ಅಧ್ಯಕ್ಷ, ಖ್ಯಾತ ನಟ ಉಪೇಂದ್ರ ತಿಳಿಸಿದರು.
Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನೈಜತೆಗಾಗಿ ಪ್ರಜಾಕೀಯ ಪಕ್ಷ ಪ್ರಯತ್ನಿಸಲಿದೆ. ರಾಜಕೀಯದಲ್ಲಿ ವಿಚಾರವಂತರು, ಪ್ರಾಮಾಣಿಕರಿಗೆ ಅವಕಾಶ ಕೊಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಧಾರವೇ ಅಂತಿಮ ಎನ್ನುವ ವ್ಯವಸ್ಥೆ ನಿರ್ಮಿಸಬೇಕಿದೆ ಎಂದರು.ರಾಜಕೀಯ ಎನ್ನುವುದು ಮತ ಮತ್ತು ಕಾರ್ಯಕರ್ತರನ್ನು ಖರೀದಿಸುವ ದಂಧೆಯಾಗಿದೆ. ರಾಜಕೀಯ ಸೇವೆ ಎನ್ನುತ್ತಾ ವ್ಯಾಪಾರ ಮಾಡಿಕೊಂಡು 72 ವರ್ಷಗಳಿಂದ ಜನತೆಯನ್ನು ವಂಚಿಸಿಕೊಂಡು ಬರಲಾಗುತ್ತಿದೆ. ರಾಜ, ಮಹಾರಾಜರ ಜಾಗದಲ್ಲಿ ರಾಜಕಾರಣಿಗಳು ಬಂದು ಕುಳಿತಿದ್ದಾರೆ. ಎಲ್ಲಿಯವರೆಗೆ ಹಣ, ತೋಳ್ಬಲಗಳ ಮಾತು ನಡೆಯವುದೋ ಅಲ್ಲಿಯ ವರೆಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ನಿಜವಾದ ಶಕ್ತಿ ಇರುವುದಿಲ್ಲ ಎಂದು ಹೇಳಿದರು.
ಅಭ್ಯರ್ಥಿ ದೊರೆಯದ ಕಾರಣ ಪ್ರಜಾಕೀಯ ಪಕ್ಷ ಸ್ಪರ್ಧಿಸಿಲ್ಲ ಎಂದು ವಿವರಿಸಿದರು. ಶಾಸಕ, ಸಂಸದರಾಗಿ ಆಯ್ಕೆಯಾದವರು ನಮ್ಮ ಸೇವಕರು ಎನ್ನುವ ತತ್ವವನ್ನು ಪ್ರಜಾಕೀಯ ಹೊಂದಿದೆ. ಸೇವೆ ಮಾಡಲೆಂದೇ ನಾವು ಅವರಿಗೆ ಸಂಬಳ ಕೊಡುತ್ತೇವೆ. ಅದಕ್ಕಾಗಿಯೇ ಪ್ರಜಾಕೀಯ ಪಕ್ಷ ಈಗಾಗಲೇ ಅಭ್ಯರ್ಥಿಗಳಿಗೆ ಸಮವಸ್ತ್ರ ನೀಡಿದೆ. ಪ್ರಜೆಗಳಿಗೆ ಕೀ ಕೊಡುವ ಕೆಲಸ ಪ್ರಜಾಕೀಯ ಮಾಡಲಿದೆ. ಪ್ರಜಾಕೀಯ ಪಕ್ಷದಲ್ಲಿ ಪ್ರಣಾಳಿಕೆ ಇಲ್ಲ. ಜನರು ನೀಡುವ ಹೇಳಿಕೆಗಳು,
ಸಮಸ್ಯೆಗಳೇ ಪ್ರಣಾಳಿಕೆ ಆಗಲಿದೆ. ಜನತೆ ನೀಡುವ ಸಲಹೆ, ಸೂಚನೆಗಳಂತೆ ಅಧಿಕಾರ ನಡೆಸಲಾಗುವುದು. ಜನತೆಯೇ ತಮ್ಮ ಸಮಸ್ಯೆ ತಿಳಿಸಲಿ ಎಂದು ಅವರ ಕೈಗೆ ಖಾಲಿ ಹಾಳೆ ಕೊಡುತ್ತಿದ್ದೇವೆ ಎಂದರು.
Related Articles
ಸಂದರ್ಭದಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎನ್ನುವುದನ್ನು ಜನರಿಗೆ ಕೇಳಿಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಹೇಶ ಲಂಬಾಣಿ ಮಾತನಾಡಿ, ನಾನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಂಡಾದವನಾಗಿದ್ದು, ವಲಸೆ ಕುಟುಂಬದಿಂದ
ಬಂದಿದ್ದೇನೆ. ಎಂಎ ಮುಗಿದಿದ್ದು, ಪಿಎಚ್.ಡಿ. ಮಾಡುತ್ತಿದ್ದೇನೆ. ನಿರುದ್ಯೋಗಿಗಳ ಪರವಾಗಿ ಸಂಸತ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದರು.
Advertisement
ಮತ ಕೊಡಿ: ತಮ್ಮ ನೆಚ್ಚಿನ ನಟ ಉಪೇಂದ್ರ ಜತೆಗೆ ಸೆಲ್ಫಿ ಪಡೆಯಲು ಅಭಿಮಾನಿಗಳು, ಯುವಕರು ಮುಗಿಬಿದ್ದಿದ್ದರು. ತಾಳ್ಮೆಯಿಂದಲೇ ಎಲ್ಲರಿಗೂಪೋಸು ಕೊಟ್ಟ ಉಪೇಂದ್ರ, ಯುವಕರು ಪೋಟೋ ತೆಗೆಸಿಕೊಂಡರೆ ಸಾಲದು. ಮತ ಕೊಡಬೇಕು. ರಾಜಕೀಯ ಪಕ್ಷಗಳ ಆಮಿಷಕ್ಕೊಳಗಾಗಬಾರದು. ಪ್ರಜಾಕೀಯ ಪಕ್ಷವನ್ನು ಬೆಂಬಲಿಸಿ ಎಂದು ಕರೆಕೊಟ್ಟರು. ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ
ಸುಮಲತಾ ಅಂಬರೀಷ ದೊಡ್ಡವರು. ನಾವು ಅವರ ಬಗ್ಗೆ ಮಾತನಾಡಲು ಹೋಗಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವೆ. ಲೋಕಸಭೆ ಚುನಾವಣೆಗೆ ಎಲ್ಲವನ್ನೂ ತಯಾರು ಮಾಡಿ, ಅಭ್ಯರ್ಥಿಗಳಿಗಾಗಿ ಓಡಾಟ ನಡೆಸುವ ಕೆಲಸ ಜಾಸ್ತಿ ಇದ್ದಿದ್ದರಿಂದ ಸ್ಪರ್ಧಿಸಲು ಹೋಗಿಲ್ಲ. ಉಪೇಂದ್ರ, ಅಧ್ಯಕ್ಷರು,
ಉತ್ತಮ ಪ್ರಜಾಕೀಯ ಪಕ್ಷ