Advertisement

ಕಬ್ಬಿಣದ ಸ್ರ್ಕಾಪ್‌ ಸಾಗಾಟ: ಲಾರಿ ವಶಕ್ಕೆ

12:04 PM May 11, 2020 | Naveen |

ಕಲಬುರಗಿ: ಅಧಿಕೃತ ದಾಖಲೆಗಳು ಹಾಗೂ ಇ-ವೇ ಬಿಲ್‌ ಇಲ್ಲದೇ ಕಲಬುರಗಿಯಿಂದ ಮಹಾರಾಷ್ಟ್ರಕ್ಕೆ 20 ಟನ್‌ ಕಬ್ಬಿಣದ ಸ್ರ್ಕಾಪ್‌ ಸಾಗಿಸುತ್ತಿದ್ದ ಲಾರಿಯನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ಅಕ್ರಮವಾಗಿ ಕಬ್ಬಿಣದ ಸ್ರ್ಕಾಪ್‌ ರವಾನೆ ವಿಷಯ ತಿಳಿದು ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಾರಿ ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ಜಾರಿಯಲ್ಲಿದೆ. ಅಲ್ಲದೆ, ಕಲಬುಗರಿ ವಿಭಾಗದಿಂದ 1.61 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಇಲಾಖೆ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next