ಕಲಬುರಗಿ: ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಯ ಕೋವಿಡ್ ಲ್ಯಾಬ್‌ನಲ್ಲಿ ಜಿಲ್ಲೆಗೆ ಬಂದಿರುವ ಕಾರ್ಮಿಕರು ಸೇರಿ ವಲಸಿಗರಿಗೆ ರ್ಯಾಪಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ತುರ್ತಾಗಿ ಅಗತ್ಯವಿದ್ದ ಕಿಟ್ (ರಾಸಾಯನಿಕ ಪದಾರ್ಥ) ಗಳನ್ನು ಸ್ವತಃ ಸಂಸದ ಡಾ| ಉಮೇಶ ಜಾಧವ ಬೆಂಗಳೂರಿನಿಂದ ಕಲಬುರಗಿ ತೆಗೆದುಕೊಂಡು ಆಗಮಿಸುತ್ತಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ವೈರಾಣು ಪ್ರಯೋಗಾಲಯದಿಂದ ಜಿಮ್ಸ್ ಗೆ ತರಲಾಗುತ್ತಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಂಜುಗಡ್ಡೆ (ಹಾರ್ಡ್ ಐಸ್) ಯಲ್ಲಿಟ್ಟು, 16 ಗಂಟೆಯೊಳಗೆ ಕೊಂಡೊಯ್ಯಲೇಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಜಾಧವ ಅವರೇ ಅವನ್ನು ತರಲು ಮುಂದಾಗಿದ್ದಾರೆ.
ನಾಲ್ಕು ಬಾರಿ ಮನವಿ: ಆರ್‌ಎನ್‌ಎ ಎಕ್ರ್ವಾಕ್ಷನ್ ಕಿಟ್-5000 ಹಾಗೂ ಎ ಸ್ಟಾರ್ ಫಾರ್ಟಿಟ್ಯೂಟ್ 2.0 ಪಿಸಿಆರ್ ಕಿಟ್-5000 ಕಳುಹಿಸುವಂತೆ ಜಿಮ್ಸ್ ಎನ್‌ಐವಿಗೆ ಈಗಾಗಾಲೇ ನಾಲ್ಕು ಬಾರಿ ಮನವಿ ಮಾಡಿತ್ತು. ಇದನ್ನು ಎನ್‌ಐವಿ ಕಿವಿಗಾಕಿಕೊಂಡಿರಲಿಲ್ಲ. ಯಾಕೆಂದರೆ, ರಾಜ್ಯದಲ್ಲಿ ಒಟ್ಟು 17 ಲ್ಯಾಬ್‌ಗಳಿದ್ದು, ಸಹಜವಾಗಿ ಅದರ ಮೇಲೆ ತೀವ್ರ ಒತ್ತಡವಿತ್ತು.
ಫೋನ್‌ನಲ್ಲಿ ಮನವಿ: ಕೆಲಸ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಸಂಸದ ಜಾಧವ ಅವರಿಗೆ ಜಿಮ್ಸ್‌ನಿಂದ ಅಧಿಕಾರಿಗಳು ಪೋನ್ ಮೂಲಕ ಮನವಿ ಮಾಡಿದ್ದರು. ತುರ್ತು ಸಂದರ್ಭ ಅರಿತ ಸಂಸದರು, ತಮ್ಮೆಲ್ಲ ಕೆಲಸ- ಕಾರ್ಯ ಬದಿಗೊತ್ತಿ ಖುದ್ದಾಗಿ ನಿಮ್ಹಾನ್ಸ್ ಬಳಿ ಇರುವ ಎನ್ ಐವಿಗೆ ತೆರಳಿ ಭಾರತೀಯ ವೈದ್ಯಕೀಯ
ಸಂಶೋಧನಾ ಮಂಡಳಿ (ಐಸಿಎಂಆರ್, ನವದೆಹಲಿ) ಕಚೇರಿಗೆ ಕರೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೊಂದಿಗೆ ಮಾತನಾಡಿ ಎನ್‌ಐವಿ ವೈದ್ಯರಿಗೆ ನಿರ್ದೇಶನ ಕೊಡಿಸಿದರು. ಬಳಿಕ ಕಿಟ್
ಗಳನ್ನು ಪಡೆದರು
8000 ಟೆಸ್ಟ್ ಸಾಮರ್ಥ್ಯ: ಇದೀಗ ಆರ್.ಎನ್.ಎ ಎಕ್ರ್ವಾಕ್ಷನ್ 5000 ಪೈಕಿ 1728 ಹಾಗೂ ಹಾಗೂ ಎ ಸ್ಟಾರ್ ಫಾರ್ಟಿಟ್ಯೂಡ್ 2.0 ಪಿಸಿಆರ್ 5000 ಪೈಕಿ 2000 ಕಿಟ್ ಪೂರೈಸಲಾಗಿದೆ. ಇದರಿಂದ 8 ಸಾವಿರ ಪ್ರಕರಣಗಳ ಪರೀಕ್ಷೆ ನಡೆಸಬಹುದಾಗಿದೆ ಎಂದು ಡಾ| ಉಮೇಶ ಜಾಧವ ತಿಳಿಸಿದ್ದಾರೆ. ಒಟ್ಟು 50 ಲಕ್ಷ ರೂ. ಮೌಲ್ಯದ ಕಿಟ್‌ಗಳಾಗಿದ್ದು, ಜಿಲ್ಲೆಗೆ ಬಂದಿರುವ ಕಾರ್ಮಿಕರು ಹಾಗೂ ವಲಸಿಗರ ರ್ಯಾಪಿಡ್ ಪರೀಕ್ಷೆಗೆ ಇದು ಉಪಯೋಗವಾಗಲಿದೆ.
ಈ ಹಿಂದೆಯೂ (18.03.2020) ಜಿಮ್ಸ್ ಲ್ಯಾಬ್ ಪ್ರಾರಂಭಿಸುವಾಗ ಸಂಸದರು, ನವದೆಹಲಿಯಲ್ಲಿ
ಐಸಿಎಂಆರ್ ಮುಖ್ಯಸ್ಥರೊಂದಿಗೆ ಮಾತನಾಡಿ ಲ್ಯಾಬ್‌ಗ ಸಂಬಂಧಿಸಿದ ರೀ ಏಜೆಂಟ್ ತರಿಸುವಲ್ಲಿ ಶ್ರಮವಹಿಸಿದ್ದರು ಎಂಬುದನ್ನು ಸ್ಮರಿಸಬಹುದು.