Advertisement

ಕಲಬುರಗಿ ಮೀಸಲು ಕ್ಷೇತ್ರ: 11.84 ಲಕ್ಷ ಮತದಾರರಿಂದ ಹಕ್ಕು ಚಲಾವಣೆ

11:03 AM Apr 25, 2019 | Naveen |

ಕಲಬುರಗಿ: ಕಲಬುರಗಿ (ಮೀ) ಲೋಕಸಭಾ ಕ್ಷೇತ್ರಕ್ಕೆ ಏ.23 ರಂದು ನಡೆದ ಚುನಾವಣೆಯಲ್ಲಿ 6,09,411 ಪುರುಷರು, 5,74,824 ಮಹಿಳೆಯರು ಹಾಗೂ ಆರು ಇತರೆ ಮತದಾರರು ಸೇರಿದಂತೆ 11,84,241 ಮತದಾರರು ತಮ್ಮ ಮತಾಧಿಕಾರವನ್ನು ಚಲಾಯಿಸಿದ್ದು, ಶೇ.60.88 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ.

Advertisement

ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಫಜಲಪುರ, ಜೇವರ್ಗಿ, ಗುರುಮಿಠಕಲ್, ಚಿತ್ತಾ ಪುರ, ಸೇಡಂ, ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಒಟ್ಟು 19,45,291 ಜನರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಇದರಲ್ಲಿ 9,80,105 ಪುರುಷರು ಮತ್ತು 9,64,845 ಮಹಿಳೆಯರು ಹಾಗೂ 341 ಇತರರು ಸೇರಿದ್ದರು.

34-ಅಫಜಲಪುರ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,677 ಮತದಾರರು ಇದ್ದು, ಅದರಲ್ಲಿ 1,39,268 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದರಲ್ಲಿ ಪುರುಷರು-73,888, ಮಹಿಳೆಯರು-65,380 ಸೇರಿದ್ದು, ಒಟ್ಟಾರೆ ಶೇ. 62.54 ರಷ್ಟು ಮತದಾನವಾಗಿದೆ.

35-ಜೇವರ್ಗಿ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,230 ಮತದಾರರು ಇದ್ದು, ಅದರಲ್ಲಿ 1,46,165 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು 76,582, ಮಹಿಳೆಯರು-69,582 ಹಾಗೂ ಇತರೆ-01 ಸೇರಿದ್ದು, ಒಟ್ಟಾರೆ ಶೇ. 61.87 ರಷ್ಟು ಮತದಾನವಾಗಿದೆ.

39-ಗುರುಮಿಠಕಲ್: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,45,251 ಮತದಾರರು ಇದ್ದು, ಅದರಲ್ಲಿ 1,47,778 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು-73,714, ಮಹಿಳೆಯರು-74,062 ಮತ್ತು ಇತರೆ-02 ಸೇರಿದ್ದಾರೆ. ಒಟ್ಟಾರೆ ಶೇ.60.26 ರಷ್ಟು ಮತದಾನವಾಗಿದೆ.

Advertisement

40-ಚಿತ್ತಾಪುರ(ಎಸ್‌ಸಿ): ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,30,641 ಮತದಾರರು ಇದ್ದು, ಅದರಲ್ಲಿ 1,41,032 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು 72,024, ಮಹಿಳೆಯರು 69,008 ಸೇರಿದ್ದು, ಒಟ್ಟಾರೆ ಶೇ. 61.15 ರಷ್ಟು ಮತದಾನವಾಗಿದೆ.

41-ಸೇಡಂ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,353 ಮತದಾರರು ಇದ್ದು, ಅದರಲ್ಲಿ 1,47,844 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು-74,910, ಮಹಿಳೆಯರು-72,934 ಸೇರಿದ್ದು, ಒಟ್ಟಾರೆ ಶೇ. 68.33 ರಷ್ಟು ಮತದಾನವಾಗಿದೆ.

43-ಕಲಬುರಗಿ ಗ್ರಾಮೀಣ (ಎಸ್‌ಸಿ): ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,52,949 ಮತದಾರರು ಇದ್ದು, ಅದರಲ್ಲಿ 1,53,856 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು 80,134, ಮಹಿಳೆಯರು-73,721 ಹಾಗೂ ಇತರೆ-01 ಸೇರಿದ್ದಾರೆ. ಒಟ್ಟಾರೆ ಶೇ. 60.82 ರಷ್ಟು ಮತದಾನವಾಗಿದೆ.

44-ಕಲಬುರಗಿ ದಕ್ಷಿಣ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,65,175 ಮತದಾರರು ಇದ್ದು,ಅದರಲ್ಲಿ 1,51,269 ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದವರಲ್ಲಿ ಪುರುಷರು-76,979, ಮಹಿಳೆಯರು-74,289 ಹಾಗೂ ಇತರೆ-01 ಸೇರಿದ್ದು, ಒಟ್ಟಾರೆ ಶೇ. 57.04 ರಷ್ಟು ಮತದಾನವಾಗಿದೆ.

45-ಕಲಬುರಗಿ ಉತ್ತರ: ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,76,015 ಮತದಾರರು ಇದ್ದು, ಅದರಲ್ಲಿ 1,57,029 ಮತದಾರರು ಮತ ಚಲಾಯಿಸಿದ್ದಾರೆ, ಮತ ಚಲಾಯಿಸಿದವರಲ್ಲಿ ಪುರುಷರು-81,180, ಮಹಿಳೆಯರು-75,848 ಹಾಗೂ ಇತರೆ-01 ಸೇರಿದ್ದು, ಶೇ. 56.89 ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next