Advertisement
2009 ಹಾಗೂ 2014ರಂತೆ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ಬರುತ್ತದೆಯೋ- ಇಲ್ಲವೋ ಎನ್ನುವ ವಿಷಯದತ್ತ ಎಲ್ಲರ ಚಿತ್ತವಿದೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಇದೆ ಎನ್ನಲಾದ ಅಸಮಾಧಾನ, ಇಲ್ಲವೇ ಅಭಿವೃದ್ಧಿಪರ ಕಾರ್ಯದ ಅಭಿಮಾನ ಈ ಚುನಾವಣೆಯಲ್ಲಿ ಮೇಲುಗೈ ಆಗುತ್ತದೆ ಎನ್ನುವುದರತ್ತ ಸ್ವಾರಸ್ಯಕರ ಚರ್ಚೆ ನಡೆದಿದೆ.
Related Articles
ಕೊನೆ ಮಾತು: ಚಿತ್ತಾಪುರದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್ ಬಾರದಿದ್ದರೆ ಜಿಲ್ಲೆಯ ಇತರ ಕ್ಷೇತ್ರದ ಕುರಿತಾಗಿ ಮಾತನಾಡುವ ಯಾವ ನೈತಿಕತೆ ಇರೋದಿಲ್ಲ ಎನ್ನುವ ಕುರಿತು ಕೆಲವೆಡೆ ಚರ್ಚೆ ನಡೆದಿದೆ. ಹೀಗಾಗಿ ಚಿತ್ತಾಪುರ ಕ್ಷೇತ್ರದ ಲೀಡ್ ವಿಷಯವೇ ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಡಕವಾಗಿದೆ.
Advertisement
ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ತತ್ವ, ಸಿದ್ಧಾಂತಗಳ ಮೇಲೆ ಚುನಾವಣೆ ಎದುರಿಸಿದೆ. ಕಾಂಗ್ರೆಸ್‌ನವರ ಹಾಗೆ ಹಣಬಲ, ತೋಳ್ಬಲ ಹಾಗೂ ಅಧಿಕಾರ ಬಲ ಬಳಕೆ ಮಾಡಿಕೊಂಡಿಲ್ಲ. ಆದರೆ ಮತದಾರರು ಮಾತ್ರ ಆಂತರಿಕವಾಗಿ ಬಿಜೆಪಿಯನ್ನೇ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮತದಾರರು ಹೆಚ್ಚಿನ ಒಲವು ಹೊಂದಿದ್ದಾರೆ. ಪಕ್ಷದ ಪರವಾಗಿ ಉತ್ತಮ ವಾತಾವರಣ ಕಂಡಿದೆ. ಒಟ್ಟಾರೆ ಮೂರ್‍ನಾಲ್ಕು ಸಾವಿರ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಆಗಬಹುದು. ಇಲ್ಲವೇ ಬಿಜೆಪಿಗೆ ಮೂರ್‍ನಾಲ್ಕು ಸಾವಿರ ಲೀಡ್ ಬರಬಹುದು. ಪರಿಸ್ಥಿತಿ ಕಠಿಣವಾಗಿದೆ.•ಮಲ್ಲಿಕಾರ್ಜುನ ಎಮ್ಮೆನೂರ,
ಬಿಜೆಪಿ ಚಿತ್ತಾಪುರ ತಾಲೂಕಾ ಅಧ್ಯಕ್ಷರು ಚಿತ್ತಾಪುರದಲ್ಲಿ ಮೋದಿ ಹವಾ ನಡೆಯಲ್ಲ. ಬಿಜೆಪಿಯವರು ತಮ್ಮ ಪಾಡಿಗೆ ಕೆಲಸ ಮಾಡಿದ್ದಾರೆ. ಅದೇ ರೀತಿ ನಮ್ಮ ಪಾಡಿಗೆ ನಾವು ಕೆಲಸ ಮಾಡಿದ್ದೇವೆ. ಕೆಲವೊಂದು ಏರಿಯಾದಲ್ಲಿ ಬಿಜೆಪಿಗೆ ಮುನ್ನಡೆ ಕಂಡು ಬಂದರೆ, ಇನ್ನು ಕೆಲವೆಡೆ ಕಾಂಗ್ರೆಸ್‌ಗೆ ಮುನ್ನಡೆಯಿದೆ. ಒಟ್ಟಾರೆ ಕಾಂಗ್ರೆಸ್ ಪಕ್ಷವೇ ಲೀಡ್ ಗಳಿಸುವಲ್ಲಿ ಯಾವುದೇ ಅನುಮಾನಗಳಿಲ್ಲ. ಬಿಜೆಪಿಯಲ್ಲಿ ಹಳೆ ಕಾರ್ಯಕರ್ತರ ಬದಲು ಹೊಸಬರೇ ಓಡಾಡಿದ್ದಾರೆ. ಮತದಾರರು ತಮ್ಮ ಪರ ಇರುವುದು ಚುನಾವಣೆ ಸಂದರ್ಭದಲ್ಲಿ ಸ್ಪಷ್ಟವಾಗಿ ಅರಿವಿಗೆ ಬಂದಿದೆ.
•ಭೀಮಣ್ಣ ಸಾಲಿ, ಅಧ್ಯಕ್ಷರು,
ಬ್ಲಾಕ್ ಕಾಂಗ್ರೆಸ್, ಚಿತ್ತಾಪುರ ಪಕ್ಷದ ಹೈಕಮಾಂಡ್ ಆದೇಶದಂತೆ ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡಲಾಗಿದೆ. ಇಬ್ಬರು ಕೂಡಿಕೊಂಡು ಉತ್ತಮ ಕೆಲಸ ಮಾಡಿದ್ದರಿಂದ ಮತದಾರ ಕೈ ಹಿಡಿಯುತ್ತಾನೆಂಬ ಸ್ಪಷ್ಟ ಭರವಸೆಯಿದೆ. ಕಾಂಗ್ರೆಸ್‌ಗೆ ಲೀಡ್ ಬರುತ್ತದೆ. ಆದರೆ ಎಷ್ಟು ಎನ್ನುವುದನ್ನು ಹೇಳಲಿಕ್ಕಾಗದು. ಪ್ರಮುಖವಾಗಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ಧಿ ಕೆಲಸಗಳು ಲೀಡ್‌ಗೆ ಪೂರಕವಾಗಲಿವೆ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಮತದಾರರು ಅಭಿವೃದ್ಧಿ ಕಾರ್ಯಗಳನ್ನೇ ಪ್ರಸ್ತಾಪಿಸುತ್ತಿದ್ದರು, ಹೀಗಾಗಿ ಕಾಂಗ್ರೆಸ್ ಹೆಚ್ಚು ಅನುಕೂಲವಾಗಲಿದೆ.
•ನಾಗಣ್ಣ ವಾರದ,
ಜೆಡಿಎಸ್ ಚಿತ್ತಾಪುರ ತಾಲೂಕಾಧ್ಯಕ್ಷರು ಹಣಮಂತರಾವ ಭೈರಾಮಡಗಿ