ಅಂತರದಿಂದ
ಚುನಾಯಿತರಾಗಿದ್ದಾರೆ. ಇವರು ಈ ಸಲ ಹೆಚ್ಚಿಗೆ ಲೀಡ್ ಕೊಡುವುದಾಗಿ
ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ ಕಳೆದ
ಸಲಕ್ಕಿಂತ ಹೆಚ್ಚಿಗೆ ಲೀಡ್ ತರಬೇಕು
ಎನ್ನುವ ನಿಟ್ಟಿನಲ್ಲಿ ಕಸರತ್ತು ನಡೆಸಿದೆ.
Related Articles
ಮಾಡಿರುವುದು ಕ್ಷೇತ್ರದಲ್ಲಿ ತೀವ್ರ ಚರ್ಚೆ ಆಗುತ್ತಿದೆ. ಕಳೆದ ಸಲ ಪರೋಕ್ಷವಾಗಿ ಬೆಂಬಲ ನೀಡಿದ ಪರಿಣಾಮವೇ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್‌ಗೆ ಸ್ವಲ್ಪ ಹೆಚ್ಚಿಗೆ ಮತಗಳು ಬಂದಿವೆ ಎಂಬುದಾಗಿಯೂ ಕೆಲವರು ಉಲ್ಲೇಖೀಸುತ್ತಿದ್ದಾರೆ.
Advertisement
ಖರ್ಗೆ ಅವರಿಗೆ ಬೆಂಬಲಿಸಲಾಗುತ್ತಿದೆ ಎಂದು ಕೆಲವು ಕಿಡಿಗೇಡಿಗಳು ಅದರಲ್ಲೂ ಕಾಂಗ್ರೆಸ್ ನವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಇದನ್ನೇ ಮಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ. ಮತದಾರರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎನ್ನುತ್ತಾರೆ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ.
ನೀರಿನ ಸಮಸ್ಯೆ: ಕ್ಷೇತ್ರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಿದೆ. ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಸ್ವಲ್ಪ ಜಾಸ್ತಿಯೇ ಇದೆ.
ರಸ್ತೆಗಳ ಪರಿಸ್ಥಿತಿಯಂತೂ ಹದಗೆಟ್ಟು ಹೋಗಿದೆ. ಕ್ಷೇತ್ರದವ್ಯಾಪ್ತಿಯಲ್ಲಿ ಆರು ವರ್ಷಗಳ ಹಿಂದೆಯೇ ಕೈಗೆತ್ತಿಕೊಂಡಿರುವ
ರೈಲ್ವೆ ಕಾಮಗಾರಿಗಳು ಇನ್ನೂವರೆಗೂ ಮುಗಿಯುತ್ತಿಲ್ಲ. ಒಂದೂವರೆ ದಶಕದಿಂದ ಕಣ್ಣಿ ತರಕಾರಿ ಮಾರುಕಟ್ಟೆ ಸಮಸ್ಯೆಗೆ
ಪರಿಹಾರ ಸಿಗದೇ ಹಾಗೆ ಮುಂದುವರಿದು ಬರುತ್ತಿರುವುದು ದುರಂತವೇ ಎನ್ನಬಹುದು. ಅಲ್ಲದೇ ಒಳಚರಂಡಿ ಸಮಸ್ಯೆಯೂ
ಕ್ಷೇತ್ರದಲ್ಲಿದೆ. ಬಿಜೆಪಿ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣೆ ಘೋಷಣೆ ಮುಂಚೆಯೇ ಕಳೆದ ಮಾರ್ಚ್ 6ರಂದು ಆಗಮಿಸಿ ಚುನಾವಣಾ ಪ್ರಚಾರ ನಡೆಸಿ ಹೋಗಿದ್ದಾರೆ. ಇನ್ನುಳಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇತರ ನಾಯಕರು ಮತಯಾಚಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಗೂ ಇನ್ನಿತರ ಮುಖಂಡರು ಪ್ರಚಾರ ಕೈಗೊಳ್ಳುತ್ತಿದ್ದಾರೆ.
ಒಟ್ಟಾರೆ ಈ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಪೈಪೋಟಿ ಎನ್ನುವಂತೆ
ಮತ ಬೇಟೆಗಿಳಿದಿವೆ. ಕಿಡಿಗೇಡಿಗಳ ಕೃತ್ಯ
ಫೇಸ್‌ಬುಕ್‌ನಲ್ಲಿ ತಾವು ಕಾಂಗ್ರೆಸ್‌ಗೆ ಬೆಂಬಲಿಸುತ್ತಿರುವುದಕ್ಕೆ ಅಭಿನಂದನೆ ಎಂದು ಪ್ರಸ್ತಾಪಿಸಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವಾಗಿದೆ. 2009ರಲ್ಲಿ ಬಿಜೆಪಿಯೇ ಲೀಡ್
ಆಗಿದೆ. ಕಳೆದ ಸಲ ಮಾತ್ರ 269 ಮತಗಳು ಕಾಂಗ್ರೆಸ್
ಗೆ ಲೀಡ್ ಆಗಿದೆ. ಆದರೆ ಈ ಸಲ ಬಿಜೆಪಿ ಲೀಡ್ ಆಗುತ್ತದೆ. ಮತದಾರರೆಲ್ಲರೂ ದೇಶದ ಹಿತದೃಷ್ಟಿಯಿಂದ ಅದರಲ್ಲೂ ಮೋದಿ ಕೈ ಬಲಪಡಿಸಲು ಶಪಥ ಮಾಡಿದ್ದಾರೆ. ವಿರೋಧಿಗಳಿಗೆ ಫಲಿತಾಂಶವೇ ಉತ್ತರ ನೀಡಲಿದೆ.
ದತ್ತಾತ್ರೇಯ ಪಾಟೀಲ
ರೇವೂರ, ಶಾಸಕರು, ಕಲಬುರಗಿ ದಕ್ಷಿಣ