Advertisement

ವೈಜನಾಥರ ಮೆಹನತ್‌ ಖರ್ಗೆ ಪಾಲು: ಜಾಧವ

12:30 PM Apr 11, 2019 | Team Udayavani |

ಸೇಡಂ: ಮಾಜಿ ಸಚಿವ ವೈಜನಾಥ ಪಾಟೀಲರು ಮಾಡಿಟ್ಟ 371ನೇ (ಜೆ) ಕಲಂ ಹೆಸರಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ನಡೆಸುತ್ತಿದ್ದಾರೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಟೀಕಿಸಿದರು.

Advertisement

ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು
ಉದ್ದೇಶಿಸಿ ಮಾತನಾಡಿದ ಅವರು, ಮೆಹನತ್‌ ಕರೆ ಮುರ್ಗಿಸಾಬ್‌, ಅಂಡಾ ಖಾಯೆ ಫಕೀರಸಾಬ್‌ ಎನ್ನುವ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಶಾಯರಿಗೆ ಪ್ರತ್ಯುತ್ತರ ನೀಡಿದ ಜಾಧವ ‘ಮೆಹನತ್‌ ಕರೆ ವೈಜನಾಥ ಪಾಟೀಲ ಸಾಬ್‌, ಅಂಡಾ ಖಾಯೆ ಖರ್ಗೆ ಸಾಬ್‌’ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಸ್ವಾತಂತ್ರ್ಯ ಹೋರಾಟಗಾರನ ಹೊಟ್ಟೆಯಲ್ಲಿ ಹುಟ್ಟಿದ್ದೇನೆ. ಸಮಯ ಬಂದರೆ ಕಲಬುರಗಿ ಜನತೆಗಾಗಿ ಜೀವ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ಈ ಬಾರಿ ಕಾಲಚಕ್ರ ಬದಲಿಸುವ ಪಣತೊಟ್ಟು ಅಖಾಡಕ್ಕೆ ಇಳಿದಿದ್ದೇನೆ. ಗುಲಾಮಗಿರಿ, ದುರಾಡಳಿತ, ರಾಜ ದರ್ಬಾರ್‌ನಿಂದ ಕಲಬುರಗಿ ಜನತೆಗೆ ಮುಕ್ತಿ ಕೊಡಿಸಲು
ಬಾಬುರಾವ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ ಮತ್ತು ನಾನು ಪಣ ತೊಟ್ಟಿದ್ದೇವೆ.

ಸಂವಿಧಾನ ರಕ್ಷಣೆ ಹೆಸರಲ್ಲಿ ಮಾತನಾಡುವ ಖರ್ಗೆಗಿಂತಲೂ, ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯ ಎಂದರು.

ಕಲಬುರಗಿ ಮತ್ತು ಯಾದಗಿರಿ ಜಲ್ಲೆಯಲ್ಲೇ ಹೆಚ್ಚು ಗುಟ್ಕಾ, ತಂಬಾಕು, ಮದ್ಯ
ಮಾರಾಟವಾಗುತ್ತಿದೆ. ಇಲ್ಲಿನ ಜನರೇ ಮುಂಬೈ, ಪುಣೆ, ಹೈದ್ರಾಬಾದನತ್ತ ಕೂಲಿ ಅರಸಿ ಹೋಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಇವರ ರಕ್ಷಣೆ ಖರ್ಗೆಯಿಂದ ಆಗಿಲ್ಲ. ಸಿಮೆಂಟ್‌ ಕಾರ್ಪೋರೇಶನ್‌ ಇಂಡಿಯಾ (ಸಿಸಿಐ) ಕಾರ್ಖಾನೆ ಮುಚ್ಚಿ ವರ್ಷಗಳೇ ಕಳೆದಿವೆ. ಒಂದು ಬಾರಿಯೂ ಲೋಕಸಭೆಯಲ್ಲಿ
ಕಾರ್ಖಾನೆ ಬಗ್ಗೆ ಖರ್ಗೆ ಮಾತನಾಡಿಲ್ಲ ಎಂದು ಹರಿಹಾಯ್ದರು.

Advertisement

ಕೇಂದ್ರೀಯ ವಿಶ್ವವಿದ್ಯಾಲಯ ತಾವು ಮಾಡಿದ್ದು ಎಂದು ಬೊಬ್ಬೆ ಕೊಚ್ಚಿಕೊಳ್ಳುವ ಖರ್ಗೆ ಸತ್ಯ ಹೇಳಬೇಕು. ಆಗ ಉನ್ನತ ಶಿಕ್ಷಣ
ಸಚಿವರಾಗಿದ್ದ ಬಿ.ಎಚ್‌. ಶಂಕರಮೂರ್ತಿ ಕೇಂದ್ರೀಯ ವಿವಿ ಮಾಡಿದ್ದು. ಸ್ಥಳ ಬಸವರಾಜ ಬೊಮ್ಮಾಯಿ ಕೊಟ್ಟಿದ್ದು. ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಕೋಲಿ ಸಮಾಜವನ್ನು ಎಸ್ಟಿ ಮಾಡಿಯೇ ತೀರುತ್ತೇನೆ ಎಂದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಪರ್ವತರೆಡ್ಡಿ ಪಾಟೀಲ ನಾಮವಾರ, ಪುರಸಭೆ ಮಾಜಿ ಸದಸ್ಯ ಎಕ್ಬಾಲ್‌ಖಾನ್‌, ಭೀಮರಾವ ಕೋಡ್ಲಾ, ನಾಗರೆಡ್ಡಿ ಪಾಟೀಲ, ಶ್ರೀನಾಥ ಪಿಲ್ಲಿ,
ಜಿಪಂ ಸದಸ್ಯ ಶರಣು ಮೆಡಿಕಲ್‌, ಓಂಪ್ರಕಾಶ ಪಾಟೀಲ ಇನ್ನಿತರರು ವೇದಿಕೆಯಲ್ಲಿದ್ದರು.

ಮಾಜಿ ಸಚಿವ ದಿವಂಗತ ಖಮರುಲ್‌ ಇಸ್ಲಾಂ ನಾನು
ಉತ್ತಮ ಸ್ನೇಹಿತರು. ಅವರ ಬಗ್ಗೆ ಅಸಭ್ಯವಾಗಿ ಮನಸ್ಸಿಗೆ ನೋವುಂಟು
ಮಾಡುವಂತೆ ನಾನು ಎಂದೂ ಮಾತನಾಡಿಲ್ಲ. ದಾವಣಗೆರೆಯಲ್ಲಿ
ರಾಜಕೀಯದ ಬಗ್ಗೆ ನಾನು ಮಾತನಾಡಿದ್ದೆ. ಆದರೆ ಈಗಿರುವವರು
(ಶಾಸಕ ಖನೀಜ ಫಾತಿಮಾ) ರಾಜಕೀಯ ದುರುದ್ದೇಶಕ್ಕಾಗಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಖಮರುಲ್‌ ಇಂದು ಜೀವಂತ ಇದ್ದಿದ್ರೆ, ನಮ್ಮ ಜೊತೆಯಲ್ಲೇ ಇರ್ತಿದ್ರು.
ಮಾಲೀಕಯ್ಯ ಗುತ್ತೇದಾರ,
ಮಾಜಿ ಶಾಸಕ, ಅಫಜಲಪುರ

Advertisement

Udayavani is now on Telegram. Click here to join our channel and stay updated with the latest news.

Next